ಇಂಗ್ಲೆಂಡ್​ ಪ್ರವಾಸ ಕೈಗೊಂಡಿರುವ ಭಾರತ ಮಹಿಳೆಯರು, ಇಂದಿನಿಂದ ಏಕದಿನ ಸರಣಿಯನ್ನಾಡತ್ತಿದ್ದು, ಟೆಸ್ಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಉಭಯ ತಂಡಗಳು, ಈಗ ಅದೇ ಫಾರ್ಮ್​ ಮುಂದುವರೆಸೋಕೆ ಸಿದ್ಧಗೊಂಡಿದೆ. ಬ್ರಿಸ್ಟಲ್​​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್​ ಗೆಲುವು ಪಡೆದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಕ್ಕಾ ಗೇಮ್​ ಪ್ಲಾನ್​, ಡಿಫ್ರೆಂಟ್​ ಸ್ಟ್ರಾಟಜಿಯೊಂದಿಗೆ ಇತ್ತಂಡಗಳು ಕಣಕ್ಕಿಳಿಯುತ್ತಿವೆ.

ಇಂಗ್ಲೆಂಡ್ ಮಹಿಳೆಯರ ವಿರುದ್ಧ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ ಭಾರತ ಮಹಿಳಾ ತಂಡ, ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಬ್ರಿಸ್ಟಲ್​​ನ ಕೌಂಟಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇಂಗ್ಲೆಂಡ್ ವಿರುದ್ಧ ಘರ್ಷಣೆಗೆ ಸಜ್ಜಾಗಿರುವ ವನಿತೆಯರ ತಂಡಕ್ಕೆ, ಕೆಲವು ಹೊಸ ಮುಖಗಳು ಎಂಟ್ರಿ ಪಡೆದುಕೊಂಡಿದ್ದು ಬಲ ಬಂದಂತಾಗಿದೆ.
ಇನ್ನು ಘಟಾನುಘಟಿ ಆಟಗಾರ್ತಿಯರೇ ಕೈಕೊಡ್ತಿರೋದು, ತಂಡದ ಹಿನ್ನಡೆಗೆ ಕಾರಣವಾಗ್ತಿದೆ. ಆದ್ರೂ ಟೀಮ್​ ಮ್ಯಾನೇಜ್​ಮೆಂಟ್​ ಅನುಭವಿ ಆಟಗಾರ್ತಿಯರ ನಿರ್ವಹಣೆಯನ್ನೇ ನಂಬಿಕೊಂಡಿದೆ. ಆದರೆ ಅವರ ವೈಫಲ್ಯ, ಯುವ ಆಟಗಾರ್ತಿಯರ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಹಾಗಾಗಿ ಅನುಭವಿ ಆಟಗಾರ್ತಿಯರು, ಲಯಕ್ಕೆ ಮರಳಿದರೆ ಉತ್ತಮ ಅನ್ನೋದು ಥಿಂಕ್​​ ಟ್ಯಾಂಕರ್ಸ್ ಅಭಿಪ್ರಾಯ.

ಏಕದಿನ ಕ್ರಿಕೆಟ್​​​​ಗೂ ಪದಾರ್ಪಣೆ ಮಾಡ್ತಿದ್ದಾರೆ ಶೆಫಾಲಿ..!
ಭಾರತ ಮಹಿಳೆಯರ ತಂಡದ ಬೆಸ್ಟ್​ ಓಪನಿಂಗ್​ ಪೇರ್, ಸ್ಮೃತಿ ಮಂದಾನ ಮತ್ತು ಶೆಫಾಲಿ ವರ್ಮಾ. ಟೆಸ್ಟ್​ ಆ್ಯಂಡ್​ ಟಿ20 ಫಾರ್ಮೆಟ್​​ನಲ್ಲಿ ಈಗಾಗಲೇ ಅದು ಪ್ರೂವ್​ ಆಗಿದ್ದು, ಏಕದಿನಲ್ಲೂ ಈ ಜೋಡಿ ಆರಂಭಿಕರಾಗಿ ಮಿಂಚುವ ಭರವಸೆ ಇದೆ. ಮೂರು ಫಾರ್ಮೆಟ್​​​ನಲ್ಲೂ ಅಬ್ಬರಿಸುತ್ತಿರುವ ಮಂದಾನ, ಬಿಗ್ ಇನ್ನಿಂಗ್ಸ್​ ಕಲೆಹಾಕೋಕೆ ಸಜ್ಜಾಗಿದ್ದಾರೆ. ಇನ್ನು ಶೆಫಾಲಿ ವರ್ಮಾ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ ಡೆಬ್ಯೂ  ಮಾಡುತ್ತಿದ್ದು, ನಿರೀಕ್ಷೆ ಹೆಚ್ಚಾಗಿದೆ.

