ಟಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾದ ಕನ್ನಡದ ‘ಏಕ್​ಲವ್ಯಾ’ಗೆ ಸಾಥ್​ ಕೊಡ್ತಾರಾ ಟಾಲಿವುಡ್​ ಸ್ಟಾರ್ಸ್?

ಟಾಲಿವುಡ್ ಸೂಪರ್ ಸಿಂಗರ್ ಮಂಗ್ಲಿ ಕಂಠದಲ್ಲಿ  ಏಕ್ ಲವ್ಯಾನ ಎಣ್ಣೆ ಹಾಡನ್ನು ಹಾಡಿಸಿ ಶೋಮ್ಯಾನ್ ಪ್ರೇಮ್ ಚಿತ್ರಪ್ರೇಮಿಗಳ ಕಿಕ್ ಹೆಚ್ಚಿಸಿದ್ರು…ಸದ್ಯ ಈ ಹಾಡು 5ಮಿಲಿಯನ್ ಗೂ ಹೆಚ್ಚು ಮಂದಿ ಈಹಾಡನ್ನು ನೋಡಿದ್ದಾರೆ..ಅಲ್ಲದೆ ಪ್ರೇಮ್ ಮುಂದಿನ ಘೋಕ್ಷಣೆ ಏನು ಅಂತ ಕಾಯ್ತಿದ್ದಾರೆ.. ಅದ್ರೆ ಈಗ್ಯಾಫ್ನಲ್ಲಿ ಪ್ರೇಮ್ ಬದಲು ಸುಂಟರಗಾಳಿ ರಕ್ಷಿತಾ ಅವರ ತಮ್ಮ ‘ಏಕ್ ಲವ್ಯಾ’ನನ್ನು ಟಾಲಿವುಡ್ಗೆ ಪರಿಚಯ ಮಾಡೊಕೆ ಭರ್ಜರಿಯಾಗಿ  ಪ್ಲಾನ್ ಮಾಡಿಕೊಳ್ತಿದ್ದಾರೆ.

 

ಪ್ರೇಮ್ ಸಿನಿಮಾ‌ಗಳೇ ಹಾಗೆ ಕಲರ್ ಪುಲ್ ಮೇಕಿಂಗ್. ಭರ್ಜರಿ ಪ್ರಚಾರದ ಮೂಲಕವೇ ಗಾಂಧಿನಗರದಲ್ಲಿ ಧೂಳ್ ಎಬ್ಬಿಸ್ತಾವೆ.. ಬೇರೆ ನಟರ ಸಿನಿಮಾಗಳನ್ನೇ ಇಷ್ಟು ಅದ್ದೂರಿಯಾಗಿ ಮಾಡುವ ಪ್ರೇಮ್  ಬಾಮೈದನ ಸಿನಮಾಗೆ ಕೇಳಬೇಕಾ..? ಬಾಮೈದಾ ರಾಣ ಹೊಸ ಹೀರೋ ಅನ್ನೋದನ್ನು ಸೈಡ್ಗಿಟ್ಟು ಸ್ಟಾರ್ ಹೀರೋ ಲೆವೆಲ್ನಲ್ಲಿ ಇಂಡಸ್ಟ್ರಿಗೆ ಕರ್ಕೊಂಡ್ ಬಂದಿದ್ದಾರೆ ಪ್ರೇಮ್..ನಿರೀಕ್ಷೇಗೂ ಮೀರಿದ ಬಜೆಟ್ನಲ್ಲಿ ಏಕ್ ಲವ್ಯಾ ಸಿನಿಮಾ ಮಾಡಿರುವ ಪ್ರೇಮ್ 5 ಭಾಷೆಗಳಿಗೆ ರಾಣನ ಕರೊದ್ಯೋಯಲು ಸಜ್ಜಾಗಿದ್ದಾರೆ..

ಶೂಟಿಂಗ್ ಮುಗಿಸಿ ಕಲರ್ ಪುಲ್ ಕಾರ್ಯಕ್ರದ ಮೂಲಕ ಏಕ್ ಲವ್ಯಾನ ಎಣ್ಣೆ ಹಾಡನ್ನು ರಿಲೀಸ್ ಮಾಡಿರುವ  ಪ್ರೇಮ್ ಏಕ್ ಲವ್ಯಾನ ಪ್ರಮೋಶನ್ ಕೆಲಸದಲ್ಲಿ ಅಂಬೆಗಾಲಿಟ್ಟಿದ್ರು.. ಈಗಾಗಲೇ ಏಕ್ ಲವ್ಯಾ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಪ್ರೇಮ್. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದಂತೆ ಪ್ರಮೋಶನ್ ವಿಚಾರವಾಗಿ ಪ್ರೇಮ್ ಮತ್ತು ರಕ್ಷೀತಾ ಸೌಥ್ ಇಂಡಿಯಾ ಪೂರ್ತಿ ಮ್ಯಾರಥಾನ್ ಮಾಡಲು ಸಜ್ಜಾಗ್ತಿದ್ದಾರೆ.

