ಹೈದರಾಬಾದ್: ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ (74) ನಿಧನರಾಗಿದ್ದಾರೆ. ಸ್ವಲ್ಪ ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ವೀರಯ್ಯ ಹೃದಯಾಘಾತದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

ವೀರಯ್ಯ  ನಲ್ಗೊಂಡ ಜಿಲ್ಲೆಯ ತಿರುಮಲಗಿರಿ ತಾಲ್ಲೂಕಿನ ಫಣಿಗಿರಿ ಎಂಬ ಹಳ್ಳಿಯ ಪ್ರೌಢಶಾಲೆಯಲ್ಲಿದ್ದಾಗ ನಾಟಕಗಳಲ್ಲಿ ಪಾತ್ರಗಳ ಮಾಡುವ ಮೂಲಕ ಎಲ್ಲರನ್ನೂ ನಗಿಸುತ್ತಿದ್ದರು. ಸಿನಿಮಾಗೆ ಬರುವ ಮೊದಲು ಅವರು ಹೂವಿನ ಅಲಂಕಾರ ಮಾಡುವ  ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 

ವೀರಯ್ಯ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಅಭಿನಯಿಸಿದ್ದರು.

ಅವರ ಅಜ್ಜ ರಾಧಮ್ಮ ಪೆಲ್ಲಿ, ಯುಗಂಧರ್, ಗಜಡೊಂಗ, ಗೋರಾ ನಾಗಮ್ಮ, ಅಟ್ಟಂಗರಿ ಪೆಟ್ಟಿನಂ ಸೇರಿ ಐನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More