ಟಿಕ್​ ಟಾಕರ್ ಆದ್ರು ಸೋನಲ್; ಮಾಹಿತಿ ಹಂಚಿಕೊಂಡ ನಟಿ | Sonal Monteiro Talks about her next Movie Garadi


ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ‘ಪಂಚತಂತ್ರ’ ಸಿನಿಮಾದಲ್ಲಿ ನಟಿ ಸೋನಲ್​ ಮೊಂತೆರೋ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅವರು ‘ಗರಡಿ’ ಸಿನಿಮಾದಲ್ಲಿ (Garadi Movie)  ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯೋಗರಾಜ್​ ಭಟ್ ಅವರ ನಿರ್ದೇಶನವಿದೆ. ‘ಪಂಚತಂತ್ರ ತೆರೆಕಂಡ (Panchatantra Movie) ನಂತರ ಯಾರ ಜತೆ ನೀವು ಕೆಲಸ ಮಾಡಲು ಬಯಸುತ್ತೀರಿ ಎನ್ನುವ ಪ್ರಶ್ನೆ ಕೇಳಿದಾಗ ಯೋಗರಾಜ್ ಭಟ್ ಅವರ ಹೆಸರು ಹೇಳುತ್ತಿದ್ದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ವಿಚಿತ್ರವಾಗಿದೆ. ಟಿಕ್​ ಟಾಕರ್ ಪಾತ್ರ ಮಾಡ್ತಾ ಇದೀನಿ. ದ್ವಿತೀಯಾರ್ಧದಲ್ಲಿ ನನ್ನ ಪಾತ್ರ ತುಂಬಾನೇ ಭಿನ್ನ ಶೇಡ್​ ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ ಸೋನಲ್. ಈ ಚಿತ್ರದಲ್ಲಿ ನಟ ಬಿ.ಸಿ.ಪಾಟೀಲ್, ಯಶಸ್​ ಸೂರ್ಯ, ಸೋನಲ್ ಮೊಂತೆರೋ, ಧರ್ಮಣ್ಣ, ನಯನ ಮುಂತಾದವರು ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆಯೂ ಅವರು ಮಾತನಾಡಿದ್ದಾರೆ.

TV9 Kannada


Leave a Reply

Your email address will not be published.