ಜ್ಞಾನದೀವಿಗೆ – ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಹಾಸನ: ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮದ ವತಿಯಿಂದ ಹಾಸನದ ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

ಹಾಸನದ ರಾಮಕೃಷ್ಣ ಚಿಕಿತ್ಸಾಲಯದ ವೈದ್ಯರಾಗಿರುವ ಗುರುರಾಜ್ ಹೆಬ್ಬಾರ್ ಅವರು 35 ಸಾವಿರ ರೂಪಾಯಿ ಧನಸಹಾಯ ಮಾಡಿ ಟ್ಯಾಬ್ ವಿತರಿಸುವಂತೆ ಮನವಿ ಮಾಡಿದ್ರು. ಅದರಂತೆ ಇಂದು 11 ಟ್ಯಾಬ್‍ಗಳನ್ನು ಡಾಕ್ಟರ್ ಗುರುರಾಜ್ ಹೆಬ್ಬಾರ್, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ನೇತೃತ್ವದಲ್ಲಿ ವಿತರಿಸಲಾಯ್ತು.

ಕೋವಿಡ್ ಸಮಯದಲ್ಲಿ ಟ್ಯಾಬ್ ನೀಡಿ ಹೆಚ್ಚಿನ ಓದಿಗೆ ಸಹಾಯ ಮಾಡಿದ ಪಬ್ಲಿಕ್ ಟಿವಿಗೆ, ದಾನಿಗಳಾದ ಡಾಕ್ಟರ್ ಗುರುರಾಜ ಹೆಬ್ಬಾರ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ರು. ದೊಡ್ಡಗದ್ದವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರೂ ಟ್ಯಾಬ್‍ನ ಸದುಪಯೋಗ ಪಡೆಯಲಿದ್ದಾರೆ.

The post ಜ್ಞಾನದೀವಿಗೆ – ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ appeared first on Public TV.

Source: publictv.in

Source link