ಬೀಜಿಂಗ್: ಮಂಗಳ ಗ್ರಹದ ಹೈ ರೆಸೊಲ್ಯೂಷನ್ ಇಮೇಜ್ ನ್ನು ಚೀನಾದ ರಾಷ್ಟ್ರೀಯ ಅಂತರಿಕ್ಷ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ. ಅದನ್ನು ದೇಶದ ಟಿಯಾನ್ವೆನ್ -1 ಬಾಹ್ಯಾಕಾಶ ನೌಕೆ ಸೆರೆ ಹಿಡಿದಿದ್ದು, ಅದು ಪ್ರಸ್ತುತ ಮಂಗಳನ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿದೆ.

ಎರಡು ಪಂಚ್ರೊಮ್ಯಾಟಿಕ್ ವೀಕ್ಷಣೆ ಮತ್ತು ಒಂದು ಬಣ್ಣದ ಚಿತ್ರವನ್ನು ಹೈ ರೆಸೊಲ್ಯೂಷನ್ ಇಮೇಜ್ ತೋರಿಸುತ್ತದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ ವರದಿ ಮಾಡಿದೆ. ಮಂಗಳನ ಮೇಲ್ಮೈಯಿಂದ 330ರಿಂದ 350 ಕಿಲೋ ಮೀಟರ್ ದೂರದಲ್ಲಿ ಹೈ ರೆಸೊಲ್ಯೂಷನ್ ಕ್ಯಾಮರಾ ಮೂಲಕ ಚೀನಾದ ಅಂತರಿಕ್ಷ ನೌಕೆ ಮಂಗಳನನ್ನು ಸೆರೆಹಿಡಿದಿದೆ.

100%

ಚಿತ್ರದಲ್ಲಿ ಮಂಗಳನ ಭೂ ರೂಪಗಳಾದ ಸಣ್ಣ ಕುಳಿಗಳು, ಪರ್ವತ ರೇಖೆಗಳು ಮತ್ತು ದಿಬ್ಬಗಳು ಸ್ಪಷ್ಟವಾಗಿ ಗೋಚರಿಸುತ್ತವೆ.ಚಿತ್ರಗಳಲ್ಲಿನ ಅತಿದೊಡ್ಡ ಪ್ರಭಾವದ ಕುಳಿಯ ವ್ಯಾಸವು ಸುಮಾರು 620 ಮೀಟರ್ ಆಗಿದೆ ಎಂದು ಚೀನಾದ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಚೀನಾ ಟಿಯಾನ್ವೆನ್ -1ನ್ನು ಕಳೆದ ವರ್ಷ ಜುಲೈ 23ರಂದು ಆರಂಭ ಮಾಡಿತ್ತು. ಅಂತರಿಕ್ಷ ಕಕ್ಷೆ, ಲ್ಯಾಂಡರ್ ಮತ್ತು ರೋವರ್ ಒಳಗೊಂಡಿರುವ ಬಾಹ್ಯಾಕಾಶ ನೌಕೆ ಫೆಬ್ರವರಿ 24 ರಂದು ಮಂಗಳನ ಸುತ್ತ ಕಕ್ಷೆಗೆ ಪ್ರವೇಶಿಸಿತು.ನಂತರ ಇದು 224 ದಿನಗಳ ಕಾಲ 475 ಮಿಲಿಯನ್ ಕಿಲೋ ಮೀಟರ್ ಪ್ರಯಾಣ ಬೆಳೆಸಿತು. ಪ್ರಸ್ತುತ ಇದು ಭೂಮಿಯಿಂದ 212 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿದೆ. 

ಏಷ್ಯಾ ಖಂಡದಲ್ಲಿ ಮೊದಲ ಸಲ ಮಂಗಳ ಕಕ್ಷೆಗೆ ಯಶಸ್ವಿಯಾಗಿ ಪ್ರಯಾಣಿಸಿದ ಮಂಗಳಯಾನ ಮಾಡಿದ ದೇಶ ಭಾರತವಾಗಿದ್ದು 2014ರಲ್ಲಿ ಮಂಗಳನ ಕಕ್ಷೆಗೆ ಭಾರತ ಪ್ರವೇಶಿಸಿತ್ತು. ಅದು ಮೊದಲ ಪ್ರಯತ್ನದಲ್ಲಿಯೇ ಮಂಗಳ ಗ್ರಹಕ್ಕೆ ಪ್ರವೇಶಿಸಿದ ದೇಶವೆಂಬ ಹೆಗ್ಗಳಿಕೆ ಕೂಡ ಭಾರತಕ್ಕಿದೆ. 

Source: Kannadaprabha – ವಿಜ್ಞಾನ-ತಂತ್ರಜ್ಞಾನ – https://www.kannadaprabha.com/science-technology/
Read More