ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿದ್ದ ಆರೋಪ: ಶಂಕಿತ ಉಗ್ರ ತಾಲಿಬ್ ನಡೆಸಿದ್ದ ಉಗ್ರಗಾಮಿ ಚಟುವಟಿಕೆಗಳ ವಿವರ ಇಲ್ಲಿದೆ | Details of Cases against Suspected Terrorist Talib Hussain in Jammu Kashmir


ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿದ್ದ ಆರೋಪ: ಶಂಕಿತ ಉಗ್ರ ತಾಲಿಬ್ ನಡೆಸಿದ್ದ ಉಗ್ರಗಾಮಿ ಚಟುವಟಿಕೆಗಳ ವಿವರ ಇಲ್ಲಿದೆ

ಶಂಕಿತ ಉಗ್ರ ತಾಲಿಬ್ ಹುಸೇನ್

ಜಮ್ಮು ಕಾಶ್ಮೀರ ಪೊಲೀಸರು ನಗರದಲ್ಲಿ ಮಂಗಳವಾರ ಬಂಧಿಸಿದ ಶಂಕಿತ ಉಗ್ರ ತಾಲಿಬ್ ಹುಸೇನ್ ನಡೆಸಿದ್ದ ಉಗ್ರಗಾಮಿ ಚಟುವಟಿಕೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಬೆಂಗಳೂರು: ಜಮ್ಮು ಕಾಶ್ಮೀರ ಪೊಲೀಸರು ನಗರದಲ್ಲಿ ಮಂಗಳವಾರ ಬಂಧಿಸಿದ ಶಂಕಿತ ಉಗ್ರ ತಾಲಿಬ್ ಹುಸೇನ್ ನಡೆಸಿದ್ದ ಉಗ್ರಗಾಮಿ ಚಟುವಟಿಕೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇವನು ಕಾಶ್ಮೀರದಿಂದ ಬೆಂಗಳೂರಿನವರೆಗೆ ಉಗ್ರಗಾಮಿ ಚಟುವಟಿಕೆ ನಡೆಸಿದ್ದ. ಬೆಂಗಳೂರಿನಲ್ಲಿ ಇದ್ದುಕೊಂಡೇ ಕಾಶ್ಮೀರದ ಕೃತ್ಯಗಳನ್ನು ನಿಭಾಯಿಸುತ್ತಿದ್ದ ಎನ್ನಲಾಗಿದೆ. ಇದೇ ವರ್ಷ ಕಾಶ್ಮೀರದ ಕಿಸ್ತವಾರ್ ಜಿಲ್ಲೆಯಲ್ಲಿ ಟಿಫಿನ್ ಬಾಕ್ಸ್ ಬಾಂಬ್ ಸಿದ್ಧಪಡಿಸಿ, ಅದನ್ನು ಸ್ಫೋಟಿಸಲು ಸಮಚು ಮಾಡಿದ್ದ. ಆ ವೇಳೆ ಈತನ ಸಹಚರ ಮೊಹಮ್ಮದ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಸ್ಫೋಟಕ ವಸ್ತು ಕಾಯ್ದೆಯ 4, 5ನೇ ವಿಧಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಸಮಾಜ ವಿರೋಧಿ ಚಟುವಟಿಕೆ ಕಾಯ್ದೆಯ 31, 15, 18, 23ನೇ ವಿಧಿಗಳ ಅನ್ವಯವೂ ತಾಲಿಬ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

ಬೆಂಗಳೂರು ಬೀಟ್ ಪೊಲೀಸರನ್ನು ಯಾಮಾರಿಸಲು ಶಂಕಿತ ಉಗ್ರ ತಾಲೀಬ್ ಹಲವು ತಂತ್ರಗಳನ್ನು ಅನಸರಿಸುತ್ತಿದ್ದ ಎಂದು ಮೂಲಗಳು ಹೇಳಿವೆ. ಈತ ಆಗಾಗ ತನ್ನ ವೇಷ ಬದಲಿಸಿಕೊಳ್ಳುತ್ತಿದ್ದ. ಬೆಂಗಳೂರು ಬೀಟ್ ಪೊಲೀಸರನ್ನೂ ಹಲವು ಬಾರಿ ಯಾಮಾರಿಸಿದ್ದ. ಪೊಲೀಸರು ತಪಾಸಣೆಗೆ ಬಂದಾಗ ಮುಖದ ಮಾಸ್ಕ್ ಬಳಸಿ, ಕೊವಿಡ್ ಹೆಸರಿನಲ್ಲಿ ಗುರುತು ಮರೆಮಾಚುತ್ತಿದ್ದ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ

ಬೆಂಗಳೂರು: ನಗರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಉಗ್ರ ತಾಲಿಬ್ ಹುಸೇನ್​​ನನ್ನು ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಶ್ರೀರಾಂಪುರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ ಶಂಕಿತ ಉಗ್ರ ತಾಲಿಬ್, ಬಿಎನ್​ಎಲ್​ ಏರ್​ ಸರ್ವಿಸ್​ನಲ್ಲಿ ಕೆಲಸ ಮಾಡುತ್ತಿದ್ದ. ಕಾಶ್ಮೀರದಿಂದ ಬೆಂಗಳೂರಿಗೆ ಬರುವ ವೇಳೆಯಲ್ಲಿ ಪೊಲೀಸ್ ಕೆಲಸದಲ್ಲಿರುವ​ ಪತ್ನಿಯನ್ನೂ ಈತ ಜೊತೆಗೆ ಕರೆತಂದಿದ್ದ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.