ಬೆಂಗಳೂರು: ಇಂದು ರಾತ್ರಿಯಿಂದ ರಾಜ್ಯದಲ್ಲಿ ಕ್ಲೋಸ್​ಡೌನ್​ ಜಾರಿಯಾಗಲಿದೆ. ಈ ಹಿನ್ನೆಲೆ ಊರಿಗೆ ತೆರಳುತ್ತಿರುವ ಜನರಿಗಾಗಿ ಮೂರು ಸಾರಿಗೆ ನಿಗಮಗಳಿಂದ ಹೆಚ್ಚುವರಿ ಬಸ್​​ ವ್ಯವಸ್ಥೆ ಮಾಡಲಾಗಿದೆ. ಕೆಎಸ್​​ಆರ್​ಟಿಸಿ ಎಂ.ಡಿ ಶಿವಯೋಗಿ ಕಳಸದ್ ಇಂದು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಕೆಎಸ್​​ಆರ್​​ಟಿಸಿಯ ಎಲ್ಲಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕಳಸದ್, ಹೆಚ್ಚುವರಿಯಾಗಿ 1500ಕ್ಕೂ ಹೆಚ್ಚು ಬಸ್​​ಗಳ‌ನ್ನ ನಿಯೋಜನೆ ಮಾಡಲಾಗಿದೆ. ಟಿಕೆಟ್​ ದರದಲ್ಲಿ ಏರಿಕೆ‌ ಇಲ್ಲ. ಬಸ್ಸಿನಲ್ಲಿ ಶೇಕಡ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ಎಂದರು.

ಕೊರೊನಾ ನಿಯಮ ಪಾಲಿಸಲು ಮೊದಲ ಆದ್ಯತೆ ನೀಡಲಾಗ್ತಿದೆ. ನಗರದ ಎಲ್ಲಾ ಕಡೆಗಳಲ್ಲಿ ಅಧಿಕಾರಿಗಳ ನೇಮಕವಾಗಿದೆ. ಪರಿಶೀಲನೆಗಾಗಿ ಅಧಿಕಾರಿಗಳ ನೇಮಕವಾಗಿದೆ. ಈಗಾಗಲೇ ರಿಸರ್ವ್ ಮಾಡಿರುವ ಬಸ್​​ಗಳು ಇರಲಿದೆ. ಇಂದು ರಾತ್ರಿ 9ರ ಒಳಗೆ ಎಲ್ಲಾ ಬಸ್​​ಗಳು ಹೊರಡಲಿವೆ. ಟಿಕೆಟ್ ತೋರಿಸಿ ಜನ ಮನೆ ಸೇರಬಹುದು ಎಂದು ಹೇಳಿದರು.

The post ಟಿಕೆಟ್ ದರ ಏರಿಕೆ‌ ಇಲ್ಲ, ರಾತ್ರಿ 9ರ ಒಳಗೆ ಎಲ್ಲಾ ಬಸ್​​ಗಳು ಹೊರಡಲಿವೆ -KSRTC ಎಂ.ಡಿ appeared first on News First Kannada.

Source: News First Kannada
Read More