ಜ್ಞಾನವಾಪಿ ಮಸೀದಿಯೊಳಗಡೆ ಪೂಜೆ ನಡೆಸದ ಹೊರತು ಅನ್ನ ನೀರು ಮುಟ್ಟುವುದಿಲ್ಲ ಎಂದರು ಸ್ವಾಮಿ ಅವಿಮುಕ್ತೇಶ್ವರಾನಂದ | Swamy Avimukhteshwaranand says he will fast till permission granted for offering puja inside Gyanvapi Mosque ARBಶನಿವಾರ ಅಂದರೆ ಜೂನ್ 4 ರಂದು ಅವರು ಜ್ಞಾನವಾಪಿ ಮಸೀದಿ ಒಳಗಡೆ ಪೂಜೆ ಸಲ್ಲಿಸುವುದಾಗಿ ಸ್ವಾಮೀಜಿ  ಘೋಷಣೆ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಅವರು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ತಿಳಿಸಿದ್ದರಂತೆ.

TV9kannada Web Team


| Edited By: Arun Belly

Jun 04, 2022 | 9:25 PM
ವಾರಣಾಸಿ: ಪ್ರಾಯಶಃ ವಾರಣಾಸಿ ಪೊಲೀಸರು ಇದನ್ನು ನಿರೀಕ್ಷಿಸಿರಲಿಲ್ಲ. ಜ್ಞಾನವಾಪಿ ಮಸೀದಿಯ (Gyanvapi Mosque) ಸರ್ವೇ ನಡೆಸಿದಾಗ ಅದರೊಳಗಿನ ವುಝು ಖಾನಾನಲ್ಲಿ ಶಿವಲಿಂಗ ಪತ್ತೆಯಾಗಿದೆ ಅನ್ನುವ ವರದಿಗಳನ್ನು ಎಲ್ಲರೂ ಓದಿದ್ದಾರೆ. ಆದರೆ ವಾರಣಾಸಿಯ ನ್ಯಾಯಾಲಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಹೇಳಿದೆ. ಆದರೆ ಶನಿವಾರ ವಾರಣಾಸಿಯಲ್ಲಿ ಅಚ್ಚರಿಯ ಸಂಗತಿಯೊಂದು ನಡೆಯಿತು. ಇಲ್ಲಿನ ಶ್ರೀ ವಿದ್ಯಾಮಠದ (Sri Vidyamath) ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ಮಠದಿಂದ ಹೊರಬರದಂತೆ ಪೊಲೀಸರು ತಡೆದರು.  ಶನಿವಾರ ಅಂದರೆ ಜೂನ್ 4 ರಂದು ಅವರು ಜ್ಞಾನವಾಪಿ ಮಸೀದಿ ಒಳಗಡೆ ಪೂಜೆ ಸಲ್ಲಿಸುವುದಾಗಿ ಸ್ವಾಮೀಜಿ  ಘೋಷಣೆ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಅವರು ಜಿಲ್ಲಾಧಿಕಾರಿಗಳಿಗೂ (deputy commissioner) ಪತ್ರ ಬರೆದು ತಿಳಿಸಿದ್ದರಂತೆ. ತಮ್ಮ ಸಹಾಯಕರೊಬ್ಬರ ಮೂಲಕ ಅವರು ಪತ್ರ ಕಳಿಸುವುದರ ಜೊತೆಗೆ ಮೊಬೈಲ್ ನಿಂದ ಸಂದೇಶವನ್ನು ಅವರು ಜಿಲ್ಲಾಧಿಕಾರಿಗೆ ಕಳಿಸಿದ್ದಾಗಿ ಹೇಳಿದ್ದಾರೆ.

ಹಾಗಾಗೇ, ವಾರಣಾಸಿ ಪೊಲೀಸರು ಸ್ವಾಮೀಜಿಗಳನ್ನು ಮಠದಿಂದ ಹೊರಬರದಂತೆ ತಡೆದರು. ಪೊಲೀಸರ ಕ್ರಮದಿಂದ ಅಸಮಾಧಾನಗೊಂಡ ಸ್ವಾಮೀಜಿ ತಮಗೆ ಪೂಜೆ ನಡೆಸಲು ಅವಕಾಶ ನೀಡುವವರೆಗೆ ಅನ್ನ ನೀರು ಮುಟ್ಟುವುದಿಲ್ಲ, ಪೂಜೆ ಅರ್ಪಿಸಿದ ನಂತರವೇ ಬಾಯಲ್ಲಿ ನೀರು ಹಾಕುತ್ತೇನೆ, ಅಂತ ಪ್ರಕಟಿಸಿದರು.

‘ನ್ಯಾಯಾಲಯದ ನಿರ್ಣಯಕ್ಕೆ ನಾವು ಖಂಡಿತವಾಗಿಯೂ ಬದ್ಧರಾಗಿರುತ್ತೇವೆ ಆದರೆ ಕೋರ್ಟ್ ತೀರ್ಪು ನೀಡುವವರೆಗೆ ದೇವರು ಹಸಿವು ಮತ್ತು ನೀರಿನ ದಾಹದಿಂದ ಬಳಲಬೇಕೇ? ನಮಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಸ್ವಾಮೀಜಿ ಮಾಧ್ಯಮಗಳಿಗೆ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 


TV9 Kannada


Leave a Reply

Your email address will not be published. Required fields are marked *