ಜ.2021ರಿಂದ ಜ.2022 ರವರೆಗೆ ಗೂಗಲ್ ನಲ್ಲಿ ಹುಡುಕಲಾದ ಉದ್ಯೋಗಗಳ ಮಾಹಿತಿ ಇಲ್ಲಿದೆ | Jobs searched from January 2021 to January 2022


ಜ.2021ರಿಂದ ಜ.2022 ರವರೆಗೆ ಗೂಗಲ್ ನಲ್ಲಿ ಹುಡುಕಲಾದ ಉದ್ಯೋಗಗಳ ಮಾಹಿತಿ ಇಲ್ಲಿದೆ

ಸಾಂಧರ್ಭಿಕ ಚಿತ್ರ

ಕೊರೊನಾ ಎಂಬ ಭೂತ ಯುವ ಶಕ್ತಿಗೆ ನೀಡಿದ ನೋವು ಕಷ್ಟ ಅಷ್ಟಿಷ್ಟಲ್ಲ, ಬದುಕು ಮುಗಿದೆ ಹೋಗಿಯಿತು ಎನ್ನವಷ್ಟು ನೋವುಗಳನ್ನು ನೀಡಿದೆ. ಅನೇಕರು ತಮ್ಮ ಕುಟುಂಬ, ಒಂದು ಹೊತ್ತಿನ ಊಟಕ್ಕಾಗಿ ದುಡಿಯುತ್ತಿದ್ದ ಕೈಗಳು ಕೆಲಸವನ್ನು ಕಳೆದುಕೊಂಡಿತು. ಜನರು ಪಟ್ಟ ಕಷ್ಟ ಅವರಿಗೆ ಮಾತ್ರ ಗೊತ್ತು. ಇದರ ನಡುವೆ ಇನ್ನೊಬ್ಬರ ಕೈ ಕೆಳಗೆ ದುಡಿಯುತ್ತಿದ್ದ ಅದೆಷ್ಟೋ ಯುವ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಗೆ ಬಂದು ನಿಂತರು. ಇದರ ನಡುವೆ ಪ್ಯಾಮಿಲಿ ಜವಾಬ್ದಾರಿಗಳು ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲದೆ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಕಷ್ಟಗಳ ಜೊತೆಗೆ ಗುದ್ದಾಡಲೂ ಸಾಧ್ಯವಿಲ್ಲ ಎನ್ನುವ ಸ್ಥಿತಿ ಒಂದಿಷ್ಟು ಯುವ ಸಮಾಜ, ಇನ್ನು ಕೆಲವರು ಕೆಲಸವನ್ನು ಪಡೆಯುವ ಹಂಬಲದಲ್ಲಿ ಅನೇಕ ತಪ್ಪು ದಾರಿಗಳನ್ನು ಹಿಡಿದರು. ಮತ್ತೊಂದಷ್ಟು ಜನಸಮೂಹ ಸ್ವಂತ ಉದ್ಯೋಗಗಳನ್ನು  ಮಾಡುವ ಕಾತುರು ಇದಕ್ಕೆ ಸಾಕ್ಷಿಯನ್ನು ನೀಡಿದ್ದು ಗೂಗಲ್, ಹೌದು COVID-19 ಸಾಂಕ್ರಾಮಿಕವು ಅನೇಕರನ್ನು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳವಂತೆ ಮಾಡಿತ್ತು.  ಈ ಸಮಯದಲ್ಲಿ ಅನೇಕರಿಗೆ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು, ಇತರರು ಇನ್ನೂ ಆನ್‌ಲೈನ್‌ನಲ್ಲಿ ಉದ್ಯೋಗಗಳನ್ನು ಹುಡುಕುತ್ತಿದ್ದರು.

ಇತ್ತೀಚೆಗೆ, ಗೂಗಲ್ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಇತರರಿಗೆ ಸಹಾಯ ಮಾಡುವುದು, ಪ್ರಯಾಣಿಸುವುದು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವುದು ಸೇರಿದಂತೆ ಹೆಚ್ಚು ಹುಡುಕಲಾದ ಉದ್ಯೋಗಗಳು ಯಾವುವು ಎಂಬುದನ್ನು ಬಹಿರಂಗಪಡಿಸಿದೆ.  ಹೆಚ್ಚಿನ ಜನರು ಯಾರ ಅಡಿಯಲ್ಲಿಯೂ ಕೆಲಸ ಮಾಡುವ ಅಗತ್ಯವಿಲ್ಲದ  ನಮ್ಮ ಉದ್ಯೋಗವನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಎಂದು  ನಮ್ಮ ಕೆಲಸಕ್ಕೆ ನಾವೇ  ಬಾಸ್ ಆಗಿರಬಹುದು ಎಂದುಕೊಂಡು ಸ್ವ-ಉದ್ಯೋಗವನ್ನು ಸೃಷ್ಟಿ ಮಾಡಿಕೊಂಡರು.

ಜನವರಿ 2021ರಿಂದ ಜನವರಿ 2022 ರವರೆಗೆ ಹುಡುಕಲಾದ ಉದ್ಯೋಗಗಳು

ಜನವರಿ 2021ರಿಂದ ಜನವರಿ 2022 ರವರೆಗೆ ಗೂಗಲ್ ನಲ್ಲಿ ಅನೇಕರು ವಿವಿಧ ರೀತಿಯ ಉದ್ಯೋಗವನ್ನು ಹುಡುಕಿಕೊಂಡಿದ್ದಾರೆ. ಇದರ ಜೊತೆಗೆ ಸ್ವ-ಉದ್ಯೋಗಗಳಿಗೆ ಯಾವೆಲ್ಲ ಅವಕಾಶ ಇದೆ ಎಂಬುದನ್ನು ಕೂಡ ಹುಡುಕಿದ್ದಾರೆ. ಅದಕ್ಕಾಗಿ ಕೊರೊನಾ ಸಮಯದಲ್ಲಿ ಅದೆಷ್ಟೊ ಯುವಕರನ್ನು ಸ್ವ-ಉದ್ಯೋಗ ಸಮೂಹಕ್ಕೆ ಕರೆದುಕೊಂಡು ಹೋಗಿದೆ.

ಸ್ಥಿರಾಸ್ತಿ ವ್ಯವಹಾರಿ

ಉದ್ಯೋಗ ಸ್ಥಿರಾಸ್ತಿಯಲ್ಲಿ ಯಾವೆಲ್ಲ ವ್ಯವಹಾರವನ್ನು ಮಾಡಬಹುದು ಎಂಬುದನ್ನು ಪರಿಶಿಲನೆ ಮಾಡಿದ್ದಾರೆ. ಈ ಬಗ್ಗೆ ಗೂಗಲ್ ಒಂದು ಸಮೀಕ್ಷೆಯನ್ನು ನೀಡಿತ್ತು. ಸ್ಥಿರಾಸ್ತಿಯಲ್ಲಿ ವಿವಿಧ ಉದ್ಯೋಗಗಳನ್ನು ಮಾಡಬಹುದು ಎಂಬುದನ್ನು ಗೂಗಲ್ ತಿಳಿಸಿದೆ. 50 ಶೇಕಾಡದಷ್ಟು ಜನ ಈ ಬಗ್ಗೆ ಗೂಗಲ್ ನಲ್ಲಿ ಪರಿಶೀಲನೆ ಮಾಡಿದ್ದಾರೆ.

ಫ್ಲೈಟ್ ಅಟೆಂಡೆಂಟ್

ಫ್ಲೈಟ್ ಅಟೆಂಡೆಂಟ್ ಉದ್ಯೋಗಗಳು ಯಾವೆಲ್ಲ ಇದೆ ಮತ್ತು ಯಾವ ವಿಭಾಗದಲ್ಲಿ ಇದೆ ಎಂಬುದನ್ನು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಗೂಗಲ್ ಕೂಡ ಒಂದಿಷ್ಟು ಪರಿಚಯವನ್ನು ಮಾಡಿಕೊಟ್ಟಿದೆ. ಯುವಕರು ಮತ್ತು ಯುವತಿಯರು ಇದರಲ್ಲಿ ನಿಯಮಿತವಾಗಿದ್ದರು. ಹಾಗೂ ಉನ್ನತ ಶಿಕ್ಷಣ ಪೂರೈಸಿದ ಯುವಕ ಯುವತಿಯರು ಈ ಬಗ್ಗೆ ಪರಿಶೀಲನಬೆಯನ್ನು ಮಾಡಿದ್ದಾರೆ.

ನೋಟರಿ

ನೋಟರಿ ಉದ್ಯೋಗಗಳು ಎಷ್ಟು ಇದೆ ಎನ್ನುವುದನ್ನು ಮತ್ತು ಇದರಲ್ಲಿ ಯಾವೆಲ್ಲ ವಿಭಾಗದಲ್ಲಿ ಹುದ್ದೆಗಳು ಖಾಲಿ ಇದೆ ಎನ್ನುವುದನ್ನು ಹೆಚ್ಚು ಪರಿಶೀಲನೆ ಮಾಡಿದ್ದಾರೆ. ನೋಟರಿ ಹುದ್ದೆಗಾಗಿ ಸರ್ಕಾರಿ ಉದ್ಯೋಗಕ್ಕಾಗಿ ಹೆಚ್ಚು ಪರಿಶೀಲನೆ ಮಾಡಿದ್ದಾರೆ. ಗೂಗಲ್ ನಲ್ಲಿ ಈ ಬಗ್ಗೆ ಹೆಚ್ಚು ಪರಿಶೀಲನೆ ಮಾಡಿದ್ದಾರೆ ಗೂಗಲ್ ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಚಿಕಿತ್ಸಾಲಯ

ಕೊರೊನಾ ಸಮಯದಲ್ಲಿ ಚಿಕಿತ್ಸಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು  ಖಾಲಿ ಇತ್ತು. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಯುವಕ-ಯುವತಿಯರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಗೂಗಲ್ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದೆ ಎಂದು ಹೇಳಿದೆ. ಕೊರೊನಾ ಸಮಯದಲ್ಲಿ ಅನೇಕ ವೈದ್ಯಕೀಯ ವಿಭಾಗಗಳಲ್ಲಿ ಹುದ್ದೆಗಳು ಖಾಲಿಯಾಗಿತ್ತು.

ಪೈಲಟ್

ಪೈಲಟ್ ವಿಭಾಗದಲ್ಲಿ ಯಾವುದೆಲ್ಲ ಹುದ್ದೆಗಳ ಖಾಲಿ ಇದೆ ಎಂಬುದನ್ನು ಪರಿಶೀಲನೆಯನ್ನು ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಪೈಲಟ್ ಹುದ್ದೆ ಬಗ್ಗೆ ಮಾಹಿತಿಯನ್ನು ಗೂಗಲ್ ನಲ್ಲಿ ಪರಿಶೀಲನೆಯನ್ನು ಮಾಡಿದ್ದಾರೆ. ಯಾವೆಲ್ಲ ಸ್ಥಳದಲ್ಲಿ ಮತ್ತು ಯಾವೆಲ್ಲ ವಿಮಾನ ಕಂಪನಿಗಳಿಗೆ ಹುದ್ದೆ ಖಾಲಿ ಇದೆ ಎಂಬುದನ್ನು ಸಂಪೂರ್ಣ ಮಾಹಿತಿಯನ್ನ ಗೂಗಲ್ ನೀಡಿದೆ.

ಅಗ್ನಿಶಾಮಕ

ಅಗ್ನಿಶಾಮಕ ದಳದಲ್ಲಿ ಹುದ್ದೆ ಖಾಲಿ ಇರುವ ಬಗ್ಗೆ ಗೂಗಲ್ ನಲ್ಲಿ  ಹುಡುಕಿದ್ದಾರೆ. ಅಗ್ನಿಶಾಮಕ ದಳದಲ್ಲಿ ಯಾವೆಲ್ಲ ವಿಭಾಗದಲ್ಲಿ ಹುದ್ದೆಯನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ ಎಂಬುದನ್ನು ಗೂಗಲ್ ನಲ್ಲಿ ಪರಿಶೀಲನೆ ಮಾಡಿದ್ದಾರೆ.

ಸ್ವ-ಉದ್ಯೋಗ 

ಸ್ವ-ಉದ್ಯೋಗದ ಬಗ್ಗೆಯು ಮಾಹಿತಿಯನ್ನು ಗೂಗಲ್ ನಲ್ಲಿ ಪರಿಶೀಲನೆ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಸ್ವ-ಉದ್ಯೋಗವನ್ನು ಮಾಡಿದರವರು ಹೆಚ್ಚು, ಈ ಬಗ್ಗೆ ಮಾಹಿತಿಯನ್ನು ಗೂಗಲ್ ನಲ್ಲಿ ಕೇಳಿಕೊಂಡಿದ್ದಾರೆ. ಯಾವೆಲ್ಲ ಸ್ವ-ಉದ್ಯೋಗವನ್ನು ಮಾಡಬಹುದು ಎಂಬುದನ್ನು ಪರಿಶಿಲನೆ ಮಾಡಿದ್ದಾರೆ.

TV9 Kannada


Leave a Reply

Your email address will not be published.