ಬೆಂಗಳೂರು: ಕೊಲೆ ಆರೋಪದ ಮೇಲೆ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರೋ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನುಮತಿ ಕೋರಿದ್ದಾರೆ.

ವಿನಯ್​ ಭೇಟಿಗಾಗಿ ಡಿಕೆಎಸ್​, ತನ್ನ ಪರ ವಕೀಲ ಮಂಜುನಾಥ್ ಎಂ.ಆರ್ ಕಡೆಯಿಂದ ಇ‌ಮೇಲ್ ಮೂಲಕ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ  ಆರೋಪಿಯಾಗಿದ್ದಾರೆ.

ಇಂದು ಜನಪ್ರತಿನಿಧಿ ನ್ಯಾಯಾಲಯ ಡಿಕೆ ಶಿವಕುಮಾರ್ ಅವರ ಅರ್ಜಿಯ ವಿಚಾರಣೆ ನಡೆಸಲಿದೆ. ವಿನಯ್ ಅರೆಸ್ಟ್​​ ಆದ ಬಳಿಕ ಮೊದಲ ಬಾರಿಗೆ ಡಿಕೆ ಶಿವಕುಮಾರ್​​ ಭೇಟಿಗೆ ಮುಂದಿದ್ದಾರೆ. ಇಂದು ಕೋರ್ಟ್ ಅವರಿಗೆ ಅನುಮತಿ ನೀಡುತ್ತಾ ಇಲ್ವಾ ಅನ್ನೋದನ್ನ ಕಾದುನೋಡಬೇಕು. ಡಿ.ಕೆ ಶಿವಕುಮಾರ್, ವಿನಯ್ ಕುಲಕರ್ಣಿಯನ್ನ ಭೇಟಿಯಾಗುತ್ತಿರುವುದರ ಹಿಂದಿನ ಉದ್ದೇಶವೇನು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

The post ಜೈಲಿನಲ್ಲಿರೋ ಮಾಜಿ ಸಚಿವ ವಿನಯ್ ಭೇಟಿಗೆ ಅನುಮತಿ ಕೋರಿ ಡಿ.ಕೆ ಶಿವಕುಮಾರ್ ಅರ್ಜಿ appeared first on News First Kannada.

Source: newsfirstlive.com

Source link