ಜ್ಞಾನವಾಪಿ ಮಸೀದಿ-ದೇಗುಲ ವಿವಾದದ ಸಮ್ಮುಖದಲ್ಲಿ ಜಗತ್ತಿನಲ್ಲಿ ಇನ್ನೂ ಯಾವೆಲ್ಲಾ ಧರ್ಮ ಸ್ಥಳಗಳ ಮಧ್ಯೆ ಕದನಗಳು ನಡೆಯುತಿವೆ ಗೊತ್ತಾ!? | In the heat of gyanvapi masjid temple isssue which are the other disputed religious places in world


ಜ್ಞಾನವಾಪಿ ಮಸೀದಿ-ದೇಗುಲ ವಿವಾದದ ಸಮ್ಮುಖದಲ್ಲಿ ಜಗತ್ತಿನಲ್ಲಿ ಇನ್ನೂ ಯಾವೆಲ್ಲಾ ಧರ್ಮ ಸ್ಥಳಗಳ ಮಧ್ಯೆ ಕದನಗಳು ನಡೆಯುತಿವೆ ಗೊತ್ತಾ!?

ಜ್ಞಾನವಾಪಿ ಮಸೀದಿ-ದೇಗುಲ ವಿವಾದದ ಸಮ್ಮುಖದಲ್ಲಿ ಜಗತ್ತಿನಲ್ಲಿ ಇನ್ನೂ ಯಾವೆಲ್ಲಾ ಧರ್ಮಗಳ ಮಧ್ಯೆ ಕದನಗಳು ನಡೆಯುತಿವೆ ಗೊತ್ತಾ!?

ಜ್ಞಾನವಾಪಿ ಮಸೀದಿ ಕೇಸ್‌ ಸಂಬಂಧ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ 4ನೇ ದಿನವಾದ ಇಂದೂ ಉಭಯ ಸಮುದಾಯಗಳಿಂದ ವಾದ ಮಂಡನೆ ಮುಂದುವರಿದಿದೆ. ಈ ವಿವಾದ ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ ವಿಶ್ವದಲ್ಲಿ ಇಂತಹ ಧಾರ್ಮಿಕ ತಿಕ್ಕಾಟ ತಾಣಗಳು ಇನ್ನೂ ಅನೇಕವಿವೆ. ಆ ಸ್ಥಳಗಳ ಪರಿಚಯ ಇಲ್ಲಿದೆ ನೋಡಿ.

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ (Gyanvapi Masjid) ಶಿವಲಿಂಗ ಪತ್ತೆ ಕೇಸ್‌ ನಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ಕನೇ ದಿನವಾದ ಇಂದೂ ಉಭಯ ಸಮುದಾಯಗಳಿಂದ ವಾದ ಮಂಡನೆ ಮುಂದುವರಿದಿದೆ. ವಾರಾಣಸಿಯ ಈ ಜ್ಞಾನವಾಪಿ ಮಸೀದಿ – ವಿಶ್ವನಾಥನ ದೇಗುಲ ವಿವಾದ ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ ವಿಶ್ವದಲ್ಲಿ ಇಂತಹ ಧಾರ್ಮಿಕ ತಿಕ್ಕಾಟ ತಾಣಗಳು ಇನ್ನೂ ಅನೇಕವಿವೆ. ಇದರಿಂದ ಸಮುದಾಯಗಳ ನಡುವೆ ಕಂದಕ ಏರ್ಪಟ್ಟಿದ್ದು, ವಿವಾದ ಭುಗಿಲೆದ್ದಿದೆ. ಆದರೆ ಸದ್ಯಕ್ಕೆ ಇದೊಂದೇ ಧಾರ್ಮಿಕ ಸ್ಥಳ ವಿವಾದದ ಗೂಡಾಗಿಲ್ಲ. ಇನ್ನೂ ಅನೇಕ ಧಾರ್ಮಿಕ ಸ್ಥಳಗಳು ವಿವಾದದಲ್ಲಿವೆ. ಆ ಸ್ಥಳಗಳ ಪರಿಚಯ ಇಲ್ಲಿದೆ ನೋಡಿ.

