ಭಾರತೀಯ ಕಂಪನಿಯಾದ ಝೈಡಸ್ ಕ್ಯಾಡಿಲಾ ನ್ಯೂಟ್ರಲೈಜಿಂಹ್ ಮೊನೊಕ್ಲೊನಲ್ ಆ್ಯಂಟಿಬಾಡೀಸ್​​​(mAbs) ಆಧಾರಿತ ಕಾಕ್​ಟೇಲ್​ನ್ನು ಅಭಿವೃದ್ಧಿಪಡಿಸಿದ್ದು ಇದನ್ನ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್​(CDSCO)ನ ಸಬ್ಜೆಕ್ಟ್ ಎಕ್ಸ್​ಪರ್ಟ್​ ಕಮಿಟಿಯಿಂದ ಅನುಮತಿ ಪಡೆದುಕೊಂಡಿದೆ.

ಸಬ್ಜೆಕ್ಟ್ ಎಕ್ಸ್​ಪರ್ಟ್ ಕಮಿಟಿ ಝೈಡಸ್ ಕ್ಯಾಡಿಲಾದ ಬಯೋಲಜಿಕಲ್ ಥೆರಪಿ ZRC-3308, ಕೋವಿಡ್​ 19 ಚಿಕಿತ್ಸೆಗೆ ಬಳಕೆಯಾಗುವ SARS-CoV-2-ವನ್ನು ನ್ಯೂಟ್ರಲೈಜ್ ಮಾಡುವ ಮೊನೊಕ್ಲೊನಲ್ ಆ್ಯಂಟಿಬಾಡೀಸ್​ಗೆ ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿವೆ.

ಈ ಆ್ಯಂಟಿಬಾಡೀಸ್​ನ್ನು ಕ್ಲೋನಿಂಗ್ ಯೂನಿಕ್ ವೈಟ್ ಬ್ಲಡ್ ಸೆಲ್ಸ್​ಗಳಿಂದ ಮಾಡಲಾಗಿದೆ. ಇತ್ತೀಚೆಗೆ ಝೈಡಸ್ ಕ್ಯಾಡಿಲಾ ಡ್ರಗ್ ಕಂಟ್ರೋಲರ್ ಜನಲರಲ್ ಆಫ್ ಇಂಡಿಯಾ ಬಳಿಯೂ ಸಹ ಒಪ್ಪಿಗೆ ಕೇಳಿದೆ. ಅಲ್ಲದೇ ಈ ಕಾಕ್​ಟೇಲ್​ ಕೋವಿಡ್ 19 ಗೆ ಪ್ರಮುಖ ಚಿಕಿತ್ಸೆಯಾಗಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾಗೆ ವಿರುದ್ಧ ಮತ್ತೊಂದು ಅಸ್ತ್ರ; ಕಾಕ್​ಟೇಲ್ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿಗಾಗಿ ಅರ್ಜಿ

The post ಝೈಡಸ್ ಕ್ಯಾಡಿಲಾ ಸಂಸ್ಥೆಯ ಕಾಕ್​ಟೇಲ್​ ಕ್ಲಿನಿಕಲ್ ಪ್ರಯೋಗಕ್ಕೆ ಗ್ರೀನ್​​ ಸಿಗ್ನಲ್  appeared first on News First Kannada.

Source: newsfirstlive.com

Source link