ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ | Is That Naga Chaitanya Dating with Sobhita Dhulipala after he take divorce from Samantha


ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ

ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ?

ನಾಗ ಚೈತನ್ಯ ಅವರು ಟಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರು. ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹುಟ್ಟಿಕೊಂಡಿತ್ತು. ಆದರೆ, ಆ ಬಗ್ಗೆ ಅಕ್ಕಿನೇನಿ ಕುಟುಂಬದ ಯಾರೊಬ್ಬರೂ ಮೌನ ಮುರಿದಿಲ್ಲ.

ಟಾಲಿವುಡ್ (Tollywood) ನಟ ನಾಗ ಚೈತನ್ಯ (Naga Chaitanya) ಹಾಗೂ ನಟಿ ಸಮಂತಾ ಇಬ್ಬರೂ ವಿಚ್ಛೇದನ ಪಡೆದು ಬೇರೆ ಆದ ನಂತರದಲ್ಲಿ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ಕೆಲವರು ಸಮಂತಾ ವಿರುದ್ಧ ಆರೋಪ ಹೊರಿಸಿದರೆ ಇನ್ನೂ ಕೆಲವರು ನಾಗ ಚೈತನ್ಯ ಅವರ ಮೇಲೆ ಅನುಮಾನಪಟ್ಟರು. ಆದರೆ, ಇವರ ದಾಂಪತ್ಯ ಮುರಿದು ಬೀಳಲು ನಿಜವಾದ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ಮಧ್ಯೆ ನಾಗ ಚೈತನ್ಯ ಬಗ್ಗೆ ಹೊಸ ವದಂತಿ ಒಂದು ಹುಟ್ಟಿಕೊಂಡಿದೆ. ಟಾಲಿವುಡ್ ನಟಿ ಶೋಭಿತಾ ಧುಲಿಪಾಲ (Sobhita Dhulipala) ಜತೆ ಅವರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಾಗ ಚೈತನ್ಯ ಅವರು ಟಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರು. ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹುಟ್ಟಿಕೊಂಡಿತ್ತು. ಆದರೆ, ಆ ಬಗ್ಗೆ ಅಕ್ಕಿನೇನಿ ಕುಟುಂಬದ ಯಾರೊಬ್ಬರೂ ಮೌನ ಮುರಿದಿಲ್ಲ. ಹೀಗಿರುವಾಗಲೇ ನಾಗ ಚೈತನ್ಯ ಬಗ್ಗೆ ಹೊಸಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿವೆ.

ಶೋಭಿತಾ ಅವರು ‘ಮೇಜರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಭಾಗಿಯಾಗುವಾಗ ಹೈದರಾಬಾದ್​ನ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ನಾಗ ಚೈತನ್ಯ ಹಾಗೂ ಶೋಭಿತಾ ಪರಸ್ಪರ ಹಲವು ಬಾರಿ ಭೇಟಿ ಆಗಿದ್ದಾರೆ. ಇನ್ನು ನಾಗ ಚೈತನ್ಯ ಅವರ ಹೈದರಾಬಾದ್​ ಮನೆಯಲ್ಲಿ ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ ಎನ್ನಲಾಗುತ್ತಿದೆ. ಕೆಲವರು ಇದನ್ನು ವದಂತಿ ಎಂದು ದೂರಿದರೆ, ಇನ್ನೂ ಕೆಲವರು ಇದೇ ನಿಜ ಎಂದು ನಂಬಿದ್ದಾರೆ.

TV9 Kannada


Leave a Reply

Your email address will not be published.