"ಮಠ" ನಿರ್ದೇಶಕ ಗುರುಪ್ರಸಾದ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಫೇಸ್‌ಬುಕ್  ಲೈವ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗುರುಪ್ರಸಾದ್ ಒಂದು ವೇಳೆ ನಾನು ಕೊರೋನಾದಿಂದ ಸತ್ತರೆ ಅದಕ್ಕೆ ಈ ಸರ್ಕಾರದ ಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದ್ದಾರೆ.

"ನಾನು ಕೊರೋನಾ ಪಾಸಿಟಿವ್ ಬಂದಿರೋ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನನ್ನ ಮನೆಯವರೆಗೆ ಕೊರೋನಾವನ್ನು ತಂದು ಬಿಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರಿಗೆ ಧನ್ಯವಾದ.

"ಒಂದೊಂದು ಮನೆಗೂ ವೈರಸ್ ಹಂಚುತ್ತಿದ್ದೀರಲ್ಲಾ, ನನಗೆ ವೈರಸ್ ತಂದು ಕೊಟ್ಟವರಿಗೆ ಧಿಕ್ಕಾರವಿರಲಿ. ರಾಜಕೀಯ ಅನ್ನೋದು ಬ್ಯುಸಿನೆಸ್ ಅಲ್ಲ, ಮನೆ ಮನೆಯಲ್ಲಿಯೂ ಕೊರೋನಾದಿಂದ ಸಾಯುತ್ತಿರುವುದಕ್ಕೆ ಆರೋಗ್ಯ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಅವರೇ ಕಾರಣ, ರಾಜಕಾರಣಿಗಳಾರೂ ಸಾಚಾಗಳಲ್ಲ.

"ಇದು ನನ್ನ ಡೆತ್ ನೋಟ್" ಎಂದಿರುವ ಗುರುಪ್ರಸಾದ್ ಜಾರಕಿಹೋಳಿ ಸಿಡಿ ಬಗ್ಗೆ ಸಹ ಮಾತನಾಡಿದ್ದಾರೆ. "ಜಾರಕಿಹೋಳಿ ಸಿಡಿ ಬಗ್ಗೆ ದಿನವಿಡೀ ತೋರಿಸುವ ಅಗತ್ಯವೇನಿದೆ? ಅದು ಪ್ರಕೃತಿ-ಪುರುಷನ ಸಹಜ ಧರ್ಮ, ಅದು ನಮಗೇಕೆ ಬೇಕು? ನಮಗೆ ಬೇಕಾದ್ದು ಪ್ರತಿಯೊಬ್ಬರನ್ನೂ ಸಾಕುವುದು, ರಕ್ಷಿಸುವುದು. ಪ್ರತಿ ಪ್ರಜೇಗಳಿಗೆ ತೊಂದರೆ ಏನಿದೆ ನೋಡಿ ಪರಿಹರಿಸಬೇಕು" ಎಂದಿದ್ದಾರೆ.

"ದುಡ್ಡು ಮುಖ್ಯವಲ್ಲ, ಮನುಷ್ಯ ಮುಖ್ಯ, ಮೆಡಿಕಲ್ ಮಾಫಿಯಾ ಮಾಡಬೇಡಿ. ಹಾನೆಸ್ಟ್ ಆಗಿ ದುಡಿಯುವವರ ಶಾಪಗಳು ನಿಮ್ಮನ್ನು ಸುಮ್ಮನೆ ಬಿಡಲಾರದು" ಎಂದು ಅವರು ಎಚ್ಚರಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More