ತಿರುಪತಿ: ಕರ್ನಾಟಕದ ಬಳ್ಳಾರಿಯ ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ ಒಂದು ಕೋಟಿ ರೂಪಾಯಿ ಹಣವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯ ಶ್ರೀ ವೇಂಕಟೇಶ್ವರ ನಿತ್ಯ ಅನ್ನ ದಸೋಹ ಟ್ರಸ್ಟ್ಗೆ ದೇಣಿಗೆ ನೀಡಿದ್ದಾರೆ.
ಒಂದು ಕೋಟಿ ರೂಪಾಯಿಯ ಡಿಡಿಯನ್ನು ಸೂರ್ಯನಾರಾಯಣ ರೆಡ್ಡ ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಅನ್ನ ದಸೋಹ ಟ್ರಸ್ಟ್ ಅಡಿ ಟಿಟಿಡಿ ತಿರುಮಲಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಉಚಿತ ಅನ್ನ ದಸೋಹವನ್ನು ನಿತ್ಯವೂ ಏರ್ಪಡಿಸುತ್ತಿದೆ.