ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ತಿಹಾರ್​​ ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ತಮ್ಮ ಗಡ್ಡ ತೆಗೆಸಿದ್ದಾರೆ. ಸುಮಾರು ಹತ್ತು ತಿಂಗಳ ಬಳಿಕ ಗಡ್ಡ ತೆಗೆಸಿರುವ ಡಿ.ಕೆ ಶಿವಕುಮಾರ್​​ ಅವರದ್ದೇ ಸದ್ಯ ಭಾರೀ ಸುದ್ದಿ.

ಹೌದು, ಕಾಂಗ್ರೆಸ್​ ಹೈಕಮಾಂಡ್​ ರಾಹುಲ್​​ ಗಾಂಧಿಯವರನ್ನು ಭೇಟಿ ಮಾಡಲು ಡಿ.ಕೆ ಶಿವಕುಮಾರ್​​​ ಗಡ್ಡ ತೆಗೆಸಿದ್ದಾರಂತೆ. ತಾವು ಅಂದುಕೊಂಡ ಕಾರ್ಯವೂ ಯಶಸ್ವಿಯಾದ್ದರಿಂದ ರಾಮನಗರದ ಬಂಡೆ ಗಡ್ಡ ಶೇವ್​​ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಈ ಹಿಂದೆ ನಾನು ಗಡ್ಡ ಬಿಟ್ಟಿರುವುದರ ಹಿಂದೆ ರಹಸ್ಯ ಇದೆ. ನಾನು ಅಂದುಕೊಂಡ ಕಾರ್ಯ ನೆರವೇರಿದಾಗ ಗಡ್ಡ ತೆಗೆಸುವೆ ಎಂದಿದ್ದರು.

The post ಜೈಲಿಗೆ ಹೋಗಿ ಬಂದ ಮೇಲೆ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿ.ಕೆ ಶಿವಕುಮಾರ್​​ appeared first on News First Kannada.

Source: newsfirstlive.com

Source link