ಚಿತ್ರದುರ್ಗ: ಟಾಟಾ ಏಸ್ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಹಿರಿಯೂರು ತಾಲೂಕಿನ ನೂರಮೂರು ಕ್ರಾಸ್ ಬಳಿ ಹಿರಿಯೂರು-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಮೃತರೆಲ್ಲರೂ ಹಿರಿಯೂರು ನಗರದ ವೇದಾವತಿ ಬಡಾವಣೆಯ ತಮಿಳು ಕಾಲೋನಿ ಕಾರ್ಮಿಕರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 9 ಜನರಿಗೆ ಗಂಭೀರ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟಾಟಾ ಏಸ್​​ನಲ್ಲಿ ಕಬ್ಬಿಣದ ಲೋಡ್ ಕಾರ್ಮಿಕರನ್ನು ಕರೆದೊಯ್ಯಲಾಗ್ತಿತ್ತು. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

The post ಟಾಟಾ ಏಸ್ ಪಲ್ಟಿ: ಸ್ಥಳದಲ್ಲೇ ಮೂವರು ಕಾರ್ಮಿಕರ ದುರ್ಮರಣ appeared first on News First Kannada.

Source: News First Kannada
Read More