ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗ ಮೇಘಾ ಶೆಟ್ಟಿ ಕೊರೊನಾ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

‘ಎಲ್ಲರೂ ಸೇಫ್​ ಆಗಿದ್ದೀರಾ ಅಂತ ನಾನು ಅಂದುಕೊಂಡಿದ್ದೀನಿ. ಮತ್ತೆ ಲಾಕ್​ಡೌನ್​ ಆಗಿದೆ, ಮತ್ತೆ ನಾವೆಲ್ಲರೂ ಮನೆಯಲ್ಲಿರುವ ಪರಿಸ್ಥಿತಿ ಬಂದಿದೆ. ಏನೂ ಮಾಡೋದಕ್ಕೆ ಆಗಲ್ಲ, ನಾವೆಲ್ಲಾ ಮನೆಯಲ್ಲಿ ಇರಲೇಬೇಕು. ನಾವೆಲ್ಲರೂ ಈ ಲಾಕ್​ಡೌನ್​ನ ಚಾಚೂ ತಪ್ಪದೇ ಫಾಲೋ ಮಾಡೋಣ. ಮಾಸ್ಕ್​ ಧರಿಸೋದು, ಸ್ಯಾನಿಟೈಸರ್​ ಬಳಸೋದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದನ್ನ ಫಾಲೋ ಮಾಡ್ಕೊಂಡು ಬಂದಿದ್ದೀವಿ. ಇನ್ನೂ ಅಚ್ಚುಕಟ್ಟಾಗಿ ಪಾಲಿಸೋಣ. ಹಾಗೇ ಅದರ ಜೊತೆಗೆ ಎಲ್ಲರೂ ಕೂಡ ದಯವಿಟ್ಟು ವ್ಯಾಕ್ಸಿನೇಷನ್​ ಹಾಕಿಸಿಕೊಳ್ಳಿ.ವ್ಯಾಕ್ಸಿನೇಷನ್​ ಹಾಕಿಸ್ಕೊಂಡು ಎಲ್ಲರೂ ಆರೋಗ್ಯವಾಗಿರಿ. ಸ್ಟೇ ಹೋಮ್​, ಸ್ಟೇ ಸೇಫ್​ ಅಂತ ಜನರಲ್ಲಿ ಈ ಕೊರೊನಾ ಸಂದರ್ಭದಲ್ಲಿ ಮೇಘಾ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಗುರುತಿಸಿಕೊಂಡ ಮೇಘಾ ಶೆಟ್ಟಿ, ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ‘ತ್ರಿಬಲ್​ ರೈಡಿಂಗ್’​ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಮೇಘಾ ಶೆಟ್ಟಿ ಒಬ್ಬರಾಗಿದ್ದಾರೆ.

 

The post ಜೊತೆ ಜೊತೆಯಲಿ ಎಲ್ಲರೂ ಇದನ್ನು ಪಾಲಿಸೋಣ ಅಂದ್ರು ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ appeared first on News First Kannada.

Source: newsfirstlive.com

Source link