ಜ್ಞಾನವಾಪಿ ಮಸೀದಿ ವಿವಾದ ಸುಪ್ರೀಂಕೋರ್ಟ್​ ವರೆಗೂ ಹೋಗಿ ಬಂದಿದೆ. ಮಸೀದಿಯ ಆವರಣದಲ್ಲಿರುವ ಬಾವಿಯಲ್ಲಿ ಶಿವ ಲಿಂಗ ಇರುವುದನ್ನು ವಿಡಿಯೋ ಮಾಡಲಾಗಿದೆ. ಜೊತೆಗೆ ನಂದಿ ವಿಗ್ರಹ ಸೇರಿದಂತೆ ಇನ್ನೂ ಅನೇಕ ಹಿಂದೂ ದೇಗುಲ ಮಾದರಿಯ ಕುರುಹುಗಳು ಪತ್ತೆಯಾಗಿವೆ. ಇವೆಲ್ಲ ಸರ್ವೆ ಕಾರ್ಯದಲ್ಲಿ ದೃಢಪಟ್ಟ ಮೇಲೆ ವಿವಾದ ಮತ್ತಷ್ಟು ಕಾವು ಪಡೆದಿದೆ. ಇದರಿಂದ ಇಲ್ಲಿ ದೇವಸ್ಥಾನವಿದ್ದು, ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂಬುದು ಸದ್ಯದ ವಾದದ ತಿರುಳಾಗಿದೆ.

ಗಮನಾರ್ಹವೆಂದರೆ ಈ ವಿವಾದ ಇಂದು ನಿನ್ನೆಯದ್ದಲ್ಲ. ಅಥವಾ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಧುತ್ತನೆ ಎದುರಾಗಿರುವುದಲ್ಲ. 1936ರಲ್ಲಿ ದಾಖಲೆಗಳ ಸಮೇತ ಕಾಶಿ ಕೋರ್ಟ್‌ಗೆ ಒಂದು ಸಮುದಾಯದ ವತಿಯಿಂದ ಸಲ್ಲಿಸಲಾಗಿತ್ತು. ಅದಕ್ಕೆ ಅಂದು ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ಜ್ಞಾನವಾಪಿ ವಕ್ಸ್ ಆಸ್ತಿ ಅಲ್ಲ ಎಂದಿತ್ತು ಎಂಬುದು ಗಮನಾರ್ಹ. ಆ ಜಾಗ ಎಂದಿಗೂ ಮಸೀದಿಗೆ ಸೇರಿದ್ದಾಗಿರಲಿಲ್ಲ ಎಂದು ಸಾರಿತ್ತು.

ಜ್ಞಾನವಾಪಿ ಮಸೀದಿಯೊಳಗಿನ ಹಿಂದೂ ದೇವತೆಗಳ ದರ್ಶನ ಹಾಗೂ ಆರಾಧನೆಗೆ ಅನುಮತಿ ಕೋರಿ ಈಗ ಕೋರ್ಟ್​ ಮೊರೆ ಹೋಗಿರುವ ಹಿಂದೂ ಮಹಿಳೆಯರು, ಇದೀಗ ಬ್ರಿಟಿಷ್ ಸರ್ಕಾರದ ನಿಲುವನ್ನು ಸಹ ಉಲ್ಲೇಖಿಸಿದ್ದಾರೆ. ಆಗಿನ ಬ್ರಿಟಿಷ್ ಸರ್ಕಾರವು ಜ್ಞಾನವಾಪಿ ಮಸೀದಿ ವಕ್ಸ್ ಆಸ್ತಿ ಅಲ್ಲ, ಆ ಸ್ಥಳ ಎಂದಿಗೂ ಮಸೀದಿ ಸ್ಥಳವಾಗಿರಲಿಲ್ಲ ಎಂದು ಘೋಷಿಸಿದ್ದನ್ನು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಕೋರ್ಟ್​ ಗೆ ಅಫಿಡವಿಟ್ ಸಹ ಸಲ್ಲಿಸಿದ್ದಾರೆ. 1936ರಲ್ಲಿ ಮೊಹಮ್ಮದ್ ಎಂಬಾತ ಜ್ಞಾನವಾಪಿ ಮಸೀದಿಯನ್ನು ವಕ್ಸ್ ಆಸ್ತಿ ಎಂದು ಘೋಷಿಸಬೇಕು ಎಂದು ಕೋರಿದ್ದ. ಇದಕ್ಕೆ ಲಿಖಿತ ಹೇಳಿಕೆ ದಾಖಲಿಸಿದ್ದ ಭಾರತದ ಮಹಾ ಕಾರ್ಯದರ್ಶಿಗಳು, ಇಲ್ಲಿ ಕಾಶಿ ದೇಗುಲ ಇತ್ತು. ಅದು ಮಸೀದಿ ಸ್ಥಳ ಅಲ್ಲ ಎಂದಿದ್ದರು. 1991ರಲ್ಲಿ ಮತ್ತೊಮ್ಮೆ ಕೋರ್ಟ್​ ಮುಂದೆ ಬಂದಾಗ ಔರಂಗಜೇಬಾ ದೇಗುಲದ ಒಂದು ಭಾಗವನ್ನು ಬೀಳಿಸಿ, ಅಲ್ಲಿ ಮಸೀದಿ ಕಟ್ಟಿದ್ದಾನೆ. ಆದರೆ ಅಲ್ಲಿ ಹಿಂದೂಗಳು ಪೂಜೆ, ಆರಾಧನೆ ಮಾಡಬಹುದು ಎಂದು ಕೋರ್ಟ್ ಹೇಳಿತ್ತು.

