ತುಮಕೂರು: ಶಿರಾ ಜರನ ಆರೋಗ್ಯ ಸೇವೆಗಾಗಿ ಉಚಿತ ಆ್ಯಂಬುಲೆನ್ಸ್​​ ಸೇವೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಿದ್ದಾರೆ.

ಶಿರಾ ನಗರದ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲು ಮುಂದಾಗಿದ್ದಾರೆ. ಅದರಂತೆ ಎರಡು ಆ್ಯಂಬುಲೆನ್ಸ್​, ಕೊರೊನಾ ಸೋಂಕಿತರ ಸೇವೆಗಾಗಿ ನೀಡಿದ್ದಾರೆ. ಅಲ್ಲದೇ ಆಕ್ಸಿಜನ್ ಉಪಯೋಗಕ್ಕಾಗಿ 50 ಸಾವಿರ ಚೆಕ್ ವಿತರಣೆಯನ್ನ ಕೂಡ ನೀಡಿದ್ದಾರೆ.

ತಹಶೀಲ್ದಾರ್ ಮಮತಾ ಮೂಲಕ ಚೆಕ್​ ನೀಡಿ, ಅದನ್ನ ಆಕ್ಸಿಜನ್ ಸೇವೆಗೆ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜು ಬರಗೂರು ನೇತೃತ್ವದಲ್ಲಿ ಕೊರೊನಾ ವಾರಿಯರ್ ಟೀಂ ರಚನೆಯನ್ನ ಮಾಡಿದ್ದಾರೆ. ಈ ತಂಡದಲ್ಲಿ 20ಕ್ಕೂ ಹೆಚ್ಚು ಮಂದಿ ಕೊರೊನಾ ವಾರಿಯರ್​ಗಳು ಇದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸುವಂತೆ ಕೊರೊನಾ ವಾರಿಯರ್ಸ್ ಟೀಂಗೆ ಮಾಜಿ ಸಚಿವರು ಸೂಚಿಸಿದ್ದಾರೆ.

The post ಟಿಬಿ ಜಯಚಂದ್ರರಿಂದ ಕೊರೊನಾ ಸೋಂಕಿತರಿಗಾಗಿ ಉಚಿತ ಆ್ಯಂಬುಲೆನ್ಸ್ ಸೇವೆ appeared first on News First Kannada.

Source: newsfirstlive.com

Source link