ಟಾಸ್ ವೇಳೆ ಕೊಹ್ಲಿ ನಬಿಗೆ ಬೌಲಿಂಗ್ ಆಯ್ಕೆ ಮಾಡುವಂತೆ ಹೇಳಿದ್ರಾ? ಈ ವಿಡಿಯೋ ಅಸಲಿಯತ್ತೇನು? | Did Virat Kohli Really Say to Bowl First After Nabi Won The Toss


ಟಾಸ್ ವೇಳೆ ಕೊಹ್ಲಿ ನಬಿಗೆ ಬೌಲಿಂಗ್ ಆಯ್ಕೆ ಮಾಡುವಂತೆ ಹೇಳಿದ್ರಾ? ಈ ವಿಡಿಯೋ ಅಸಲಿಯತ್ತೇನು?

Virat kohli-Nabi

ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ್ ವಿರುದ್ದ 66 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ವಿಫಲರಾಗಿದ್ದ ಭಾರತ ತಂಡವು 3ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಇದಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆ ವೇಳೆ ವಿರಾಟ್ ಕೊಹ್ಲಿ ನಾಣ್ಯ ಚಿಮ್ಮಿಸಿದರು. ಅತ್ತ ಅಫ್ಘಾನಿಸ್ತಾನ್ ನಾಯಕ ಮೊಹಮ್ಮದ್ ನಬಿ ಹೆಡ್​ ಎಂದಿದ್ದರು. ಅದೃಷ್ಟವು ನಬಿ ಅವರ ಪರವಿತ್ತು. ಇನ್ನೊಂದೆಡೆ ವಿರಾಟ್ ಕೊಹ್ಲಿ ಸತತ ಮೂರು ಬಾರಿ ಕೂಡ ಟಾಸ್ ಸೋಲುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಟಾಸ್ ಗೆದ್ದ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡರು. ಇದೀಗ ಟಾಸ್ ಪ್ರಕ್ರಿಯೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣ ಟಾಸ್ ಬಳಿಕ ಕೊಹ್ಲಿ ಹಾಗೂ ನಬಿ ನಡುವಣ ಸಂಭಾಷಣೆ.

ಹೌದು, ಟಾಸ್ ಬಳಿಕ ಬೌಲಿಂಗ್ ಆಯ್ಕೆ ಮಾಡಿ ಅನ್ನುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವಿರಾಟ್ ಕೊಹ್ಲಿ ಮೊಹಮ್ಮದ್ ನಬಿಗೆ ಹೇಳಿದ್ದಾರೆ. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದೆ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಅತ್ತ ಮೊಹಮ್ಮದ್ ನಬಿ ಹಾಗೂ ವಿರಾಟ್ ಕೊಹ್ಲಿ ಟಾಸ್ ಬಳಿಕ ಟಾಸ್ ವಿಷಯವಾಗಿ ಮಾತನಾಡಿರುವುದು ನಿಜ. ಹೀಗಾಗಿ ಟೀಮ್ ಇಂಡಿಯಾ ಪಂದ್ಯವನ್ನು ಫಿಕ್ಸಿಂಗ್ ಮಾಡಿರುವ ಸಾಧ್ಯತೆಗಳಿವೆ ಎನ್ನುವ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿವೆ.

ಆದರೆ ಟಾಸ್ ಬಳಿಕ ಮಾತನಾಡಿದ್ದು ವಿರಾಟ್ ಕೊಹ್ಲಿಯಲ್ಲ. ಬದಲಾಗಿ ಮೊಹಮ್ಮದ್ ನಬಿ ಎಂಬುದು ವಿಡಿಯೋವನ್ನು ಝೂಮ್ ಮಾಡಿ ನೋಡಿದಾಗ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಟಾಸ್ ಗೆದ್ದ ಬಳಿಕ ಕಮೇಂಟೇರ್​ ಪ್ರಶ್ನಿಸುವ ಮುನ್ನ ನಬಿ ಕೊಹ್ಲಿಗೆ ನಾವು ಬೌಲಿಂಗ್ ಮಾಡುತ್ತೇವೆ ಎಂದಿದ್ದರು ಅಷ್ಟೇ. ಸಾಮಾನ್ಯವಾಗಿ ನಾಯಕರುಗಳು ತಮ್ಮ ತಂಡಗಳು ರೆಡಿಯಾಗುವಂತೆ ಸೂಚಿಸಲು ಟಾಸ್ ಗೆದ್ದ ಬಳಿಕ ತಕ್ಷಣವೇ ತಮ್ಮ ನಿರ್ಣಯವನ್ನು ಎದುರಾಳಿ ತಂಡದ ನಾಯಕನಿಗೆ ತಿಳಿಸುತ್ತದೆ. ಇದೇ ಮಾದರಿಯಲ್ಲಿ ನಬಿ ಕೂಡ ಟಾಸ್ ಗೆಲ್ಲುತ್ತಿದ್ದಂತೆ ನಾವು ಬೌಲಿಂಗ್ ಮಾಡುತ್ತೇವೆ ಎಂದಿದ್ದರು.

ಆದರೆ ವಿಡಿಯೋದಲ್ಲಿ ಅದು ಯಾರು ಹೇಳಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಅಫ್ಘಾನ್ ನಾಯಕ ನಬಿ ಟಾಸ್ ಗೆದ್ದ ಬಳಿಕ ಬೌಲಿಂಗ್ ಆಯ್ಕೆ ಮಾಡಿ ಎಂದಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಇದೀಗ ಅದೇ ವಿಡಿಯೋವನ್ನು ಝೂಮ್ ಮಾಡಿ ಪರಿಶೀಲಿಸಿದಾಗ ಮೊಹಮ್ಮದ್ ನಬಿ ಕೊಹ್ಲಿಗೆ ನಾವು ಬೌಲಿಂಗ್ ಮಾಡುತ್ತೇವೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(Did Virat Kohli Really Say to Bowl First After Nabi Won The Toss)

TV9 Kannada


Leave a Reply

Your email address will not be published. Required fields are marked *