ಮಂಗಳೂರು: ತೌಕ್ತೆ ಚಂಡಮಾರುತದ ನಡುವೆ ಆಳಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಟಗ್ ಬೋಟ್​​ನಲ್ಲಿರೋ 9 ಮಂದಿಯ ರಕ್ಷಣೆಗೆ ನಿನ್ನೆಯಿಂದ ಹರಸಾಹಸ ಪಡಲಾಗ್ತಿದೆ. ಕೋರಮಂಡಲ್ ಹೆಸರಿನ ಬೋಟ್​, ಕಾಪು ತೀರದಿಂದ 5 ನಾಟಿಕಲ್ ಮೈಲ್ಸ್ ದೂರದಲ್ಲಿ ಮುಲ್ಕಿ ರಾಕ್ಸ್ ಎಂಬಲ್ಲಿ ಸಿಲುಕಿದೆ. ಬೋಟ್​ನಲ್ಲಿರುವ 9 ಮಂದಿ ಸುರಕ್ಷಿತವಾಗಿದ್ದಾರೆ. ಅವರನ್ನ ಕಡಲ ತೀರಕ್ಕೆ ಕರೆತರಲು ರಕ್ಷಣಾ ಕಾರ್ಯಾಚರಣೆ ಮಾಡಲಾಗ್ತಿದೆ. ಇಂದು ಈ 9 ಜನರ ರಕ್ಷಣೆಗೆ ನೌಕಾಪಡೆಯ ಹೆಲಿಕಾಪ್ಟರ್​ ಬರಲಿದೆ.

ಇಂದು ಬೆಳಗ್ಗೆ 6:20ಕ್ಕೆ ಕೇರಳದ ಕೊಚ್ಚಿ ನೇವಲ್ ಬೇಸ್​​ನಿಂದ ಹೆಲಿಕಾಪ್ಟರ್ ಹೊರಟಿದ್ದು,  ಮಂಗಳೂರು ಏರ್​​ಪೋರ್ಟ್​ಗೆ ಬಂದಿಳಿಯಲಿದೆ. ಹವಾಮಾನ ತಿಳಿಯಾಗುತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಲಿದೆ.

ಟಗ್ನಲ್ಲಿರುವ 9 ಜನರ ರಕ್ಷಣೆಗಾಗಿ ರಾಜ್ಯ ಸರ್ಕಾರ ನೌಕಾಪಡೆಯ ಸಹಾಯ ಕೇಳಿತ್ತು. ನಿನ್ನೆ ನೌಕಾ ಪಡೆಯ ಅಧಿಕಾರಿಗಳೊಂದಿಗೆ ಮಾತುಲತೆ ನಡೆಸಿತ್ತು. ಸದ್ಯ ಕೋಸ್ಟ್​​ಗಾರ್ಡ್​ನ ಐಸಿಜಿ ವರಹ ಹಡಗು, 1 ನಾಟಿಕಲ್ ಮೈಲ್ಸ್ ದೂರದಿಂದ ಟಗ್ ಮೇಲೆ ನಿಗಾ ಇಟ್ಟಿದೆ. ಸದ್ಯಕ್ಕೆ ತೌಕ್ತೆ ಸೈಕ್ಲೋನ್ ಅಬ್ಬರ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮೂಲಕ 9 ಜನರನ್ನ ಸುರಕ್ಷಿತವಾಗಿ ಕರೆತರಲು ನೌಕಾಪಡೆಯ ಚಾಪರ್ ರೆಡಿಯಾಗಿದೆ.

The post ಟಗ್ ಬೋಟ್​​ನಲ್ಲಿ ಸಿಲುಕಿರುವ 9 ಜನರ ರಕ್ಷಣೆಗೆ ಬರಲಿದೆ ನೇವಿ ಚಾಪರ್ appeared first on News First Kannada.

Source: newsfirstlive.com

Source link