ಕನ್ನಡ ಸಿನಿ ಲೋಕದಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡ ಬ್ಯುಟಿಫುಲ್ ನಟಿ ರೂಪಿಕಾ ಅಪ್ಪು. ಕಳೆದ ಐದಾರು ವರ್ಷಗಳಿಂದ ತನ್ನ ಪಾಲಿಗೆ ಬಂದ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿರೋ ನಟಿಮಣಿ ರೂಪಿಕಾ ನಿಜಕ್ಕೂ ಪ್ರತಿಭಾವಂತೆ. ಆದರೆ ಅದೃಷ್ಟ ಅನ್ನೋ ಗೆಲುವು ರೂಪಿಕಾ ಸಿನಿ ಬಾಳಿಗೆ ಬೇಕಾಗಿದೆ. ಕನ್ನಡದಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳನ್ನ ಮಾಡಿ ಪ್ರೇಕ್ಷಕರ ಮನ ಗೆದ್ದಿರೋ ರೂಪಿಕಾ ಈಗ ಟಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ.

‘ಚಿಲ್ ಬ್ರೋ’ ಇದು ನಟಿ ರೂಪಿಕಾ ನಟನೆಯ ತೆಲುಗು ಸಿನಿಮಾದ ಹೆಸರು. ಎರಡನೇ ಲಾಕ್​​ಡೌನ್​​ಗೂ ಮುನ್ನ ಟಾಲಿವುಡ್ ಅಂಗಳಕ್ಕೆ ಹೋಗಿ ‘ಚಿಲ್ ಬ್ರೋ’ ಸಿನಿಮಾದಲ್ಲಿ ನಟಿಸಿ ಬಂದಿದ್ದರು ರೂಪಿಕಾ. ಈಗ ರೂಪಿಕಾ ಅವರ ಮೊದಲ ತೆಲುಗು ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸಿನಿಮಾ ರಿಲೀಸ್​ಗೂ ಮೊದಲು ‘ಚೇಸ್ಕುನ್ನ ಗಾಯಮೆ’ (Chesukunna Gayame) ಅನ್ನೋ ಹಾಡೊಂದರ ಪ್ರೋಮೋವನ್ನ ಬಿಡುಗಡೆ ಮಾಡಿದೆ ಚಿತ್ರತಂಡ.

ಪ್ರವೀಣ್ ಕೇಸರಿ, ಸೂರ್ಯ ಶ್ರೀನಿವಾಸ್ ಹಾಗೂ ರೂಪಿಕಾ ನಟನೆಯ ತೆಲುಗು ಪ್ರೇಮ ಕಾವ್ಯ ‘ಚಿಲ್ ಬ್ರೋ’.. ಕುಂಚಮ್ ಶಂಕರ್ ಕಲ್ಪನೆಯಲ್ಲಿ ಈ ಚಿತ್ರ ಮೂಡಿಬಂದಿದೆ. ಹಾಡಿನ ಮೂಲಕ ಪ್ರೇಕ್ಷಕರನ್ನ ಸೇಳೆಯಲು ಮುಂದಾಗಿರೋ ಚಿತ್ರತಂಡಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಹಾಡಿನ ಪ್ರೋಮೋ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಒಟ್ಟಿನಲ್ಲಿ ಕನ್ನಡದ ಮುದ್ದು ನಟಿ ರೂಪಿಕಾ ತೆಲುಗು ಸಿನಿಮಾದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆಲ್ ದಿ ಬೆಸ್ಟ್ ರೂಪಿಕಾ ಅಪ್ಪು.

The post ಟಾಲಿವುಡ್​​ನಲ್ಲಿ ರೂಪಿಕಾ ಅಪ್ಪು ಮಿಂಚು.. ಚಿಲ್​ ಬ್ರೋ ಅಂತಿದ್ದಾರೆ ಕನ್ನಡದ ನಟಿ appeared first on News First Kannada.

Source: newsfirstlive.com

Source link