ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆಯುತ್ತಿರುವ ಐಪಿಎಲ್​ನ 28 ನೇ ಮ್ಯಾಚ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ಟಾಸ್ ​ಗೆದ್ದು ಬೌಲಿಂಗ್ ಆಯ್ದುಕೊಂಡು ರಾಜಸ್ಥಾನ್ ರಾಯಲ್ಸ್​​ನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನದ ರಾಯಲ್ಸ್ ಸನ್​ರೈಸರ್ಸ್ ಹೈದರಾಬಾದ್​ಗೆ 221 ರನ್​ಗಳ ಗುರಿ ನೀಡಿದೆ. ರಾಜಸ್ಥಾನ್ ಪರ ಜೋಸ್​ ಬಟ್ಲರ್ ಸೆಂಚುರಿ ಬಾರಿಸಿದ್ದಾರೆ. 64 ಎಸೆತಗಳನ್ನ ಎದುರಿಸಿದ ಜೋಸ್ ಬಟ್ಲರ್ 11 ಬೌಂಡರಿ, 8 ಸಿಕ್ಸರ್ ಸೇರಿದಂತೆ 124 ರನ್ ಗಳಿಸಿದ್ರು. ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 48, ರಿಯಾನ್ ಪರಾಗ್ 15, ಡೇವಿಡ್ ಮಿಲ್ಲರ್ 7 ರನ್ ಗಳಿಸಿದ್ರು.

The post ಜೋಸ್ ಬಟ್ಲರ್ ಸೆಂಚುರಿ: ಸನ್​ರೈಸರ್ಸ್​ಗೆ 221 ರನ್​ಗಳ ಟಾರ್ಗೆಟ್​ ಕೊಟ್ಟ ರಾಜಸ್ಥಾನ್​ appeared first on News First Kannada.

Source: newsfirstlive.com

Source link