ಜೈಲಿನಲ್ಲಿ ಶಾರೂಖ್ ಪುತ್ರ ‘ಆರ್ಯನ್ ದಿನಚರಿ’ -ಅರ್ಥುರ್ ಜೈಲಿನ ಇತಿಹಾಸ ನಿಮಗೆ ಗೊತ್ತಾ..?

ನವದೆಹಲಿ: ಆರ್ಯನ್ ಖಾನ್.. ಕಿಂಗ್​​ ಕಾನ್​​, ಬಾಲಿವುಡ್ ಬಾದ್​ ಶಾ, ಭಾರತದ ನಂ.1 ಶ್ರೀಮಂತ ನಟ ಶಾರುಖ್ ಖಾನ್ ಪುತ್ರ. ಬಾರ್ನ್​​ ವಿತ್ ಗೋಲ್ಡನ್ ಸ್ಪೂನ್ ಅನ್ನೋದು ಆರ್ಯನ್​​ ಪಾಲಿನದ್ದು. ಸಿರಿತನದಲ್ಲೇ ಹುಟ್ಟಿ ಬೆಳೆದವ ಈಗ ಜೈಲು ಪಾಲಾಗಿದ್ದಾರೆ.

ಕಳೆದ ವಾರ ವೀಕೆಂಡ್ ಮಸ್ತಿ ಮಾಡಲು ಸಮುದ್ರದ ಮಧ್ಯದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ನಶೆ ಪಾರ್ಟಿಗೆ ಹೋಗಿದ್ದ. ಆದ್ರೆ ಈ ವೀಕೆಂಡ್​​​ ಅದ್ರ ಕಂಪ್ಲೀಟ್ ಉಲ್ಟಾ ಆಗಿದ್ದು ನಾಲ್ಕು ಗೋಡೆಗಳ ನಡುವೆ, ಸೆರೆವಾಸ ಅನುಭವಿಸ್ತಿದ್ದಾನೆ. ಆ ಒಂದು ಪಾರ್ಟಿ ಕಿಂಗ್ ಕಾನ್ ಕುಟುಂಬವನ್ನ ಸಂಕಷ್ಟಕ್ಕೆ ತಳ್ಳಿದ್ರೆ, ಇತ್ತ ಪುತ್ರ ಆರ್ಯನ್​​​ನನ್ನ ಕನಸಲ್ಲೂ ನೆನೆಸದ ಸೆರೆವಾಸಕ್ಕೆ ದೂಡಿದೆ.

ಜಾಮೀನು ಅರ್ಜಿ ವಜಾ ಆದ ಕಾರಣ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್​​​​ನನ್ನ ಮುಂಬೈನ ಆರ್ಥುರ್​ ರೋಡ್ ಜೈಲಿನಲ್ಲಿರಿಸಲಾಗಿದೆ. ಹೇಗಿತ್ತು ಗೊತ್ತಾ ಆರ್ಯನ್​​​​ನ ಆ ಮೊದಲ ದಿನದ ಜೈಲುವಾಸ.

ಇದನ್ನೂ ಓದಿ: ಶಾರುಖ್ ಪುತ್ರನಿಗೆ ಜಾಮೀನಿಲ್ಲ; ಆರ್ಯನ್​ ವಾಟ್ಸಾಪ್​​ ಚಾಟ್​​ ಬಗ್ಗೆ NCB ವಕೀಲರ ಸ್ಫೋಟಕ ಹೇಳಿಕೆ

ಜೈಲಿನಲ್ಲಿ ಆರ್ಯನ್ ದಿನಚರಿ

 • ಮೊದಲ ಮಹಡಿಯ ಬ್ಯಾರಕ್ ನಂ.1ರಲ್ಲಿ ಆರ್ಯನ್​​​​​​​​ ಇರಿಸಲಾಗಿದೆ
 • ಜೈಲು ನಿಯಮದಂತೆ 3 – 5 ದಿನ ಕಾಲ ಕ್ವಾರಂಟೈನ್​​​ನಲ್ಲಿ ಇರಬೇಕು
 • ಕ್ವಾರಂಟೈನ್ ಇರುವುದರಿಂದ ಬ್ಯಾರಕ್​​​​​​​ನ ಹೊರಗೆ ಓಡಾಡುವಂತಿಲ್ಲ
 • ವಿಚಾರಣೆ ಎದುರಿಸುತ್ತಿರುವುದರಿಂದ ಜೈಲು ಸಮವಸ್ತ್ರ ಇರುವುದಿಲ್ಲ
 • ವಿಶೇಷ ಸೌಲಭ್ಯವಿಲ್ಲ, ಸಾಮಾನ್ಯ ವಿಚಾರಣಾಧೀನ ಕೈದಿಯಂತಿರಬೇಕು
 • ಬೆಳಗ್ಗೆ 6 ಗಂಟೆಗೆ ಏಳಬೇಕು, 7 ಗಂಟೆಗೆ ಬ್ರೇಕ್​​ಫಾಸ್ಟ್​ ನೀಡಲಾಗುತ್ತೆ
 • ಜೈಲಿನಲ್ಲಿ ಎಂದಿನಂತೆ ತಯಾರಿಸುವ ಊಟ ಮಾತ್ರ ಮಾಡಬೇಕು
 • ಹೊರಗಿನಿಂದ ಊಟ ತರಿಸಿಕೊಂಡು ತಿನ್ನಲು ಅವಕಾಶ ಇರುವುದಿಲ್ಲ
 • ಕ್ಯಾಂಟಿನ್ ಊಟ ಬೇಕೆಂದರೆ ಹಣ ಕೊಟ್ಟು ಖರೀದಿ ಮಾಡಬಹುದು
 • ಬೆಳಗ್ಗೆ 11 ಗಂಟೆಗೆ ಮಧ್ಯಾಹ್ನದ ಊಟ – ಚಪಾತಿ, ಸಬ್ಜಿ, ದಾಲ್, ರೈಸ್​​​
 • ಸಂಜೆ 6 ಗಂಟೆಗೆ ಆರ್ಯನ್​​​ಗೆ ರಾತ್ರಿಯ ಊಟವನ್ನು ನೀಡಲಾಗುತ್ತದೆ

