ಈ ಶುಕ್ರವಾರ ಸಿನಿಪ್ರಿಯರಿಗೆ ಶುಭ ಶುಕ್ರವಾರ ಅನ್ನಬಹುದು.. ಯಾಕಂದ್ರೆ ಹೊಸ ಪ್ರೇಮ ಲೋಕ ಸೃಷ್ಠಿಸರಿರುವ ಪ್ರೇಮಂ ಪೂಜ್ಯಂ ಹಾಗೂ ತರಲೆ ತುಂಟಾಟಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುವುದರ ಜೊತೆಗೆ; ಕಣ್ಣಂಚಲಿ ನೀರು ತರಿಸುವ ಟಾಮ್ ಅಂಡ್ ಜೆರಿಽ ಸಿನಿಮಾ ರಿಲೀಸ್ ಆಗಿದೆ. ಬೆಳ್ಳಿ ತೆರೆ ಮೇಲೆ ಟಾಮ್ ಅಂಡ್ ಜೆರಿಽ ಆಟ ಭರ್ಜರಿಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭು ಖುಷ್ ಆಗಿದ್ದಾನೆ..
ಟಾಮ್ ಅಂಡ್ ಜೆರಿಽ… ಹೊಸಬರ ಸಿನಿಮಾವಾದ್ರು ಹಾಡುಗಳಿಂದ ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರ.. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಏನ್ ಕಂಟೆಂಟ್ ಬೇಕೋ ಆ ಕಂಟೆಂಟ್ ನಿಂದಲೇ ಚಿತ್ರತಂಡ ಪ್ರಮೋಷನ್ ಮಾಡಿತ್ತು… ಆ ಪ್ರಮೋಷನ್ ವರ್ಕ್ ಔಟ್ ಆಗಿದ್ದು ಪ್ರೇಕ್ಷಕರು ಮಳೆಗೂ ಕ್ಯಾರೇ ಅನ್ನದೆ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ದಾರೆ.. ಅಷ್ಟೇ ಅಲ್ಲ ಚಿತ್ರ ನೋಡಿ ನಕ್ಕಿದ್ದಾರೆ, ಅತ್ತಿದ್ದಾರೆ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತನೂ ಆಡಿದ್ದಾರೆ…
ಹೊಸಬರ ಚಿತ್ರ ಅಂದ್ರೆ ಜನ ಥಿಯೇಟರ್ಗೆ ಬರಲ್ಲ ಅನ್ನೋ ಮಾತಿದೆ..ಅದ್ರೆ ಕಟೆಂಟ್ ಚೆನ್ನಾಗಿದ್ರೆ ಹೊಸಬರ ಸಿನಿಮಾವಾದ್ರು ಕನ್ನಡಿಗರು ಕೈ ಬಿಡಲ್ಲ ಅನ್ನೋದನ್ನ ಟಾಮ್ ಅಂಡ್ ಜೆರಿಽ ಚಿತ್ರದ ಮೂಲಕ ಮತ್ತೆ ಪ್ರೂ ಮಾಡಿದ್ದಾರೆ ಪ್ರೇಕ್ಷಕ ಮಹಾ ಪ್ರಭುಗಳು.. ಚಿತ್ರದ ಆರಂಭದಿಂದ ಅಂತ್ಯದವರೆಗೂ ಥಿಯೇಟರ್ ನಲ್ಲಿ ಎಂಜಾಯ್ ಮಾಡುವ ಪ್ರೇಕ್ಷಕರು ಟಾಮ್ ಅಂಡ್ ಜೆರಿಽ ಆಟಕ್ಕೆ ಮನಸೋತಿದ್ದಾರೆ..ಅಷ್ಟೇ ಅಲ್ಲ ಟಾಮ್ ಅಂಡ್ ಜೆರಿಽಚಿತ್ರಕ್ಕೆ ಪುಲ್ ಮಾರ್ಕ್ಸ್ ನೀಡಿದ್ದಾರೆ.
ಟಾಮ್ ಅಂಡ್ ಜೆರಿಽ ಚಿತ್ರದ ಟೈಟಲ್ ಕೇಳಿದ್ರೆ ಇದೊಂದು ಕಾಮಿಡಿ ಸಿನಿಮಾ ಇರಬಹುದು ಅನ್ನಿಸುತ್ತೆ.. ಅದ್ರೆ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ರೆ ಆಡಿಯನ್ಸ್ ಲೆಕ್ಕಾಚಾರ ಊಲ್ಟಾ ಆಗುತ್ತೆ… ಯಾಕಂದ್ರೆ ಚಿತ್ರದಲ್ಲಿ ಕಾಮಿಡಿ ಜೊತೆಗೆ ಭಾವನೆಗಳನ್ನು ಹದವಾಗಿ ಬೆರಸಿ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹಿಡಿದು ಕೂರಿಸುವಲ್ಲಿ ಚಿತ್ರದ ನಿರ್ದೇಶಕ ರಾಘವ್ ವಿನಯ್ ಗೆದ್ದಿದ್ದಾರೆ..