ಮುಂದಿನ ವರ್ಷ ಜನವರಿ 21ಕ್ಕೆ ಏಕ್ ಲವ್ ಯಾ ಚಿತ್ರವನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡೋಕೆ  ಪ್ಲಾನ್ ಮಾಡಿರುವ ಪ್ರೇಮ್..ಹೈದರಬಾದ್ನಲ್ಲಿ  ಅದ್ದೂರಿ ಕಾರ್ಯಕ್ರದ ಮೂಲಕ ರಾಣನನ್ನು  ಟಾಲಿವುಡ್ಗೆ ಪರಿಚಯ ಮಾಡಿಸೋಕೆ ಪ್ರೇಮ್ ಮತ್ತು ರಕ್ಷಿತಾ ಭರ್ಜರಿಯಾಗಿ ಪ್ಲಾನ್ ಮಾಡಿಕೊಂಡಿದ್ದಾರೆ..ಜನವರಿಯಲ್ಲಿ ಹೈದರಾಬಾದ್ನಲ್ಲಿ ಗ್ರಾಂಡ್ ಆಗಿ  ಏಕ್ ಲವ್ಯಾ ಪ್ರಿ ರಿಲೀಸ್ ಇವೆಂಟ್ ಮಾಡಲು ಪ್ರೇಮ್ ಮತ್ತು ರಕ್ಷಿತಾ ನೀಲನಕ್ಷೆ ಸಿದ್ದ ಪಡಿಸಿದ್ದಾರೆ.ಇನ್ನು ಈ ಕಾರ್ಯಕ್ರಮಕ್ಕೆ ಗೆಸ್ಟ್ಗಳಾಗಿ   ಟಾಲಿವುಡ್ ಸ್ಟಾರ್ ಗಳಾದ ಮಹೇಶ್ ಬಾಬು,ಜೂನಿಯರ್ ಎನ್ಟಿ ಅರ್,ರವಿತೇಜ,ಜಗಪತಿ ಬಾಬು ಹಾಗೂ ಸ್ಟಾರ್ ಡೈರೆಕ್ಟರ್ ಪೂರಿಜಗನಾಥ್  ಅವರನ್ನು ಆಹ್ವಾನಿಸೋಕೆ ರಕ್ಷಿತಾ ರೆಡಿಯಾಗಿದ್ದಾರೆ.

ರಕ್ಷಿತಾ ಇಡಿಯಟ್ ಚಿತ್ರದ ಮೂಲಕ ಟಾಲಿವುಡ್ನಲ್ಲೂ ಚಿರಪರಿಚಿತರಾಗಿದ್ದಾರೆ.. ಅಲ್ಲದೆ ಮಹೆಶ್ ಬಾಬು, ರವಿತೇಜ,ಪೂರಿ ಜಗನಾಥ್ ರಕ್ಷಿತಾಗೆ ಉತ್ತಮ ಸ್ನೇಹಿತರಾಗಿದ್ದು, ಹೈದರಬಾದ್ನಲ್ಲಿ ನಡೆಯುವ ಏಕ್ ಲವ್ಯಾ ಪ್ರೀರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಲು ಟಾಲಿವುಡ್ ಸ್ಟಾರ್ಗಳನ್ನು ರಕ್ಷಿತಾ ಆಹ್ವಾನ ನೀಡಿದ್ದು, ರಕ್ಷಿತಾ ತಮ್ಮ ರಾಣನ ಟಾಲಿವುಡ್ಗೆ ವೆಲ್ಕಮೆ್ ಮಾಡಲು ಟಾಲಿವುಡ್ ಸ್ಟಾರ್ಗಳು ಒಂದೇ ವೇದಿಕೆಯಲ್ಲಿ ಕಾಣಿಸ್ತಾರೆ ಅನ್ನೋ ಮಾಹಿತಿ ಪ್ರೇಮ್ ಬಳಗದಿಂದ ಲಭ್ಯವಾಗಿದೆ..ಅಲ್ಲದೆ ಈ ಕಾರ್ಯಕ್ರಮಕ್ಕೂ ಮೊದಲೆ ಮಂಗಲಿ ಹಾಡಿರುವ ಎಣ್ಣೆ ಹಾಡಿನ ತೆಲುಗು ವರ್ಸನ್ ಸಾಂಗ್ ಅನ್ನು ಲಾಂಚ್ ಮಾಡಲು ಶೋಮ್ಯಾನ್ ಪ್ರೇಮ್  ಸಜ್ಜಾಗಿದ್ದಾರೆ.

ಪ್ರಮೋಶನ್ ಮಾಡಿದ್ರೆ  ಇತರ ಮಾಡಬೇಕು ಅಂಥ ತೋರಿಸಿರುವ ಪ್ರೇಮ್.. ಈಗ ಬಾಮೈದನ ಚಿತ್ರಕ್ಕೆ ಭರ್ಜರಿಯಾಗಿ ಪ್ರಮೋಶನ್ ಮಾಡಿ ಚಿತ್ರಪ್ರೇಮಿಗಳಿಗೆ ಗ್ರಾಂಡ್ ಆಗಿ ಇನ್ವಿಟೇಶನ್ ಕೊಟ್ಟು ,ಏಕ್ ಲವ್ಯಾ ಚಿತ್ರವನ್ನು ಅದ್ದೂರಿಯಾಗಿ ರಿಲೀಸ್ ಮಾಡಲು ಪ್ರೇಮ್ ಪ್ಲಾನ್ ಮಾಡಿಕೊಂಡಿದ್ದಾರೆ..

The post ಟಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾದ ಕನ್ನಡದ ‘ಏಕ್​ಲವ್ಯಾ’ಗೆ ಸಾಥ್​ ಕೊಡ್ತಾರಾ ಟಾಲಿವುಡ್​ ಸ್ಟಾರ್ಸ್? appeared first on News First Kannada.

News First Live Kannada

Leave a comment

Your email address will not be published. Required fields are marked *