ಫಾರ್ಮ್​​ಗೆ ಮರಳಬೇಕಿದೆ ಮಿಥಾಲಿ, ಹರ್ಮನ್​​​..!
ನಾಯಕಿ ಮಿಥಾಲಿ ರಾಜ್​, ಹರ್ಮನ್‌ ಪ್ರೀತ್ ಕೌರ್, ಪೂನಮ್​ ರಾವತ್​​ ಬ್ಯಾಟಿಂಗ್​​ ವಿಭಾಗದ ಶಕ್ತಿ. ಆದರೆ ಅವರ ವೈಫಲ್ಯ ಸರಣಿಯಿಂದ ಸರಣಿಗೆ ಮುಂದುವರೆದಿದೆ. ಜೊತೆಗೆ ಜಮೈಮಾ ರೋಡ್ರಿಗ್ಸ್​​​ ಕೂಡ ಲಯಕ್ಕೆ ಮರಳಲು ಪರದಾಡ್ತಿದ್ದಾರೆ. ಹಾಗಾಗಿ ಲಯ ಕಂಡುಕೊಳ್ಳುವ ದೃಷ್ಟಿಯಿಂದ ಮೊದಲ ಪಂದ್ಯ ಆಟಗಾರ್ತಿಯರಿಗೆ ಮಹತ್ವ ಎನಿಸಿದೆ. ಇನ್ನು ವಿಕೆಟ್ ಕೀಪರ್​ ಆಗಿ ಸದಾ ಆ್ಯಕ್ಟೀವ್ ಆಗಿರುವ ತಾನಿಯಾ ಭಾಟಿಯಾ ಕಣಕ್ಕಿಳಿಯೋದು ಕನ್ಫರ್ಮ್​.

ಭಾರತಕ್ಕೆ ಜೂಲನ್​ ಗೋಸ್ವಾಮಿಯೇ ಆಧಾರ​​​..!
ಇನ್ನು ಬೌಲಿಂಗ್​ ವಿಭಾಗದಲ್ಲಿ ಜೂಲನ್ ಗೋಸ್ವಾಮಿ ಆಕ್ರಮಣಕಾರಿ ನಿರ್ವಹಣೆ ತೋರಲೇಬೇಕಿದೆ. ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್​ ಕಣಕ್ಕಿಳಿಯೋ ಸಾಧ್ಯತೆ ಇದೆ. ಇನ್ನು ಆಲ್​​ರೌಂಡರ್​ ಆಗಿ ದೀಪ್ತಿ ಶರ್ಮಾ, ಸ್ಪಿನ್ನರ್​ಗಳಾಗಿ ಪೂನಮ್​ ಯಾದವ್​ ಅಥವಾ ರಾಧ ಯಾದವ್​ ಕಣಕ್ಕಿಳಿಯಲಿದ್ದಾರೆ. ಇನ್ನು ಚೊಚ್ಚಲ ಟೆಸ್ಟ್​​ನಲ್ಲೇ​ ಅದ್ಭುತ ಪರ್ಫಾಮೆನ್ಸ್​ ನೀಡಿದ ಸ್ನೇಹ್​ ರಾಣಾ ತಂಡ ಸೇರಿಕೊಂಡರೂ ಅಚ್ಚರಿ ಇಲ್ಲ.

​​ಮೊದಲ ಪಂದ್ಯಕ್ಕೆ ಬಲಿಷ್ಠ ತಂಡವನ್ನೇ ಕಟ್ಟಲಿದೆ ಇಂಗ್ಲೆಂಡ್​..!
ಇಂಗ್ಲೆಂಡ್​ ಮಹಿಳಾ ತಂಡ, ಭಾರತ ತಂಡಕ್ಕಿಂತಲೂ ಹೆಚ್ಚು ಬಲಿಷ್ಠ ಹೊಂದಿದೆ ಎಂದರೆ ತಪ್ಪಾಗಲ್ಲ.! ತಂಡದಲ್ಲಿ ಅನುಭವಿ ಪ್ಲೇಯರ್​​ಗಳೇ ತುಂಬಿದ್ದು, ಹೋಮ್​ ಪಿಚ್​​ ಲಾಭವನ್ನ ಪಡೆದುಕೊಳ್ಳಲಿದ್ದಾರೆ. ಆರಂಭಿಕರಾಗಿ ಫ್ರಾನ್​ ವಿಲ್ಸನ್ ಮತ್ತು ಆ್ಯಮಿ ಜೋನ್ಸ್​ ಕಣಕ್ಕಿಳಿಯುವ ಸಾಧ್ಯತೆ ಇದ್ರೆ, ಮಿಡಲ್​ ಆರ್ಡರ್​ನಲ್ಲಿ ಕ್ಯಾಪ್ಟನ್​​ ಹೀದರ್​ ನೈಟ್​, ಟಾಮಿ ಬ್ಯೂಮಂಟ್​, ನಟಾಲಿ ಸ್ಕೀವರ್​, ವಿನ್​ಫೀಲ್ಡ್​​ ಅಬ್ಬರಿಸಲಿದ್ದಾರೆ.

