ಜ್ವರ ಮತ್ತು ಸ್ನಾಯು ದೌರ್ಬಲ್ಯ ಕೊವಿಡ್ ಮೂರನೇ ಅಲೆಯಲ್ಲಿ ಕಂಡು ಬರುವ ಸಾಮಾನ್ಯ ರೋಗ ಲಕ್ಷಣಗಳು: ಕೇಂದ್ರ | Fever cough irritation in the throat muscular weakness among common COVID 19 symptoms during third wave says centre


ಜ್ವರ ಮತ್ತು ಸ್ನಾಯು ದೌರ್ಬಲ್ಯ ಕೊವಿಡ್ ಮೂರನೇ ಅಲೆಯಲ್ಲಿ ಕಂಡು ಬರುವ ಸಾಮಾನ್ಯ ರೋಗ ಲಕ್ಷಣಗಳು: ಕೇಂದ್ರ

ಪ್ರಾತಿನಿಧಿಕ ಚಿತ್ರ

ದೆಹಲಿ: ದೇಶದಲ್ಲಿ ಹೊಸ ಒಮಿಕ್ರಾನ್ (Omicron) ರೂಪಾಂತರದಿಂತದಾಗಿ ದೈನಂದಿನ ಕೊವಿಡ್ ಸೋಂಕುಗಳ ಉಲ್ಬಣದ ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಭಾರತದಲ್ಲಿ ಮತ್ತು ನಿರ್ದಿಷ್ಟವಾಗಿ ದೆಹಲಿಯಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಮತ್ತು ಮೂರನೇ ಅಲೆಗಳ ನಡುವಿನ ಹೋಲಿಕೆಯನ್ನು ಪ್ರಸ್ತುತಪಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ತೀವ್ರ ನಡುವಿರುವ ಜ್ವರ ಅಥವಾ ನಡುಕ ಇಲ್ಲದಿರುವ ಜ್ವರ, ಕೆಮ್ಮು, ಗಂಟಲಿನಲ್ಲಿ ಕಿರಿಕಿರಿ, ಸ್ನಾಯು ದೌರ್ಬಲ್ಯ ಮತ್ತು ದಣಿವು ಮೂರನೇ ಅಲೆ ಸಮಯದಲ್ಲಿ ಕಂಡು ಬರುವ ಕೊವಿಡ್-19ನ ಐದು ಸಾಮಾನ್ಯ ಲಕ್ಷಣಗಳಾಗಿವೆ. ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಅಧ್ಯಯನವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಮೂರನೇ ಕೊವಿಡ್ ಅಲೆ ಸಮಯದಲ್ಲಿ ಇವುಗಳು ಸಾಮಾನ್ಯ ಲಕ್ಷಣಗಳಾಗಿವೆ ಎಂದು ನಂಬಲಾಗಿದೆ. ದೆಹಲಿಯ ಸುಮಾರು 99 ಪ್ರತಿಶತ ರೋಗಿಗಳು ಈ ರೋಗಲಕ್ಷಣಗಳ ಬಗ್ಗೆ ದೂರು ನೀಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬಹಿರಂಗಪಡಿಸಿವೆ. ಆದಾಗ್ಯೂ, ಜ್ವರ, ಕೆಮ್ಮು, ಗಂಟಲಿನ ಕಿರಿಕಿರಿಯು ಸಾಮಾನ್ಯವಾಗಿ ಐದು ದಿನದ ನಂತರ ಕಡಿಮೆಯಾಗುತ್ತದೆ.

11 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ, ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕಿನೊಂದಿಗೆ ಜ್ವರವು ಸಾಮಾನ್ಯ ಲಕ್ಷಣವಾಗಿದೆ. ಆದರೆ ಈ ಬಾರಿ ಕೊವಿಡ್ ನ್ಯುಮೋನಿಯಾ ಕಡಿಮೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

160 ಕೋಟಿ ಡೋಸ್ ದಾಟಿದ ಕೊವಿಡ್ ಲಸಿಕೆ ನೀಡಿಕೆ
ಏತನ್ಮಧ್ಯೆ ದೇಶದಲ್ಲಿ ಕೊವಿಡ್ 19 ವ್ಯಾಕ್ಸಿನೇಷನ್ ವ್ಯಾಪ್ತಿಯು 160.32 ಕೋಟಿಯನ್ನು ದಾಟಿದೆ ಮತ್ತು ಭಾರತದ 94 ಪ್ರತಿಶತ ವಯಸ್ಕರು ಮೊದಲ ಡೋಸ್ ಪಡೆದಿದ್ದಾರೆ, ಆದರೆ ಶೇಕಡಾ 72 ರಷ್ಟು ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.  15-18 ವಯಸ್ಸಿನ ಹದಿಹರೆಯದವರಲ್ಲಿ ಒಟ್ಟು 52 ಪ್ರತಿಶತದಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ ಮತ್ತು ಆಂಧ್ರಪ್ರದೇಶವು 91 ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ಹಿಮಾಚಲ ಪ್ರದೇಶವು 83 ಪ್ರತಿಶತ ಮತ್ತು ಮಧ್ಯಪ್ರದೇಶವು 71 ಪ್ರತಿಶತದಷ್ಟು ಹೊಂದಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಚಂಡೀಗಢ, ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೊವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಅರ್ಹ ವಯಸ್ಕ ಜನಸಂಖ್ಯೆಯ 100 ಪ್ರತಿಶತಕ್ಕೆ ನೀಡಿವೆ ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published. Required fields are marked *