ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಅಫ್ಘನ್.. ಕೀವಿಸ್​ ಪಂದ್ಯದತ್ತ ಟೀಂ ಇಂಡಿಯಾ ಅಭಿಮಾನಿಗಳ ಚಿತ್ತ


ಇಂದು ದುಂಬೈ ಇಂಟರ್​ನ್ಯಾಷನಲ್​​​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಐಸಿಸಿ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗಿದ್ದು, ಟಾಸ್​​ ಗೆದ್ದ ಅಫ್ಘನ್​ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್​ ಟೂರ್ನಿಯ ಸೆಮೀಸ್​ಗೆ ಅರ್ಹತೆ ಪಡೆಯಲು ಅಫ್ಘನ್​ ಗೆಲುವು ಬಹುಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್​​ ಪ್ರೇಮಿಗಳ ಚಿತ್ತ ಪಂದ್ಯದತ್ತ ನೆಟ್ಟಿದೆ.

ಅಫ್ಘಾನ್ ಹಾಗೂ ನ್ಯೂಜಿಲೆಂಡ್ ಪಂದ್ಯದ ಫಲಿತಾಂಶ ಬಳಿಕ, ಕೊಹ್ಲಿ ಬಾಯ್ಸ್​ ಬ್ಯಾಗ್​ನೊಂದಿಗೆ ತವರಿಗೆ ಹಿಂತಿರುಗಬೇಕಾ ಬೇಡ್ವಾ ಎಂಬ ಪ್ರಶ್ನೆಗಳಿಗೆ, ಉತ್ತರ ಸಿಗಲಿದೆ. ಹೀಗಾಗಿಯೇ ವಿಶ್ವ ಕ್ರಿಕೆಟ್​ ಅಭಿಮಾನಿಗಳ ಚಿತ್ತವೆಲ್ಲಾ, ಈಗ ಅಬುಧಾಬಿಯಲ್ಲಿ ನಡೆಯೋ ಈ ಕ್ರಿಕೆಟ್​ ಸಮರದತ್ತಲೇ ನೆಟ್ಟಿದೆ.

ಹ್ಯಾಟ್ರಿಕ್​ ಗೆಲುವಿನೊಂದಿಗೆ ಸೆಮೀಸ್​​ಗೆ ಹತ್ತಿರ ಇರೋ ನ್ಯೂಜಿಲೆಂಡ್ ಸೆಮೀಸ್ ಹಾದಿಯೂ ಸುಲಭವಿಲ್ಲ. ಯಾಕಂದ್ರೆ ಇಂದು ಸೋತರೆ ನ್ಯೂಜಿಲೆಂಡ್​ ಭವಿಷ್ಯ ಟೀಮ್ ಇಂಡಿಯಾದ ಗೆಲುವಿನ ಜೊತೆಗೆ ರನ್​ರೇಟ್ ಮೇಲಿರುತ್ತೆ. ಹೀಗಾಗಿ ಇಂದು ಗೆದ್ದು ಸೇಫ್​ ಆಗೋದೆ, ಕೇನ್ ವಿಲಿಯಮ್ಸನ್ ಪಡೆಯ ರಣತಂತ್ರವಾಗಿದೆ.

News First Live Kannada


Leave a Reply

Your email address will not be published. Required fields are marked *