ಕಳೆದ ಮಂಗಳವಾರ ಅಂದ್ರೆ ಜೂನ್ 29-2021ರಂದು ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಥ್ರಿಬಲ್ ಆರ್ ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಯ್ತು.

‘‘ರೌದ್ರ ರಣ ರುಧಿರ’’ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಕೊರೊನಾ ಆರ್ಭಟ ಇರದಿದ್ದರೆ ಇಷ್ಟೊತ್ತಿಗಾಗಲೇ ಎಸ್​​.ಎಸ್​.ರಾಜಮೌಳಿ ಥ್ರಿಬಲ್ ಆರ್ ಚಿತ್ರವನ್ನ ಪ್ರೇಕ್ಷಕರ ಮುಂದೆ ಬಹುಭಾಷೆಗಳಲ್ಲಿ ತಂದು ನಿಲ್ಲಿಸಿಬಿಡ್ತಿದ್ರು. ಈಗ ವಿಷಯವೆನಪ್ಪ ಅಂದ್ರೆ ಥ್ರಿಬಲ್ ಆರ್ ಚಿತ್ರದ ಪೊಸ್ಟರ್ ಈಗ ವೈರಲ್ಲೋ ವೈರಲ್​ ಆಗ್ತಿದೆ.

ಕೊಮ್ಮುರಾಮ್ ಭೀಮಾ ಪಾತ್ರದಾರಿ ಜೂನಿಯರ್ ಎನ್​​.ಟಿ.ಆರ್, ಅಲ್ಲುರಿ ಸೀತಾರಾಮ ರಾಜು ಪಾತ್ರದಾರಿ ರಾಮ್ ಚರಣ್ ಅವರನ್ನ ಬೈಕ್ ಮೇಲೆ ಕೂರಿಸಿಕೊಂಡು ಹೋಗ್ತಿರೋ ಪೋಸ್ಟರ್​​​ ವೈರಲ್ ಆಗ್ತಿದೆ. ಈ ಪೋಸ್ಟರ್ ವೈರಲ್ ಆಗಲು ಕಾರಣ ಸಖತ್ ಮಜವಾಗಿದೆ. ರಾಮ್ ಚರಣ್, ಜೂ.ತಾರಕ್ ರಾಮ್ ಬದಲು ಬೇರೆ ಬೇರೆ ಖ್ಯಾತ ನಟರು ಆ ಪೋಸ್ಟರ್​​ನಲ್ಲಿ ರಾರಾಜಿಸುತ್ತಿದ್ದಾರೆ.

ಹೌದು.. ಥ್ರಿಬಲ್ ಆರ್ ಚಿತ್ರದ ನೂತನ ಪೋಸ್ಟರ್ ಅನ್ನ ಚಿತ್ರಪ್ರೇಮಿಗಳು ತಮ್ಮ ತಮ್ಮ ಮೆಚ್ಚಿನ ನೆಚ್ಚಿನ ಸ್ಟಾರ್ ನಟರ ಮುಖವನ್ನ ಹಾಕಿ ಎಡಿಟ್ ಮಾಡಿ ಸಂತೋಷ ಪಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳು ಈಗ ಮೆಚ್ಚುಗೆಯ ಲೈಕ್ಸು ಕಾಮೆಂಟ್ಸ್​​ಗಳನ್ನ ಗೆಟ್ಟಿಸಿಕೊಂಡು ಮೆರವಣಿಗೆ ಮಾಡ್ತಿವೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರುಗಳ ಫೋಟೋ , ಕಿಚ್ಚ ಸುದೀಪ್-ರಾಕಿಂಗ್ ಸ್ಟಾರ್ ಯಶ್ ಫೋಟೋ ,ಕ್ರಿಕೆಟಿಗಾರದ ವಿರಾಟ್ ಕೋಹ್ಲಿ , ರೋಹಿತ್ ಶರ್ಮಾ ಫೋಟೋಸ್ ಸೇರಿದಂತೆ ಅನೇಕ ಅನೇಕ ಸ್ಟಾರ್ ಮಹೋದಯರ ಫೋಟೊಸ್ ಥ್ರಿಬಲ್ ಆರ್ ಪೋಸ್ಟರ್ ಮೇಲೆ ಮೆರದಾಡುತ್ತಿದೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಸಿಮೇಯ ರಾಜಮೌಳಿಯವರ ಸಿನಿಮಾಗಳು ಏನಾದ್ರೊಂದು ವಿಶೇಷ ವಿಚಾರಗಳಿಂದ ಸದ್ದು ಮಾಡ್ತಾನೇ ಇರ್ತಾವೆ. ಅಕ್ಟೋಬರ್ 13ನೇ ತಾರೀಖ್ ಪ್ರೇಕ್ಷಕರ ಮುಂದೆ ಥ್ರಿಬಲ್ ಆರ್ ಸಿನಿಮಾ ಬರೋ ಸಾಧ್ಯತೆ ಇದೆ.

 

The post ಜೋರಾಯ್ತು ರಾಜಮೌಳಿ ಸಿನಿಮಾ ಸೌಂಡು.. RRR ಪೋಸ್ಟರ್ ಮೇಲೆ ಸ್ಟಾರ್​​ಗಳ ಮೆರವಣಿಗೆ appeared first on News First Kannada.

Source: newsfirstlive.com

Source link