ಬೆಂಗಳೂರು: ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದರೂ ಬೆಂಗಳೂರಲ್ಲಿ ಮಾತ್ರ ಜ.29 ರವರೆಗೂ ಶಾಲೆಗಳು ಬಂದ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದರು. ಸಿಎಂ ಬಸವರಾಜ್ ನೇತೃತ್ವದಲ್ಲಿ ನಡೆದ ಕೊರೊನಾ ಸಭೆ ಬಳಿಕ ಮಾತಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, 29ರ ನಂತರ ಬೆಂಗೂರಿಲ್ಲಿ ಶಾಲೆ ಓಪನ್ ಮಾಡೋದರ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಇನ್ನು, ಬೆಂಗಳೂರು ಬಿಟ್ಟು ಬೇರೆ ಎಲ್ಲ ಕಡೆ ಅಧಿಕಾರಿಗಳ ಅಭಿಪ್ರಾಯ ಪಡೆದು ಪಾಸಿಟಿವ್ ರೇಟ್ ನೋಡಿಕೊಂಡು ಶಾಲೆ ಆರಂಭ ಮಾಡುತ್ತೇವೆ. ಬೆಂಗಳೂರಿನಲ್ಲಿ ಪಾಸಿಟಿವ್ ಜಾಸ್ತಿ ಇದೆ. ಹೀಗಾಗಿ ಮುಂದಿನ ಶುಕ್ರವಾರ ಬೆಂಗಳೂರಲ್ಲಿ ಶಾಲೆ ತೆರೆಯೋದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಐದು ಮಕ್ಕಳಿಗೆ ಸೋಂಕು ಬಂದ್ರೆ, ಮೂರು ದಿನ ಶಾಲೆ ಬಂದ್ ಮಾಡಲಾಗುವುದು. ಇಪ್ಪತೈದು ಮಕ್ಕಳಿಗೆ ಸೋಂಕು ಬಂದ್ರೆ ಏಳು ದಿನ ಶಾಲೆ ಬಂದ್ ಮಾಡಲಾಗುವುದು. ಇದು ಜಿಲ್ಲಾವಾರು ಶಾಲೆಗಳಿಗೆ ಅನ್ವಯಿಸುತ್ತದೆ. ಆದ್ರೆ ಬೆಂಗಳೂರು ಶಾಲೆಗಳು ಸದ್ಯಕ್ಕೆ ಆರಂಭವಿಲ್ಲ ಎಂದು ಹೇಳಿದರು.