ಟಾಲಿವುಡ್ ಬಾಕ್ಸಾಫೀಸ್​ನಲ್ಲಿ ಮಾವ-ಅಳಿಯ ವಾರ್..?

ಸಿನಿಮಾ ರಿಲೀಸ್ ವಿಚಾರದಲ್ಲಿ ಚಿತ್ರರಂಗ ಗೊಂದಲದ ಗೂಡಾಗಿದೆ.. ನಮ್ಮೂರಲ್ಲಿ ಅಷ್ಟೇ ಅಲ್ಲ ಪಕ್ಕದೂರಲ್ಲೂ ಸಿನಿಮಾ ರಿಲೀಸ್ ವಿಚಾರದಲ್ಲಿ ಕನ್ಫ್ಯೂಸೋ ಕನ್ಫ್ಯೂಸ್.. ಯಾರು ಯಾರ ಆಪೋಜಿಟ್ ಆಗಿ ಬಂದು ನಿಲ್ತಾರೋ ಗೊತ್ತೇ ಆಗ್ತಿಲ್ಲ.. ಈಗ ವಿಷಯವೇನು ಗೊತ್ತಾ.. ಟಾಲಿವುಡ್ ಸಿನಿಮಾ ಪ್ರಪಂಚದಲ್ಲಿ ಮಾವ ಅಳಿಯ ಬಾಕ್ಸ್ ಆಫೀಸ್ ವಾರ್ ಮಾಡಲು ಸಜ್ಜಾಗಿದ್ದಾರೆ.. ಈ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್ ನಿಮಗಾಗಿ..

ಟಾಲಿವುಡ್ನಲ್ಲಿ ಎನ್.ಟಿ.ಆರ್ ಫ್ಯಾಮಿಲಿ, ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿಯ ಕಲಾವಿದರ ಸಿನಿಮಾಗಳ ನಡುವೆ ಆಗಾಗ ಬಾಕ್ಸಾಫೀಸ್ ವಾರ್ ಆಗ್ತಾಲೇ ಇರುತ್ತೆ.. ಎನ್.ಟಿ.ಆರ್- ಮೆಗಾಸ್ಟಾರ್ ಈ ಇಬ್ಬರ ಫ್ಯಾಮಿಲಿಯಂತೆ ಬೇರೆ ಸ್ಟಾರ್ ನಟರ ವಾರ್​ಗಳು ತೆಲುಗು ಸಿನಿಮಾ ಭೂಮಿಯಲ್ಲಿ ಆಗ್ತಾ ಇದ್ರೂ ಇವ್ರಂಗೆ ಪೈಪೋಟಿಯ ಮನರಂಜನೆ ಕಂಡುಬರಲ್ಲ.. ಆದ್ರೆ ಇದು ಟೋಟಲ್ ಉಲ್ಟಾ ಪಲ್ಟಾ.. ಮೆಗಾ ಫ್ಯಾಮಿಲಿಯ ಸ್ಟಾರ್ಸ್​​ಗಳೇ ಬಾಕ್ಸಾಫೀಸ್ ವಾರ್ ಮಾಡೋ ಸೂಚನೆ ಸಿಕ್ತಿದೆ.

ಟಾಲಿವುಡ್ ಬಾಕ್ಸಾಫೀಸ್​ನಲ್ಲಿ ಮಾವ-ಅಳಿಯ ವಾರ್..?

ಅಲ್ಲು ಅರ್ಜುನ್ ಚಿತ್ರದ ಎದುರು ಮೆಗಾಸ್ಟಾರ್ ಸಿನಿಮಾ..?