ಭಾರತದ ವನಿತೆಯರಿಗೆ ಎಕ್ಲೋಸ್ಟೋನ್​​ದೇ ಭೀತಿ..!
ಬೌಲಿಂಗ್​​ನಲ್ಲೂ ಕೆಥರಿನ್​ ಬ್ರಂಟ್​​, ಸಾರಾ ಗ್ಲೇನ್​, ಸೋಫಿ ಎಕ್ಲೋಸ್ಟೋನ್​​ ಜೊತೆಗೆ ಮ್ಯಾಡಿ ವಿಲಿಯರ್ಸ್​ ಅಥವಾ ಫ್ರೇಯಾ ಡೇವಿಸ್​ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ಎಕ್ಲೋಸ್ಟೋನ್​​, ಮಿಥಾಲಿ ಪಡೆಗೆ ಕಂಟಕವಾಗಿ ಪರಿಣಮಿಸಲಿದ್ದಾರೆ. ಟೆಸ್ಟ್​​ನಲ್ಲೂ ಎಕ್ಲೋಸ್ಟೋನ್​​ ವಿಕೆಟ್​ ಬೇಟೆಯಾಡಿದ್ದು ಭಾರತಕ್ಕೆ ತಲೆನೋವು ತರಿಸಿದೆ. ಇದರ ಜೊತೆಗೆ ಭಾರತ-ಇಂಗ್ಲೆಂಡ್​​ ಮುಖಾಮುಖಿಯಲ್ಲೂ ಆಂಗ್ಲರೇ ಮೇಲುಗೈ ಸಾಧಿಸಿದ್ದಾರೆ.

ಭಾರತ- ಇಂಗ್ಲೆಂಡ್​​ ಮುಖಾಮುಖಿ
ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 69 ಬಾರಿ ಮುಖಾಮುಖಿಯಾಗಿವೆ. ಭಾರತ 30 ಪಂದ್ಯಗಳಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್​​ 37ರಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯಗಳು ರದ್ದುಗೊಂಡಿವೆ.

ದಾಖಲೆ ಬರೆಯೋದಕ್ಕೆ ಸಜ್ಜಾಗಿದ್ದಾರೆ ಮಿಥಾಲಿ ರಾಜ್​..!
ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ್ತಿ ಚಾರ್ಲೋಟ್ಟೆ ಎಡ್ವರ್ಡ್ಸ್ ಮೊದಲಿಗರು​. 10,273 ರನ್​ ಗಳಿಸಿದ ಎಡ್ವರ್ಡ್ಸ್​​ ಮೊದಲ ಸ್ಥಾನದಲ್ಲಿದ್ರೆ, ಮಿಥಾಲಿ​ 10,131 ರನ್​ ಕಲೆಹಾಕಿ, 2ನೇ ಸ್ಥಾನದಲ್ಲಿದ್ದಾರೆ. ಆದರೆ ಎಡ್ವರ್ಡ್ಸ್​ ದಾಖಲೆ ಮುರಿಯುವ ಅವಕಾಶ ದೊರೆತಿದ್ದು, ಮಿಥಾಲಿ ಅಗ್ರಸ್ಥಾನಕ್ಕೇರಲು 131 ರನ್​​ಗಳ​ ಅಗತ್ಯವಿದೆ. ಜೊತೆಗೆ 191 ರನ್​​ಗಳಿಸಿದ್ರೆ ನಾಯಕಿಯಾಗಿ 6,000 ರನ್​ ಪೂರೈಸಲಿದ್ದಾರೆ.

ಕಳೆದ ಏಕದಿನ ಸರಣಿಯಲ್ಲಿ ಸೌತ್​ ಆಫ್ರಿಕಾ ವಿರುದ್ಧ ಮುಖಭಂಗ ಅನುಭವಿಸಿರುವ ಭಾರತ, ಇಂಗ್ಲೆಂಡ್​ ವಿರುದ್ಧ ಗೆಲುವಿನ ಟ್ರ್ಯಾಕ್​ಗೆ ಮರಳೋಕೆ ದೃಷ್ಟಿ ನೆಟ್ಟಿದೆ. ಒಟ್ನಲ್ಲಿ ಉಭಯ ತಂಡಗಳು ಪಕ್ಕಾ ಗೇಮ್​ ಪ್ಲಾನ್​ನೊಂದಿಗೆ ಕಣಕ್ಕಿಳಿಯುತ್ತಿದ್ದು, ಇಂಡೋ-ಆಂಗ್ಲರ ನಡುವಿನ ಕದನ ಹೆಚ್ಚು ರೋಚಕತೆ ಸೃಷ್ಟಿಸಿದೆ.

The post ಟಾಸ್​ ಗೆದ್ದು ಬೌಲಿಂಗ್​​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ -ದಾಖಲೆ ಸನಿಹದಲ್ಲಿ ಮಿಥಾಲಿ, ಮಂದಾನ appeared first on News First Kannada.

Source: newsfirstlive.com

Source link