ಟಿಕೆಟ್​​ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ; ರೇವತಿ ಉದಾಸಿ ಬೆಂಬಲಿಗರ ಪ್ರತಿಭಟನೆ

ಹಾವೇರಿ: ಹಾನಗಲ್‌ ವಿಧಾನಸಭಾ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ ಟಿಕೆಟ್​ ಘೋಷಿಸಿದೆ. ರೇವತಿ ಉದಾಸಿಯವರ ಬದಲಿಗೆ ವಿಧಾನ ಪರಿಷತ್‌ನ ಮಾಜಿ ಸದಸ್ಯ ಶಿವರಾಜ ಸಜ್ಜನರ್ ಅವರಿಗೆ ಟಿಕೆಟ್​​ ನೀಡಿ ಹೈಕಮಾಂಡ್​​ ಆದೇಶಿಸಿದೆ. ಈ ಬೆನ್ನಲ್ಲೇ ಸ್ಥಳೀಯ ಬಿಜೆಪಿಗರು ಅಸಮಾಧಾನ ಹೊರಹಾಕಿ ಪ್ರತಿಭಟಿಸಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಟೈರ್​​ಗೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಸ್ಥಳೀಯರಿಗೆ ಯಾರಿಗಾದರೂ ಟಿಕೆಟ್​​ ನೀಡಬೇಕಿತ್ತು. ಆದರೆ, ಹೊರಗಿನವರಿಗೆ ನಮ್ಮ ಹಾನಗಲ್​​ ಟಿಕೆಟ್​​ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಾನಗಲ್​​ನಲ್ಲಿ ಹೊರಗಿನವರಿಗೆ ಏನು ಕೆಲಸ. ಸ್ಥಳೀಯರಿಗೆ ನೀವ್ಯಾಕೆ ಟಿಕೆಟ್​​ ನೀಡಲಿಲ್ಲ. ರೇವತಿ ಉದಾಸಿಯವರಿಗೆ ಯಾಕೆ ಟಿಕೆಟ್​​ ಕೊಡಲಿಲ್ಲ ಎಂದು ಗ್ರಾಮದ ಪ್ರಮುಖ ಸರ್ಕಲ್​​ನಲ್ಲಿ ಟೈರ್​​ಗೆ ಬೆಂಕಿ ಹಚ್ಚಿ ಹೈಕಮಾಂಡ್​​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BSY ಸಹಾಯಕ ಉಮೇಶ್ ಮನೆ ಮುಂದೆ ಸರ್ಕಾರಿ ವಾಹನ; ಅಧಿಕಾರ ದುರ್ಬಳಕೆ ಅನುಮಾನ

News First Live Kannada

Leave a comment

Your email address will not be published. Required fields are marked *