ಬನ್ನೀ ಹಾಗಾದರೆ ಇನ್ನೂ ಯಾವೆಲ್ಲಾ ಇಂತಹ ಧರ್ಮ ಸ್ಥಳ ಗಳಲ್ಲಿ ವಿವಾದದ ಹೊಗೆ ಹಬ್ಬಿದೆ ನೋಡೋಣಾ

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಪರಸ್ಪರ ಎದುರು ಬದುರು ಒಂದು ಧಾರ್ಮಿಕ ಸ್ಥಳಕ್ಕಾಗಿ ಸದಾ ಬಡಿದಾಡಿಕೊಳ್ಳುತ್ತಿವೆ. ಕೆಲವೊಮ್ಮೆ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಕಂಡು ಬಂದಿವೆ. ಹೀಗಿರುವಾಗ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಈ ವಿವಾದದ ಮೂಲ ಕಾರಣವೇನು? ಯುದ್ಧ ನಡೆಯುವ ಸನ್ನಿವೇಶ ಹುಟ್ಟಿಕೊಂಡಿದ್ದೇಕೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಮೇ 14 ರಂದು, 75 ವರ್ಷಗಳ ಹಿಂದೆ ಇಸ್ರೇಲ್ ವಿಶ್ವದ ನಕ್ಷೆಯಲ್ಲಿ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಒಂದು ಕಾಲದಲ್ಲಿ ಇಸ್ರೇಲ್ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯಕ್ಕೊಳಪಡುತ್ತಿತ್ತು. ಆದರೆ ಮೊದಲ ವಿಶ್ವಯುದ್ಧದ ಬಳಿಕ ಇದು ಬ್ರಿಟನ್ ವಶಕ್ಕೆ ಹೋಯ್ತು. ಎರಡನೇ ವಿಶ್ವಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ಇದನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ 1947ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅರಬ್ ರಾಜ್ಯ ಹಾಗೂ ಇಸ್ರೇಲ್ ಎಂದು ಇಬ್ಭಾಗ ಮಾಡಿತು. ಆದರೆ 1948ರ ಮೇ ತಿಂಗಳಲ್ಲಿ ತನ್ನನ್ನು ತಾನು ಸ್ವತಂತ್ರ ರಾಷ್ಟ್ರವೆಂದು ಇಸ್ರೇಲ್ ಘೋಷಿಸಿಕೊಂಡಿತು. ಈ ಮೂಲಕ ವಿಶ್ವದ ಮೊದಲ ಹಾಗೂ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂತು.

1967ರಲ್ಲಿ ಇಸ್ರೇಲ್, ಸಿರಿಯಾ, ಜೋರ್ಡಾನ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್‌ ಬ್ಯಾಂಕ್‌ ಅನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜೋರ್ಡಾನ್ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಾ ಬಂದಿದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎನ್ನುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಅದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತಿದೆ.

