ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ | All fountains of the Taj Mahal must be shut down Asaduddin Owaisi on Gyanvapi mosque row


ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಓವೈಸಿ

ಸುಪ್ರೀಂಕೋರ್ಟ್ ಆದೇಶವು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಹೇಳುತ್ತದೆ, ಅಂದರೆ ನಾವು ಅಲ್ಲಿ ‘ವುಜು’ ಮಾಡಬಹುದು. ಅದೊಂದು ಕಾರಂಜಿ. ಇದೇ ರೀತಿ ನಡೆದರೆ ತಾಜ್‌ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ

ಜ್ಞಾನವಾಪಿ ಮಸೀದಿ (Gyanvapi mosque) ಸಂಕೀರ್ಣದಲ್ಲಿ ಪತ್ತೆಯಾಗಿರುವುದು  ಶಿವಲಿಂಗ (shivling) ಅಲ್ಲ, ಅದು ‘ಕಾರಂಜಿ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ. ಅದೇ ವೇಳೆ ‘ತಾಜ್ ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕು’ ಎಂದಿದ್ದಾರೆ ಅವರು. ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಟೀಕಿಸಿದ ಅವರು ದಂಗೆಗಳು ನಡೆಯುತ್ತಿದ್ದ ಕಾಲಘಟ್ಟವಾದ 1990ಕ್ಕೆ ದೇಶವನ್ನು ಕೊಂಡೊಯ್ಯಲು ಬಿಜೆಪಿ ಬಯಸುತ್ತಿದೆ ಎಂದು ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಓವೈಸಿ, ‘ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ’ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಒತ್ತಿಹೇಳಿದ್ದಾರೆ. ಅಂದರೆ ಅವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲು ಶುದ್ಧೀಕರಣದ ಧಾರ್ಮಿಕ ಕ್ರಿಯೆಯಾದ ‘ವುಜು ಖಾನಾ’ ಮಾಡಬಹುದು. ಸುಪ್ರೀಂಕೋರ್ಟ್ ಆದೇಶವು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಹೇಳುತ್ತದೆ, ಅಂದರೆ ನಾವು ಅಲ್ಲಿ ‘ವುಜು’ ಮಾಡಬಹುದು. ಅದೊಂದು ಕಾರಂಜಿ. ಇದೇ ರೀತಿ ನಡೆದರೆ ತಾಜ್‌ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ. 1990ರ ದಶಕದಲ್ಲಿ ಗಲಭೆಗಳು ನಡೆಯುತ್ತಿದ್ದ ಕಾಲಕ್ಕೆ ದೇಶವನ್ನು ಕೊಂಡೊಯ್ಯಲು ಬಿಜೆಪಿ ಬಯಸುತ್ತಿದೆ ಎಂದು ಓವೈಸಿ ಹೇಳಿದ್ದಾರೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಹೊರಡಿಸಿದ ಆದೇಶದಲ್ಲಿ ‘ಶಿವಲಿಂಗ’ ಕಂಡುಬಂದ ನಂತರ ಕೊಳವನ್ನು ಮುಚ್ಚಲು ಹೇಳಿದ್ದು ಇದು ‘ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ಉಲ್ಲಂಘನೆಯಾಗಿದೆ’ ಎಂದು ಓವೈಸಿ ಈ ಹಿಂದೆ ಹೇಳಿದ್ದರು.

ಕೇವಲ ಅರ್ಜಿದಾರರ ಹಕ್ಕನ್ನು ಆಧರಿಸಿ ಆದೇಶವನ್ನು ಹೊರಡಿಸಿದ್ದಕ್ಕಾಗಿ ಕೆಳ ನ್ಯಾಯಾಲಯವನ್ನು ಪ್ರಶ್ನಿಸಿದ ಓವೈಸಿ ನ್ಯಾಯಾಲಯ ನೇಮಿಸಿದ ಕಮಿಷನರ್ ಇನ್ನೂ ಸಮೀಕ್ಷೆಯ ವರದಿಯನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ವಾರಣಾಸಿ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ ‘ಶಿವಲಿಂಗ’ ಪತ್ತೆಯಾದ ನಂತರ ‘ಪ್ರದೇಶವನ್ನು (ಕೊಳ) ಮುಚ್ಚಲು ಮತ್ತು ಯಾವುದೇ ವ್ಯಕ್ತಿಯ ಪ್ರವೇಶವನ್ನು ನಿಷೇಧಿಸುವಂತೆ’ ಆದೇಶಿಸಿತ್ತು.

TV9 Kannada


Leave a Reply

Your email address will not be published. Required fields are marked *