‘ಜೈ ಶ್ರೀರಾಮ್ ಅನ್ನೋರು ರಾಕ್ಷಸರು’ -ಕಾಂಗ್ರೆಸ್​ ನಾಯಕ ರಶೀದ್ ಅಲ್ವಿ ಹೇಳಿಕೆ


ನವದೆಹಲಿ: ರಾಮರಾಜ್ಯ, ಜೈ ಶ್ರೀರಾಮ್ ಘೋಷಣೆ ಕೂಗುವವರು ಋಷಿಗಳಲ್ಲ, ರಾಕ್ಷಸರು ಎಂದು ಕಾಂಗ್ರೆಸ್​ ನಾಯಕ ರಶೀದ್ ಅಲ್ವಿ ನಾಲಿಗೆ ಹರಿಬಿಟ್ಟಿದ್ದಾರೆ. ಇವರ ಈ ಹೇಳಿಕೆಗೆ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ರಶೀದ್​ ಅಲ್ವಿ.. ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಅನ್ನೋದು ನಮಗೂ ಇದೆ. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರದಿಂದಿರಬೇಕು ಎಂದಿದ್ದಾರೆ.

ಭಾರತ ದೇಶದಲ್ಲಿ ರಾಮರಾಜ್ಯ ಇದೆ ಅಂತಾ ಹೇಳ್ತೀವಿ. ಆದರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆಯನ್ನ ಹರಿಬಿಟ್ಟಿದ್ದಾರೆ.

ರಶೀದ್ ಅಲ್ವಿ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ‘ಸಲ್ಮಾನ್ ಖುರ್ಷಿದ್ ನಂತರ ಈಗ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಜೈ ಶ್ರೀರಾಮ್ ಹೇಳುವವರನ್ನು ನಿಶಾಚರರು ಎಂದು ಕರೆಯುತ್ತಿದ್ದಾರೆ. ರಾಮಭಕ್ತರ ಬಗ್ಗೆ ಕಾಂಗ್ರೆಸ್ಸಿನ ಚಿಂತನೆಗಳಲ್ಲಿ ಎಷ್ಟು ವಿಷ ಬೆರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *