ಜ.22ರ ವರೆಗೆ ತರಗತಿಗಳನ್ನು ಬಂದ್​ ಮಾಡುವಂತೆ ಜಿಲ್ಲಾಧಿಕಾರಿ ಆದೇಶ


ಮಂಡ್ಯ: ಡೆಡ್ಲಿ ಕೊರೊನಾ ಆರ್ಭಟ ರಾಜ್ಯದಲ್ಲಿ ಮತ್ತಷ್ಟೂ ಹೆಚ್ಚಿದೆ. ಜಿಲ್ಲೆಯಾದ್ಯಂತ ಅಬ್ಬರ ಮುಂದುವರೆಸಿರುವ ಹೆಮ್ಮಾರಿ ಹಲವು ಶಿಕ್ಷಕರ, ವಿದ್ಯಾರ್ಥಿಗಳ ದೇಹ ಹೊಕ್ಕು ಭೀತಿ ಸೃಷ್ಟಿಸಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ 1ರಿಂದ 7 ತರಗತಿ ವರೆಗಿನ ಭೌತಿಕ  ತರಗತಿಗಳನ್ನು ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.

ಜ.17 ರಿಂದ ಜ.22 ರ ವರೆಗೆ 1-7ನೇ ತರಗತಿ ಮಕ್ಕಳ ಭೌತಿಕ ತರಗತಿಗಳನ್ನು ಕ್ಯಾನ್ಸಲ್​ ಮಾಡುವಂತೆ ಜಿಲ್ಲಾಧಿಕಾರಿ ಅಶ್ವಥಿ ಆದೇಶಿಸಿದ್ದಾರೆ. ದಿನದಿಂದ ದಿನಕ್ಕೆ ಶಾಲಾ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ, ಕೋವಿಡ್​ ನಿಯಂತ್ರಣಕ್ಕೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ

ಸರ್ಕಾರಿ, ಖಾಸಗಿ, ಅನುದಾನಿತ, ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 7 ತರಗತಿ ವರೆಗಿನ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ. ಜೊತೆಗೆ 6 ದಿನಗಳ ಕಾಲ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿದೆ.

 

News First Live Kannada


Leave a Reply

Your email address will not be published. Required fields are marked *