ಟಿಟೌನ್​ ಮೆಗಾಸ್ಟಾರ್​ ಜೊತೆ ಮಿಲ್ಕಿ ಬ್ಯೂಟಿ ರೋಮ್ಯಾನ್ಸ್ ಫಿಕ್ಸ್.. ತಮನ್ನಾ ಕ್ರೇಜಿ ಫೀಲಿಂಗ್ಸ್


ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ ಅಭಿನಯದ ಸಿನಿಮಾ ‘ಬೋಲ ಶಂಕರ್’ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಆಯ್ಕೆಯಾಗಿದ್ದಾರೆ. ಎಕೆ ಎಂಟರ್​​ಟೈನ್ಮೆಂಟ್ ಬ್ಯಾನರ್ ನಡಿ ಮೆರ್ಹ ರಮೇಶ್ ನಿರ್ದೇಶನದಲ್ಲಿ ಚಿರು ಅವರ 154 ನೇ ಸಿನಿಮಾ ‘ಬೋಲ ಶಂಕರ್’ ಮೂಡಿಬರುತ್ತಿದೆ. ಮಹಾನಟಿ ಸಿನಿಮಾ ಖ್ಯಾತಿಯ ನಟಿ ಕೀರ್ತಿ ಸುರೇಶ್​ ಈ ಚಿತ್ರದಲ್ಲಿ ಚಿರುಗೆ ತಂಗಿಯಾಗಿ ಅಭಿನಯಿಸುತ್ತಿದ್ದಾರೆ.

ಇನ್ನು ಎರಡನೇ ಬಾರಿಗೆ ನಟಿ ತಮನ್ನಾ ಮೆಗಾ ಸ್ಟಾರ್​ ಚಿರಂಜೀವಿ ಅವರಿಗೆ ಜೋಡಿಯಾಗಿ ಅಭಿನಯಿಸುತ್ತಿದ್ದು, ಈ ಹಿಂದೆ ಚಿರು ಅವರ 151ನೇ ಚಿತ್ರ ಸೈ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಚಿರುಗೆ ಜೋಡಿಯಾಗಿ ತಮನ್ನಾ ಕಾಣಿಸಿಕೊಂಡಿದ್ರು. ಇದೀಗ ಮೆಗಾ ಸ್ಟಾರ್​ ಜೊತೆ ಎರಡನೇ ಬಾರಿಗೆ ಸ್ಕ್ರಿನ್​ ಶೇರ್​ ಮಾಡಿಕೊಳ್ಳುತಿರುವ ಸಂತಸವನ್ನು ನಟಿ ತಮನ್ನಾ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

The post ಟಿಟೌನ್​ ಮೆಗಾಸ್ಟಾರ್​ ಜೊತೆ ಮಿಲ್ಕಿ ಬ್ಯೂಟಿ ರೋಮ್ಯಾನ್ಸ್ ಫಿಕ್ಸ್.. ತಮನ್ನಾ ಕ್ರೇಜಿ ಫೀಲಿಂಗ್ಸ್ appeared first on News First Kannada.

News First Live Kannada


Leave a Reply

Your email address will not be published. Required fields are marked *