ಟಿಂಡರ್ ಡೇಟ್​ನ ನಂತರ ಜೈಲುಪಾಲಾದ ವ್ಯಕ್ತಿ – A man was arrested for participating in Capital Riot after a tinder date


Capitol Riot : ಡೇಟ್​ ಮುಗಿದ ಮರುದಿನ ಅಮೆರಿಕದ ಸಂಸತ್ತಿನೆದುರು ಗಲಭೆ ಎದ್ದಿದ್ದನ್ನು ಟಿವಿಯಲ್ಲಿ ನೋಡಿದ ಈತ ಉಬರ್​ನಲ್ಲಿ ಪ್ರಯಾಣಿಸಿ ಆ ಗುಂಪಿಗೆ ಸೇರಿಕೊಂಡ. ಇದೀಗ ಪೊಲೀಸರು ಈ ವ್ಯಕ್ತಿಗೆ 30 ದಿನಗಳ ಜೈಲುಶಿಕ್ಷೆ ನೀಡಿದ್ದಾರೆ.

ಟಿಂಡರ್ ಡೇಟ್​ನ ನಂತರ ಜೈಲುಪಾಲಾದ ವ್ಯಕ್ತಿ

A man was arrested for participating in Capital Riot after a tinder date

Viral Video : 2022ರ ಜನವರಿ 6 ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸ್ಟಾಪ್ ದಿ ಸ್ಟೀಲ್’ ರ್ಯಾಲಿಯ ಮುನ್ನಾದಿನದಂದು ಡೆಲ್​ವೇರ್​ನ ಉದ್ಯಮಿ ಸ್ಕೇಫರ್ ಟಿಂಡರ್ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ರಾತ್ರಿ ಕಳೆಯಲು ಡೆಲವೇರ್‌ನಿಂದ ವರ್ಜೀನಿಯಾಕ್ಕೆ ಪ್ರಯಾಣಿಸಿದ. ಡೇಟ್​ ಮುಗಿದ ಮರುದಿನ ಅಮೆರಿಕದ ಸಂಸತ್ತಿನೆದುರು ಗಲಭೆ ಎದ್ದಿದ್ದನ್ನು ಟಿವಿಯಲ್ಲಿ ನೋಡಿದ ಈತ ಉಬರ್​ನಲ್ಲಿ ಪ್ರಯಾಣಿಸಿ ಆ ಗುಂಪಿಗೆ ಸೇರಿಕೊಂಡ. ಇದೀಗ ಪೊಲೀಸರು ಈ ವ್ಯಕ್ತಿಗೆ 30 ದಿನಗಳ ಜೈಲುಶಿಕ್ಷೆ ನೀಡಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ 2,000 ಡಾಲರ್​ ದಂಡ ವಿಧಿಸಿದ್ದಾರೆ. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್​ ಹೊಗನ್ ಈ ಕುರಿತು​ ಶುಕ್ರವಾರ ಆದೇಶಿಸಿದ್ದಾರೆ.

ಸ್ಕೇಫರ್ ಸೆನೆಟ್ ವಿಂಗ್​ನ ಬಾಗಿಲುಗಳ ಬಳಿ ಇರುವ ಮುರಿದ ಕಿಟಕಿಯ ಮೂಲಕ ಸಂಸತ್ತನ್ನು ಪ್ರವೇಶಿಸಿ ಗಲಭೆ ನಡೆಸುತ್ತಿದ್ದ ಗುಂಪಿನೊಂದಿಗೆ ಸ್ಕೇಫರ್​ ಸೇರಿಸಿಕೊಂಡಿದ್ದಾನೆ. ಸುಮಾರು 28 ನಿಮಿಷಗಳ ಕಾಲ ಗಲಭೆಗೆ ಈತ ಸಾಕ್ಷಿಯಾಗಿದ್ದಾನೆ. ಈ ಕುರಿತು ಎಲ್ಲ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ 36 ವರ್ಷದ ಸ್ಕೇಫರ್​ನನ್ನು ಅಪರಾಧಿ ಎಂದು ಪರಿಗಣಿಸಬೇಕೆಂದು 2022ರ ಜನವರಿಯಲ್ಲಿ ತಿಳಿಸಿದ್ದರು.

TV9 Kannada


Leave a Reply

Your email address will not be published.