ಅರ್ಥುರ್ ರೋಡ್​​​ ಜೈಲು


ಮುಂಬೈನ ಕೇಂದ್ರ ಕಾರಾಗೃಹ ಅಥವಾ ಅರ್ಥುರ್ ರೋಡ್​​​ ಹೆಸರಿನ ಈ ಜೈಲು 1926ರಲ್ಲಿ ಸ್ಥಾಪನೆಯಾಗಿದ್ದು, ಮುಂಬೈನ ಅತೀ ದೊಡ್ಡ ಹಾಗೂ ಹಳೆಯ ಜೈಲಾಗಿದೆ. ಬಾಲಿವುಡ್​ ನಟ ಸಂಜಯ್ ದತ್ 1993ರ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಈ ಜೈಲಿನಲ್ಲಿ ದಿನ ಕಳೆದಿದ್ರು. ಇನ್ನು 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರುವಾರಿ ಅಬು ಸಲೇಮ್​​​ ಹಾಗೂ 2008ರ ಮುಂಬೈ ಟೆರರಿಸ್ಟ್​ ಅಟ್ಯಾಕ್​​​​​​ನಲ್ಲಿ ಸೆರೆಸಿಕ್ಕ ಉಗ್ರ ಅಜ್ಮಲ್ ಕಸಬ್​​​ನನ್ನೂ ಇದೇ ಜೈಲಿನಲ್ಲಿರಲಾಗಿತ್ತು. ಇನ್ನು ಈ ಜೈಲಿಗೆ ಬರಲು ನಿರಾಕರಿಸಿ ನೀರವ್ ಮೋದಿ, ವಿಜಯ್ ಮಲ್ಯಾ ಯುಕೆ ಕೋರ್ಟ್​​​​​ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಶಾರೂಖ್ ಪುತ್ರ ಆರ್ಯನ್ ಖಾನ್​ಗೆ ಜೈಲೇ ಗತಿ.. ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್

ಶ್ರೀಮಂತ ಸೆಲೆಬ್ರಿಟಿಯ ಪುತ್ರನಾಗಿ ಸುಖದ ಸುಪ್ಪತ್ತಿಗೆಯಲ್ಲಿ ಮೆರೆದಿದ್ದ ಆರ್ಯನ್ ಖಾನ್​​​​​ಗೆ ಆ ಒಂದು ಪಾರ್ಟಿ ಅನಿರೀಕ್ಷಿತ ಟ್ವಿಸ್ಟ್​ ಕೊಟ್ಟಿದೆ. ಕಳೆದ ವೀಕೆಂಡ್​​​ ಅಮಲಿನ ಲೋಕದ ಐಷಾರಾಮಿ ಹಡಗಿನಲ್ಲಿ ತೇಲುತ್ತಿದ್ದವ ಈ ವೀಕೆಂಡ್​​​​ ಕುಖ್ಯಾತಿಗಳು, ಟೆರರಿಸ್ಟ್​​ಗಳನ್ನ ಇರಿಸಿದ್ದ ಜೈಲು ಸೇರಿದ್ದಾನೆ. ಸೋಮವಾರವರೆಗೆ ಜೈಲು ವಾಸ ಬಿಟ್ಟು ಬೇರೆ ಮಾರ್ಗ ಇಲ್ಲ. ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ಬಳಿಕವಾದ್ರೂ ಆರ್ಯನ್​​​​ಗೆ ಜೈಲಿಂದ ಮುಕ್ತಿ ಸಿಗುತ್ತಾ ಕಾದು ನೋಡಬೇಕಿದೆ.

News First Live Kannada

Leave a comment

Your email address will not be published. Required fields are marked *