ಟಾಲಿವುಡ್​​​ಗೆ ಎಂಟ್ರಿಕೊಟ್ಟ ಸಲಗ.. ಲೆಜೆಂಡ್ ಬಾಲಯ್ಯ ಎದುರು ಕನ್ನಡ ಸ್ಟಾರ್..!


‘ಸಲಗ’ ಸಕ್ಸಸ್​ ಆಯ್ತು. ದುನಿಯಾ ವಿಜಯ್​ ಡೈರೆಕ್ಷನ್​​ನಲ್ಲೂ ಗೆಲುವು ಕಂಡ್ರು. ಈಗ ನೆಕ್ಸ್ಟ್​ ಸಿನಿಮಾ ಯಾವುದು ಅಂತ ಕುತೂಹಲ. ಇದರ ಮಧ್ಯೆ ವಿಜಿ ಸಾಹೇಬ್ರು ಟಾಲಿವುಡ್​​ನಲ್ಲೊಂದು ಚಿತ್ರ ಮಾಡ್ತಿರೋದು ಹೇಳಿದ್ವಲ್ಲ. ಆ ಚಿತ್ರ ಅಧಿಕೃತವಾಗಿ ಸ್ಟಾರ್ಟ್​ ಆಗಿದೆ. ಹೇಗಿತ್ತು, ದುನಿಯಾ ವಿಜಯ್ ಚೊಚ್ಚಲ ಟಾಲಿವುಡ್ ಚಿತ್ರದ ಆರಂಭ? ಮುಂದೆ ಓದಿ..

ಸಲಗ ಸಕ್ಸಸ್ ನಂತರ ದುನಿಯಾ ವಿಜಯ್ ಮುಂದಿನ ಚಿತ್ರ ಯಾವುದು ಅನ್ನೋ ಇಂಟ್ರೆಸ್ಟ್ ಜಾಸ್ತೀ ಇದೆ. ತಾವೇ ಡೈರೆಕ್ಟ್ ಮಾಡ್ತಾರಾ ಅಥವಾ ಬೇರೆಯವರ ಡೈರೆಕ್ಷನ್​ನಲ್ಲಿ ಆ್ಯಕ್ಟ್ ಮಾಡ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಿಗಿದೆ. ಈ ಬೆಳವಣಿಗೆ ಮಧ್ಯನೇ ಟಾಲಿವುಡ್ ಚೊಚ್ಚಲ​​ ಪ್ರಾಜೆಕ್ಟ್​ ಸ್ಟಾರ್ಟ್​ ಆಗಿದೆ.

ದುನಿಯಾ ವಿಜಯ್ ತೆಲುಗು ಚಿತ್ರ ಸ್ಟಾರ್ಟ್​

ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ನಟಿಸುತ್ತಿರುವ 107ನೇ ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಗೋಪಿಚಂದ್ ಮಲಿನೇನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. NBK107 ಸಿನಿಮಾದ ಮುಹೂರ್ತ ನಿನ್ನೆ ನೆರವೇರಿದ್ದು, ಬಾಲಕೃಷ್ಣ, ಶ್ರುತಿ ಹಾಸನ್, ಭಾಗಿಯಾಗಿದ್ದರು. ದುನಿಯಾ ವಿಜಿಗೆ ಚೊಚ್ಚಲ ತೆಲುಗು ಸಿನಿಮಾ ಇದಾಗಿದ್ದು, ಮುಹೂರ್ತದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಶೀಘ್ರದಲ್ಲೇ ಶೂಟಿಂಗ್​ಗೆ ಸೇರಿಕೊಳ್ಳಲಿದ್ದಾರೆ.

ತೆಲುಗು ಚಿತ್ರಕ್ಕಾಗಿ ದುನಿಯಾ ವಿಜಯ್ ಈಗಾಗಲೇ ಮೇಕ್ ಓವರ್ ಮಾಡಿಕೊಂಡಿದ್ದು, ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಕೃಷ್ಣ ಚಿತ್ರದಲ್ಲಿ ವಿಜಿಯದ್ದು ಯಾವ ಪಾತ್ರ, ಹೇಗಿರಲಿದೆ ಎನ್ನುವುದು ಸದ್ಯಕ್ಕೆ ಸೀಕ್ರೆಟ್ ಆಗಿದೆ. ಆದರೆ, ಒಂದು ಪವರ್​ಫುಲ್ ಕ್ಯಾರೆಕ್ಟರ್ ಎನ್ನಲಾಗಿದೆ. ಮೊದಲೇ ಬಾಲಯ್ಯ ಅಂದ್ರೆ ತೆಲುಗು ಇಂಡಸ್ಟ್ರಿಯ ಬಿಗ್ಗೆಸ್ಟ್ ಪವರ್. ಆ ಪವರ್ ಜೊತೆ ಸಲಗ ಸೇರಿರೋದು ಹೈ ಎಕ್ಸ್​​ಪೆಕ್ಟೇಶನ್ ಇದೆ.

ಇನ್ನು ಸಲಗ ಸಿನಿಮಾದ ಸಕ್ಸಸ್ ನಂತರ ದುನಿಯಾ ವಿಜಯ್ ಮತ್ತಷ್ಟು ಚಿತ್ರಗಳನ್ನು ನಿರ್ದೇಶಿಸುವ ಸುಳಿವು ಕೊಟ್ಟಿದ್ದರು. ಆದರೆ, ಮುಂದಿನ ಸಿನಿಮಾನೇ ಡೈರೆಕ್ಟ್ ಮಾಡ್ತಾರಾ ಎನ್ನುವುದಕ್ಕೆ ಉತ್ತರ ಇಲ್ಲ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಮ್ಮ ಮುಂದಿನ ಚಿತ್ರದ ಅಪ್​ಡೇಟ್ ಅನೌನ್ಸ್ ಮಾಡುವ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿವರೆಗೂ ಆ ಎಕ್ಸ್​ಪೆಕ್ಟೇಷನ್ ಹಾಗೆ ಇರಲಿ.

News First Live Kannada


Leave a Reply

Your email address will not be published. Required fields are marked *