ಟಿವಿ9 ವರದಿಯಲ್ಲಿ ವರದಿ ಬಿತ್ತರಗೊಂಡ ನಂತರ ಬಳ್ಳಾರಿಯ ಸಹೃದಯಿಗಳು ಹಣ್ಣು ವ್ಯಾಪಾರಿ ಸಂಧ್ಯಾಬಾಯಿಗೆ ಸಹಾಯ ಮಾಡುತ್ತಿದ್ದಾರೆ! | A few people in Ballari extend helping hand to fruit seller Sandhyabai after watching report on Tv9


ವೀಕೆಂಡ್ ಕರ್ಫ್ಯೂನಿಂದಾಗಿ ಜನ ಹೊರಗಡೆ ಬರುವುತ್ತಿಲ್ಲವಾದ್ದರಿಂದ ಬಳ್ಳಾರಿ (Ballari) ನಗರದಲ್ಲಿ ಹಣ್ಣು ಮಾರಿ ಬದುಕು ಸವೆಸುವ ಈ ಮಹಿಳೆಪಡುತ್ತಿರುವ ಕಷ್ಟದ ಬಗ್ಗೆ ಶನಿವಾರ ಬೆಳಗ್ಗೆ ಟಿವಿ9 ಒಂದು ವರದಿಯನ್ನು ಪ್ರಸಾರ ಮಾಡಿತ್ತು. ಸಂಧ್ಯಾಬಾಯಿ ಹೆಸರಿನ ಈ ಹಿರಿಯ ಮಹಿಳೆ ಹಣ್ಣು ಮಾರಿ ಮನೆಗೆ ದುಡ್ಡು ತೆಗೆದುಕೊಂಡು ಹೋದರೆ ಮಾತ್ರ ಮಕ್ಕಳು ಮತ್ತು ಸೊಸೆಯಂದಿರು ಊಟ ನೀಡೋದಂತೆ. ವ್ಯಾಪಾರವೇ ಆಗದಿದ್ದರೆ ಮನೆಗೆ ದುಡ್ಡು ಕೊಂಡೊಯ್ಯುವುದು ಹೇಗೆ ಅಂತ ಸಂಧ್ಯಾಬಾಯಿ ಗೋಳು ತೋಡಿಕೊಂಡಿದ್ದರು. ಆದರೆ ಸಂತೋಷದ ಸಂಗತಿಯೆಂದರೆ, ವರದಿಯನ್ನು ವೀಕ್ಷಿಸಿದ ಸಹೃದಯಿಗಳು (kind-hearted) ಆಕೆಯ ನೆರವಿಗೆ ಧಾವಿಸಿದ್ದಾರೆ. ತಾಜುದ್ದೀನ್ ಹೆಸರಿನ ಒಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು (groceries) ಸಂಧ್ಯಾಬಾಯಿಗೆ ತಂದುಕೊಟ್ಟಿದ್ದಾರೆ. 15 ಕೆಜಿ ಅಕ್ಕಿ, 2 ಕೆಜಿ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು, ಖಾರ, ಅರಿಷಿಣ, ಮಂಡಕ್ಕಿ ಮೊದಲಾದವು ಚೀಲದಲ್ಲಿವೆ ಎಂದು ಆವರು ತಾಜುದ್ದೀನ್ ಹೇಳಿದರು.

ಟಿವಿ9 ವಾಹಿನಿಯಲ್ಲಿ ಸಂಧ್ಯಾಬಾಯಿ ಕುರಿತ ವರದಿ ನೋಡಿದ ನಂತರ ಆಕೆಗೆ ಸಹಾಯ ಮಾಡುವ ಪ್ರೇರೇಪಣೆ ಆಯಿತು ಎಂದು ಹೇಳಿದ ತಾಜುದ್ದೀನ್ ಈಕೆಯಂಥ ಜನರಿಗೆ, ಕೂಲಿ ಮಾಡಿ ಬದುಕುವವರಿಗೆ ಸರ್ಕಾರರ ನೆರವು ಒದಗಿಸಬೇಕು ಅಂತ ಹೇಳಿದರು.

ತಾಜುದ್ದೀನ್​​​ಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸಿದ ಸಂಧ್ಯಾಬಾಯಿ, ಟಿವಿ9 ನಲ್ಲಿ ಸುದ್ದಿ ಬಿತ್ತರವಾದ ನಂತರ ಕೆಲವರು ಆಕೆಯಲ್ಲಿಗೆ ಬಂದು ಖರೀದಿಸಿದ್ದಾರೆ ಎಂದು ಹೇಳಿದಳು. ಮಕ್ಕಳಿಗೆ ತನ್ನ ಬಗ್ಗೆ ಪ್ರೀತಿ ಇಲ್ಲದಿದ್ದರೂ ಅವರ ಬಗ್ಗೆ ಆಕೆಗಿರುವ ಕಕ್ಕುಲಾತಿ ಆಶ್ಚರ್ಯ ಹುಟ್ಟಿಸುತ್ತದೆ.

ತಾಜುದ್ದೀನ್ ಕೊಟ್ಟಿರುವ ರೇಷನ್ ತೆಗೆದುಕೊಂಡು ಅವರಿಗೆ ಕೊಡುವುದಾಗಿ ಹೇಳಿ ಅವರು ಹೇಗಿದ್ದರೇನು, ಹೆತ್ತಿದ್ದು ಮಾತ್ರ ತಾನೇ ಅಲ್ವಾ ಎನ್ನುತ್ತಾಳೆ ಬಳ್ಳಾರಿಯಷ್ಟು ದೊಡ್ಡ ಹೃದಯದ ತಾಯಿ!

TV9 Kannada


Leave a Reply

Your email address will not be published. Required fields are marked *