ಬಿಗ್​ ಬಾಸ್​ನ ಜೋಡಿ ಹಕ್ಕಿಗಳು ಕಿತ್ತಾಡಿದ್ದಾರೆ. ನೀನಾ ನಾನಾ ಟಾಸ್ಕ್​ಗಳನ್ನು ಆಡಲು ಸ್ಪರ್ಧಿಗಳು ಹೆಸರಿಗೆ ತಕ್ಕಂತೆ ನೀನಾ ನಾನಾ ಎನ್ನುತ್ತಿದ್ದಾರೆ. ನಿನ್ನೆಯ ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಕಿತ್ತಾಡಿದ್ದಾರೆ.

ಕೆಸರಿನಲ್ಲಿ ಮುತ್ತು ಹುಡುಕುವ ಟಾಸ್ಕ್​ನಲ್ಲಿ ಗ್ಲೌಸ್​ನ್ನ ಎತ್ತಿಕೊಳ್ಳಲಿಕ್ಕೆ ಶುಭಾ, ವೈಷ್ಣವಿ, ದಿವ್ಯಾ ಯು ನಿಂತಿರ್ತಾರೆ. ಆಗ ಮಂಜು, ಯಾಕೆ ಅಲ್ಲೇ ನಿಂತ್ಕೊಂಡಿದ್ದೀರಾ? ಅಂತಾ ಕೇಳ್ತಾರೆ. ನಾವು ಟಾಸ್ಕ್​ ಆಡ್ಬೇಕು ಅದಕ್ಕೆ ನಿಂತಿದ್ದೀವಿ. ಬೇಕಾದ್ರೇ ನೀವೂ ನಿಲ್ಲಬಹುದು ಎಂದು ಹೇಳ್ತಾರೆ. ಆಗ ಅರವಿಂದ್​, ಎಲ್ಲಾ ಗೇಮ್​ನಲ್ಲಿಯೂ ಫೇರ್​ ಆಗಿರಬೇಕು ಅಂತಾ ಹೇಳ್ತಿರ್ತಿರಾ.. ಈಗ ನೀವು ಆಡ್ತಿರೋದು ಫೇರ್​ ಗೇಮ್​ ಎಂದು ಟೀಸ್​ ಮಾಡ್ತಾರೆ.

ಇದಕ್ಕೆ ಶುಭಾ, ಬಿಟ್ಕೊಡೊಣ ಬಾ ಅಂತಾರೆ.. ಆದ್ರೆ ದಿವ್ಯಾ, ನಾನು ಟಾಸ್ಕ್​ ಆಡ್ಬೇಕು. ನಾನ್​ ಯಾಕೆ ಬಿಟ್ಕೊಡಬೇಕು. ಬೇಕಾದ್ರೆ ಅವರು ಬಂದು ವೇಯ್ಟ್​ ಮಾಡಿ ಆಡ್ಲಿ ಎನ್ನುವಾಗ ಕೇಳಿಸದಂತೆ ನಟಿಸಿದ ಅರವಿಂದ್​, ಇನ್ನೊಂದು ಸಾರಿ ಹೇಳು ನೋಡುವಾ ಎಂದು ಮೂರು ಬಾರಿ ಅದೇ ಪ್ರಶ್ನೆ ಕೇಳ್ತಾರೆ. ಅಷ್ಟರಲ್ಲಿ ಬಜರ್​​ ಆಗುತ್ತೆ.

ಟಾಸ್ಕ್​ ಮುಗಿದ ಮೇಲೆ ದಿವ್ಯಾ ಅರವಿಂದ್​ನನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ. ಸೋಫಾ ಮೇಲೆ ಒಬ್ಬನೇ ಕುಳಿತಿದ್ದ ಅರವಿಂದ್​, ದಿವ್ಯಾಳನ್ನು ನೋಡಿ ಸುಮ್ಮನಾಗ್ತಾನೆ. ಆಗ ದಿವ್ಯಾ ಯಾಕೆ ಬೇಜಾರ್ ಆಯ್ತಾ, ಮಾತಾಡಲ್ವಾ ಅಂತಾಳೆ. ಅರವಿಂದ್​.. ಇಲ್ಲಾ ಸದ್ಯಕ್ಕೆ ನಂಗೆ ಮಾತಾಡೋಕೆ ಇಂಟ್ರಸ್ಟ್​ ಇಲ್ಲ ಅಂತಾನೆ. ಇದಕ್ಕೆ ದಿವ್ಯಾ ಸರಿ ಎಂದು ಎದ್ದು ಹೋಗ್ತಾಳೆ.

ಈ ನಡುವೆ ಇನ್ನೊಂದು ಇಂಟ್ರಸ್ಟಿಂಗ್​ ವಿಷಯ ನಡೆಯುತ್ತೆ. ಅದೇ ಮಂಜು, ಪ್ರಶಾಂತ್​​ ಸಂಬರಗಿ ಮತ್ತೆ ಕಿತ್ತಾಡಿದ್ದಾರೆ. ಹಿಂದೆ ಏಫ್ರಾನ್​ ವಿಚಾರದಲ್ಲಿ ಕಿತ್ತಾಡಿಕೊಂಡಿದ್ರು. ಈಗ ಗ್ಲೌಸ್​ ತೂಗೊಳ್ಳೋ ವಿಷಯಕ್ಕೆ ಹಗ್ಗಜಗ್ಗಾಟ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಗ್ಲೌಸ್​ ತೊಗೋತಾರೆ. ಆದ್ರೆ ಮಂಜು ಕೊಂಚ ಮುಂದೆ ಇರ್ತಾರೆ. ಪ್ರಶಾಂತ್​ ಬಿಟ್ಟುಕೊಡುವುದಿಲ್ಲ. ಆಗ ಸ್ವಲ್ಪ ಹೊತ್ತು ಇಬ್ಬರ ನಡುವೆ ಜಟಾಪಟಿ ಆಗುತ್ತದೆ. ಕೊನೆಗೆ ಇಬ್ಬರೂ ತಮ್ಮ ಶಕ್ತಿ ಪ್ರದರ್ಶನ ಮಾಡ್ತಾರೆ. ಇದ್ರಲ್ಲಿ ಮಂಜು ಪ್ರಶಾಂತರನ್ನ ತಳ್ಳಿ ಗ್ಲೌಸ್​ ಪಡೆಯುತ್ತಾರೆ.

ಒಟ್ನಲ್ಲಿ ದಿವ್ಯಾ, ಅರವಿಂದ್ ನಡುವೆ ಬಿರುಕು ಮೂಡಿದೆ. ಇನ್ನೇನು ಕೆಲವೇ ವಾರಗಳು ಉಳಿದಿದ್ದು, ಗೆಲ್ಲಬೇಕೆಂಬ ಛಲದಲ್ಲಿ ಹತ್ತಿರ ಇರುವವರು ದೂರ ಆಗ್ತಿದ್ದಾರೆ. ದೂರ ಇರುವವರು ಇನ್ನೂ ಮಿಂಗಲ್​ ಆಗೋಕೆ ಟ್ರೈ ಮಾಡ್ತಿದ್ದಾರೆ. ​

The post ಜೋಡಿಹಕ್ಕಿಗಳ ಮುನಿಸು; ದಿವ್ಯಾ ಮಾತು ಕೇಳುತ್ತಿಲ್ಲ, ಅರವಿಂದ್​ ಬಿಡುತ್ತಿಲ್ಲ appeared first on News First Kannada.

Source: newsfirstlive.com

Source link