ಜ.26ಕ್ಕೆ ಓಟಿಟಿಯಲ್ಲಿ ರಿಲೀಸ್​ ಆಗಲಿದೆ ಜನಮೆಚ್ಚಿದ ‘ಬಡವ ರಾಸ್ಕಲ್‌’


ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ದನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಜನವರಿ 26ರಂದು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ.

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತುಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಹಲವು ತಿರುವು ಪಡೆದು ಇವರಿಬ್ಬರು ಒಂದಾಗಲಿದ್ದಾರೆಯೇ ಎಂಬ ಪ್ರೇಮ ಕತೆ ಹಾಗೂ ಜೀವನದ ಕುರಿತು ಹಲವು ಹೊಂದಿರುವ ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು ಜನರಿಂದ ಮೆಚ್ಚುಗೆ ಪಡೆದಿದೆ. ಇದೀಗ ಪ್ರತಿಯೊಬ್ಬರ ಮನೆಬಾಗಿಲಿಯೇ ಈ ಸಿನಿಮಾ ಬರುತ್ತಿದ್ದು, ಇದೇ ಗಣರಾಜ್ಯೋತ್ಸವದ ದಿನದಂದು ಚಿತ್ರವನ್ನು ವೂಟ್ ಸೆಲೆಕ್ಟ್ ಓಟಿಟಿ ಪ್ಲಾಟ್‌ಫಾರ್ಮ್ನಲ್ಲಿ ರಿಲೀಸ್ ಆಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಟ ಡಾಲಿ ಧನಂಜಯ್, ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು, ಚಿತ್ರ ತಂಡ, ಮತ್ತೊಂದು, ಈ ಚಿತ್ರದಲ್ಲಿನ ಕತೆ. ಬಡತನದ ಸೂಕ್ಷ್ಮತೆಯಿಂದ ಈ ಚಿತ್ರ ತಂಡ ತೋರಿಸುವಲ್ಲಿ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆನ್ನಟ್ಟಿ ಯಶಸ್ವಿಯಾಗುತ್ತಾನೆ, ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೇ ಹೇಗೆಲ್ಲಾ ಕಷ್ಟ ಪಡುತ್ತಾನೇ ಎಂಬುದನ್ನು ಅತಿ ಭಾವನಾತ್ಮಕವಾಗಿ ತೋರಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ಥಿಯೇಟರ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಚಿತ್ರವೇ ನಿಮ್ಮ ಮನೆಗೆ ಬರಲು ಸಿದ್ಧವಾಗಿದೆ. ಪ್ರತಿಯೊಬ್ಬರು ವೂಟ್‌ಸೆಲೆಕ್ಟ್ನಲ್ಲಿಈಚಿತ್ರವನ್ನು ವೀಕ್ಷಿಸಿ ಎಂದು ಮನವಿ ಮಾಡಿದರು. ಈ ಚಿತ್ರವು ಐಎಂಡಿಬಿನಲ್ಲಿ 9.4 ರೇಟಿಂಗ್ ಹೊಂದಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ.

The post ಜ.26ಕ್ಕೆ ಓಟಿಟಿಯಲ್ಲಿ ರಿಲೀಸ್​ ಆಗಲಿದೆ ಜನಮೆಚ್ಚಿದ ‘ಬಡವ ರಾಸ್ಕಲ್‌’ appeared first on News First Kannada.

News First Live Kannada


Leave a Reply

Your email address will not be published. Required fields are marked *