ಟಿಂಡರ್ ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ಗೆಳೆತನ; ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಡುತಿದ್ದ ಆರೋಪಿ ಬಂಧನ | Police arrested man who assaulting by Young Women Using Tinder Dating App in Bengaluru


ಟಿಂಡರ್ ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ಗೆಳೆತನ; ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಡುತಿದ್ದ ಆರೋಪಿ ಬಂಧನ

ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಅರೋಪಿ

ಬೆಂಗಳೂರು: ಟಿಂಡರ್ ಡೇಟಿಂಗ್ ಆಪ್​ನಲ್ಲಿ(Tinder Dating app) ಗೆಳೆತನ ಮಾಡಿಕೊಂಡು ಯುವತಿಯರ ಜೊತೆ ವಿಕೃತ ಮೆರೆದಿದ್ದ ಆರೋಪಿಯನ್ನು ಪೊಲೀಸರು(Karnataka police) ಬಂಧಿಸಿದ ಘಟನೆ ಬೆಂಗಳೂರಿನ ಹೆಚ್​. ಎಸ್. ಆರ್. ಲೇಔಟ್​ನಲ್ಲಿ ನಡೆದಿದೆ. ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಅರೋಪಿ. ಟಿಂಡರ್ ಡೇಟಿಂಗ್ ಆಪ್​ನಲ್ಲಿ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ಬಳಿಕ ಭೇಟಿ ಮಾಡಿ ಸ್ನೇಹ(Friendship) ಬೆಳೆಸುತಿದ್ದ. ಹಲವು ಬಾರಿ ಯುವತಿಯರ ಮನೆಗೆ ಯಾರು ಇಲ್ಲದ ವೇಳೆ ಭೇಟಿ ನೀಡಿ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದ್ದ.

ಬಳಿಕ ಯುವತಿಯರ ಜೊತೆ ರೊಮ್ಯಾಂಟಿಕ್ ಆಗಿ ವರ್ತನೆ ಮಾಡುತ್ತಿದ್ದು, ಖಾಸಗಿ ಸಮಯ ಕಳೆಯುವಂತೆ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸುತಿದ್ದ. ಬಳಿಕ ಯುವತಿಯರ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋ ವಿಡಿಯೋ ತೆಗೆದುಕೊಳ್ಳುತಿದ್ದ. ನಂತರ ವಾಪಸ್ಸು ಬಂದ ಬಳಿಕ ಪೋನ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಫೆಬ್ರವರಿ ಒಂದರಂದು ಕೊಡಿಹಳ್ಳಿಯಲ್ಲಿ ಇದೇ ಮಾದರಿ ಕೃತ್ಯ ಎಸಗಿದ್ದ ಬಗ್ಗೆ ಯುವತಿಯೊರ್ವಳು ಕೊಡೊಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಯುವತಿ ದೂರಿನ ಅನ್ವಯ ಕಾರ್ಯಚರಣೆ ನಡೆಸಿ ಹೆಚ್. ಎಸ್. ಆರ್. ಲೇಔಟ್​ನ್ಲಲಿ ಆರೋಪಿ ಅಭಿಷೇಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ದಾರಿಹೋಕರನ್ನು ದೋಚಲು ಹೊಂಚು; ಮಾರಕಾಸ್ತ್ರಗಳ ಸಮೇತ ನಾಲ್ವರು ದರೋಡೆಕೊರರ ಬಂಧನ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾದೇನಹಳ್ಳಿ ತಾಂಡಾ ಬಳಿಯ ಅರಣ್ಯ ಪ್ರದೇಶದಲ್ಲಿ ಮಾರಕಾಸ್ತ್ರಗಳ ಸಮೇತ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಐವರು ಆರೋಪಿಗಳು ಪರಾರಿಯಾಗಿದ್ದಾರೆ. ದಾರಿಹೋಕರನ್ನು ದೋಚಲು ಕಾರದ ಪುಡಿ, ಮಚ್ಚು ಹಿಡಿದು ಹೊಂಚು ಹಾಕಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published.