ಬದುಕಿಗೆ ಹಣವೊಂದೆ ಮುಖ್ಯವಲ್ಲ ಭಾವನೆಗಳು ಮುಖ್ಯ.. ಎಮೋಷನಲ್ ಇಲ್ಲದಿದ್ದರೆ ಬದುಕು ಕಷ್ಟ ಅನ್ನೋದನ್ನ ನಿರ್ದೇಶಕ ರಾಘವ್ ವಿನಯ್ ನವೀರಾಗಿ ಹೇಳುವುದರ ಜೊತೆಗೆ ತಂದೆ ತಾಯಿಯ ಬಾಂಧವ್ಯವನ್ನು ಅಚ್ಚು ಕಟ್ಟಾಗಿ ಹೇಳಿದ್ದಾರೆ..
ಚಿತ್ರದಲ್ಲಿ ನಾಯಕನ ತಂದೆ ತಾಯಿ ಪಾತ್ರದಲ್ಲಿ ಜೈಗದೀಶ್ ಮತ್ತು ತಾರ ಅದ್ಬುತವಾಗಿ ನಟಿಸಿದ್ದಾರೆ.. ಅದರಲ್ಲೂ ತಾರ ಅವರ ಪಾತ್ರ ಕಲ್ಲು ಹೃದಯಕ್ಕೂ ಕಣ್ಣೀರು ತರಿಸುತ್ತೆ… ಇನ್ನು ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನಿಶ್ಚಿತ್ ಕೊರೊಡಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆಕ್ಷನ್, ಲವ್, ಎಮೋಷನಲ್, ಕಾಮಿಡಿ ಎಲ್ಲವನ್ನು ನಿಭಾಯಿಸಿದ್ದು, ಚಂದನವನದಲ್ಲಿ ನೆಲೆ ನಿಲ್ಲುವ ಸೂಚನೆ ಕೊಟ್ಟಿದ್ದಾರೆ.. ಇನ್ನು ನಾಯಕಿ ಯಾಗಿ ಕಾಣಿಸಿರುವ ಚೈತ್ರಾ ಸರ ಪಟಾಕಿಯಂತೆ ಪಟಪಟನೆ ಡೈಲಾಗ್ ಸಿಡಿಸಿದ್ದಾರೆ..ಅಲ್ಲದೆ ಸ್ಕ್ರೀನ್ ಮೇಲೆ ಮುದ್ದಾಗಿ ಕಾಣಿಸುವ ಮೂಲಕ ಪಡ್ಡೆ ಹೈಕಳ ಹಾರ್ಟ್ಗೆ ಬಾಣ ಬಿಟ್ಟಿದ್ದಾರೆ..
ಮೊದಲಾರ್ಧ ಪ್ರೇಕ್ಷಕರಿಗೆ ಕೊಂಚ ಕಿರಿಕಿರಿ ಅನಿಸಿದ್ರು. ದ್ವಿತೀಯಾರ್ಧದಲ್ಲಿ ಕಥೆ ಪ್ರೇಕ್ಷಕರನ್ನ ಕಟ್ಟಿ ಹಾಕುತ್ತೆ.. ಚಿತ್ರದಲ್ಲಿ ರೀ ರೆಕಾರ್ಡಿಂಗ್ ಹಾಗೂ ಹಾಡುಗಳು ಸಂಗೀತ ಪ್ರಿಯರಿಗೆ ಹಬ್ಬದೂಟದಂತಿದೆ. ಅದರಲ್ಲೂ ಹಾಯಾಗಿದೆ ಎದೆಯೊಳಗೆ ಹಾಡು ಬರ್ತಿದಂತೆ. ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಸಖಾತಾಗೆ ಸೌಂಡ್ ಮಾಡುತ್ತವೆ..
ಇಂದು ಟಾಮ್ ಅಂಡ್ ಜೆರ್ರಿ ಸಿನಿಮಾ ನೂರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು ಒಳ್ಳೆ ಒಪನಿಂಗ್ ಸಿಕ್ಕಿದೆ. ಚಿತ್ರತಂಡ ನವರಂಗ್ ಚಿತ್ರಮಂದಿರಲ್ಲಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.. ಕೊರೊನದಿಂದ ಡಿಸ್ಟರ್ಬ್ ಆಗಿದ್ದ ಮಂದಿಗೆ ಟಾಮ್ ಅಂಡ್ ಜೆರಿಽ ಒಳ್ಳೆ ಎಂಟರ್ಟೈನ್ಮೆಂಟ್ ಟಾನಿಕ್..