ಮೆಗಾಸ್ಟಾರ್ ಫ್ಯಾಮಿಲಿ.. ಈ ಫ್ಯಾಮಿಲಿಯ ದೊಡ್ಡ ಆಲದ ಮರ ಚಿರಂಜೀವಿ.. ಚಿರು ಬಂದು ಟಾಲಿವುಡ್ನಲ್ಲಿ ನಿಂತ ಮೇಲೆ ಅವರ ಹಿಂದೆ ಅವರ ಸಹೋದರರು ಅವರ ತಂಗಿ ಮಕ್ಕಳು ಸ್ಟಾರ್ ನಟರಾಗಿ ತೆಲುಗು ಸಿನಿಮಾ ರಂಗದಲ್ಲಿ ನೆಲೆ ನಿಂತರು.. ಇವತ್ತಿಗೂ ಚಿರಂಜೀವಿ ಅವರೇ ಮೆಗಾ ಫ್ಯಾಮಿಲಿಯ ಯಜಮಾನ.. ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ.. ಆದ್ರೆ ಕೊರೊನಾ ಕಾಲದಲ್ಲಿ ಏನ್ ಬೇಕಾದ್ರು ಆಗಬಹುದು.. ಅಲ್ಲು ಅರ್ಜುನ್ ಸಿನಿಮಾ ಮತ್ತು ಚಿರಂಜೀವಿ ಒಟ್ಟಿಗೆ ರಿಲೀಸ್ ಆಗಲು ಮುಂದಾಗಿವೆ..

ಹೌದು.. ಇಂಥದೊಂದು ಸಮಾಚಾರ ಟಾಲಿವುಡ್ನಿಂದ ಸ್ಯಾಂಡಲ್ವುಡ್ ತನಕ ಹಬ್ಬಿದೆ.. ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ.. ಈ ಪುಷ್ಪ ಪಾರ್ಟ್ 1 ಸಿನಿಮಾ ಎರಡು ಬಾರಿ ರಿಲೀಸ್ ಡೇಟ್​ನ್ನ ಬದಲಾಯಿಸಿಕೊಂಡು ಈಗ ಡಿಸೆಂಬರ್ 17ನೇ ತಾರೀಕು ರಿಲೀಸ್ ಡೇಟ್ ಅಂತ ಫಿಕ್ಸ್ ಮಾಡಿಕೊಂಡಿದೆ.. ಆದ್ರೆ ಈಗ ಆ ಡೇಟ್ ಮೇಲೆ ಅಲ್ಲು ಅರ್ಜುನ್ ಅವರ ಮಾವ ಚಿರಂಜೀವಿ ಅವರ ಆಚಾರ್ಯ ಸಿನಿಮಾ ಕಣ್ಣಿಟ್ಟಿದೆ..

ಆಚಾರ್ಯ.. ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾ.. ದೊಡ್ಡ ಮಟ್ಟಕ್ಕೆ ಈ ಸಿನಿಮಾವನ್ನ ಚಿರು ಅವರ ಪುತ್ರ ರಾಮ್ ಚರಣ್ ನಿರ್ಮಾಣ ಮಾಡಿದ್ದಾರೆ.. ಆಚಾರ್ಯ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.. ಆದ್ರೆ ಆಚಾರ್ಯನಿಗೆ ಕೊರೊನಾದಿಂದ ಆನೇಕ ಪರೀಕ್ಷೆಗಳು ಎದುರಾಗುತ್ತಿವೆ.. ರಿಲೀಸ್ ಡೇಟ್  ವಿಚಾರದಲ್ಲಿ ಗೊಂದಲದಲ್ಲಿರೋ ಆಚಾರ್ಯ ಸಿನಿಮಾ ಡಿಸೆಂಬರ್ 17ನೇ ತಾರೀಕು ಬರುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ..

ಆಚಾರ್ಯ ಸಿನಿಮಾ ಪುಷ್ಪ ಸಿನಿಮಾಕ್ಕೆ ಪೈಪೋಟಿಯನ್ನು ಒಡ್ಡಬಹುದು ಇಲ್ಲಾ ಪುಷ್ಪ ಸಿನಿಮಾ ತಂಡ ಚಿರಂಜೀವಿ ಅವರ ಮೇಲಿನ ಗೌರವಕ್ಕಾಗಿ ತನ್ನ ರಿಲೀಸ್ ಡೇಟ್ ಡಿಸೆಂಬರ್ 17ನೇ ತಾರೀಖ್ ಅನ್ನ ಬಿಟ್ಟು ಮುಂದು ಕೂಡ ಹೋಗಬಹುದು.. ಒಟ್ಟಿನಲ್ಲಿ ಟಾಲಿವುಡ್ ಲೋಕದಲ್ಲಿ ಸಿನಿಮಾ ರಿಲೀಸ್ ವಿಚಾರ ಸಖತ್ ಗೊಂದಲದ ಗೂಡಾಗಿದೆ..

News First Live Kannada

Leave a comment

Your email address will not be published. Required fields are marked *