ಜೆರುಸಲೇಂ ಇದು ಕ್ರೈಸ್ತರು, ಮುಸಲ್ಮಾನರು ಹಾಗೂ ಯಹೂದಿಗಳು… ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‌ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.

ಡೋಮ್‌ ಆಫ್ ರಾಕ್ ಹಾಗೂ ಅಲ್‌-ಅಕ್ಸಾ ಮಸೀದಿ ಇಲ್ಲಿಯೇ ಇದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೂ ಇದು ಮಹತ್ವದ್ದಾಗಿದೆ. ಈ ಮಸೀದಿಯನ್ನು ಮುಸಲ್ಮಾನರ ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್‌ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್‌ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.

ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಂ ತನ್ನ ಮಗ ಐಸಾಕ್‌ ನನ್ನು ಬಲಿ ನಿಡಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು. ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್‌ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.

ಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿದ ಕೇವಲ 24 ಗಂಟೆಯಲ್ಲಿ ಅರಬ್ ರಾಷ್ಟ್ರಗಳು ಇಲ್ಲಿ ದಾಳಿ ನಡೆಸಿದ್ದವು. ಈ ಹೋರಾಟ ಸುಮಾರು ಒಂದು ವರ್ಷ ಮುಂದುವರೆದಿತ್ತು. ಇದರಲ್ಲಿ ಇಸ್ರೇಲ್ ಗೆದ್ದು, ಅರಬ್ ರಾಷ್ಟ್ರಗಳು ಸೋತಿದ್ದವು.

ಪ್ರಹ್ಲಾದಪುರಿ ಮಂದಿರ ( ಈಗಿನ ಪಾಕಿಸ್ತಾನ):

ಪ್ರಹ್ಲಾದಪುರಿ ಮಂದಿರವನ್ನು ಮುಂದಿಟ್ಟುಕೊಂಡು ಪಾಕಿಸ್ತಾನದಲ್ಲಿ ಸುದೀರ್ಘ ಕಾಲ ವಿವಾದ ನಡೆದಿತ್ತು. ಇಲ್ಲಿ ನರಸಿಂಹ ದೇವರ ಸನ್ನಿಧಿಯಲ್ಲಿ ಭಗವಾನ್ ವಿಷ್ಣುವಿನ ಭಕ್ತರೊಬ್ಬರು ಹಿರಣ್ಯಕಶಪುವಿನ ಮಗ ಪ್ರಹ್ಲಾದನ ಮಂದಿರ ನಿರ್ಮಿಸಿದ್ದರು ಎಂಬುದು ಹಿಂದೂಗಳ ವಾದವಾಗಿದೆ. ಆದರೆ 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಪಾಕಿಸ್ತಾನೀಯರು ಪ್ರತೀಕಾರವಾಗಿ ಈ ಮಂದಿರವನ್ನೂ ಧ್ವಂಸಗೊಳಿಸಿದ್ದಾರೆ.

ತಾಜ್ ಮಹಲ್ ಅಲ್ಲಾ ತೇಜೋ ಮಹಲ್!:

ಇದು ತೇಜೋ ಮಹಲ್! ಶಿವನ ಮಂದಿರ ಎಂದು ಹಿಂದೂಗಳು ಹೇಳುತ್ತಿದ್ದರೆ ಅಲ್ಲಾ ಇದು ತಾಜ್ ಮಹಲ್ ಎನ್ನುತ್ತಾರೆ ಮುಸಲ್ಮಾನರು. ಮೊಘಲ್ ದೊರೆ ಶಾಹಜಹಾ ಪ್ರೀತಿಯಿಂದ ತನ್ನ ಪತ್ನಿಗೆ ಕಟ್ಟಿಸಿದ ಬೃಹತ್​ ಭವನ ಇದಾಗಿದೆ ಎಂದು ಇತಿಹಾಸ ಹೇಳುತ್ತದೆ. ಇದರ ಸಂಬಂಧ ಆಗಾಗ ಕೋರ್ಟ್​ ವ್ಯಾಜ್ಯವೂ ನಡೆದಿದೆ.

TV9 Kannada


Leave a Reply

Your email address will not be published. Required fields are marked *