ಜೈಲಿನಿಂದ ರಿಲೀಸ್ ಆದ ಬಳಿಕ ಮೊದ್ಲ ಬಾರಿಗೆ ಶಿಲ್ಪಾಶೆಟ್ಟಿಯೊಂದಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕ ರಾಜ್​ ಕುಂದ್ರಾ


ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಕಳೆದ ಕೆಲ ತಿಂಗಳ ಹಿಂದೆ ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದಡಿ ಬಂಧನವಾಗಿ ಒಂದು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ತಿಂಗಳ ಬಳಿಕ ರಾಜ್​ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಹಿಮಾಚಲ ಪ್ರದೇಶದ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ.

ಹೌದು, ಜೈಲಿನಿಂದ ಬಿಡುಗಡೆಯಾದ ಬಳಿಕ ರಾಜ್​ ಕುಂದ್ರಾ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ . ಇನ್ನು ರಾಜ್​ ಕುಂದ್ರಾ ಜೈಲಿನಿಂದ ಬಂದ ಮೇಲೆ ಶಿಲ್ಪಾ ಕೂಡ ತಮ್ಮ ಪತಿ ಕುರಿತು ಯಾವುದೇ ಪೋಸ್ಟ್​ ಅಥವಾ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರಲಿಲ್ಲ.. ಹೀಗಾಗಿ ಶಿಲ್ಪಾ ತಮ್ಮ ಪತಿಯಿಂದ ವಿಚ್ಛೇಧನ ಪಡೆಯಲಿದ್ದಾರೆ ಎಂಬ ವದಂತಿಗಳು ಬಿಟೌನ್​ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಆದ್ರೆ ಅದಕ್ಕೆಲ್ಲ ಸ್ವತಃ ಶಿಲ್ಪಾ ಶೆಟ್ಟಿಯವರೇ ಫುಲ್​ಸ್ಟಾಪ್​ ಇಟ್ಟಿದ್ದಾರೆ.

ರಾಜ್​ ಕುಂದ್ರಾ ಜೈಲಿನಿಂದ ರಿಲೀಸ್​ ಆದ ಬಳಿಕ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ತಮ್ಮ ಪತಿಯ ಜೊತೆ ಹಿಮಾಚಲ ಪ್ರದೇಶದ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದ್ದಾರೆ. ಸದ್ಯ ಶಿಲ್ಪಾ ಮತ್ತು ರಾಜ್​ ಕುಂದ್ರಾ ಅವರ ಪೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

News First Live Kannada


Leave a Reply

Your email address will not be published.