ಟಿ- ಜೀವಕೋಶಗಳು ಕೊರೋನಾ ಸೋಂಕು ಹರಡುವುದನ್ನು ತಡೆಯಬಲ್ಲದೇ? ಅಧ್ಯಯನ ಹೇಳುವುದೇನು? | T cells can provide the protection against covid 19 infection says study


ಟಿ- ಜೀವಕೋಶಗಳು ಕೊರೋನಾ ಸೋಂಕು ಹರಡುವುದನ್ನು ತಡೆಯಬಲ್ಲದೇ? ಅಧ್ಯಯನ ಹೇಳುವುದೇನು?

Cold

ಸಾಮಾನ್ಯವಾಗಿ ಆಗುವ ಶೀತವನ್ನು ತಡೆಯವ  ಟಿ-ಜೀವಕೋಶಗಳು ಕೂಡ ಕೊರೋನಾ ರೋಗ ಹರಡದಂತೆ ದೇಹವನ್ನು ಕಾಪಾಡುತ್ತದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಟಿ ಜೀವಕೋಶ ಎಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತ ಕಣಗಳ ಒಂದು ವಿಧ. ಇವು ವೈರಸ್​ಗಳು ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಅದೇ ಜೀವಕೋಶಗಳು ಒಂದು ಹಂತದವರೆಗೆ ಕೊರೋನಾ ಸೋಂಕು ಹರಡುವುದನ್ನು ನಡೆಯುತ್ತದೆ ಎಂದು ನೇಚರ್​ ಕಮ್ಯನಿಕೇಷನ್​ ನಿಯತಕಾಲಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿದೆ. ಈ ಟಿ ಜೀವಕೋಶಗಳು ಸಾಮಾನ್ಯ ಶೀತದಿಂದ ಹಿಡಿದು ಕೊರೊನಾವೈರಸ್​ವರೆಗೂ ರಕ್ಷಣೆ ನೀಡುತ್ತದೆ ಎಂದು ತಿಳಿದುಬಂದಿದೆ.

ಪ್ರತೀ ಬಾರಿ  SARS-CoV-2 ಕ್ಕೆ ದೇಹವನ್ನು ಒಡ್ಡಿಕೊಂಡಾಗ  ಕೋವಿಡ್​ ಸೋಂಕು ತಗುಲುವುದಿಲ್ಲ. ಇದಕ್ಕೆ  ಕಾರಣವನ್ನು ತಿಳಿಯಲು ನಾವೂ ಪ್ರಯತ್ನಿಸುತ್ತಿದ್ದೇವೆ ಎಂದು ಇಂಪೀರಿಯಲ್​ನ ನ್ಯಾಷನಲ್​ ಹಾರ್ಟ್​ ಆ್ಯಂಡ್​ ಲಂಗ್​ ಇನ್ಸ್ಟಿಟ್ಯೂಟ್​ನ ಪ್ರಮುಖ ಲೇಖಕಿ ರಿಯಾ ಕುಂದು ತಿಳಿಸಿದ್ದಾರೆ. ಒಟ್ಟು 52 ಮಂದಿ ವ್ಯಾಕ್ಸಿನ್​ ಪಡೆಯದೇ  ಕೋವಿಡ್​ ಸೋಂಕಿತರೊಂದಿಗೆ ಇದ್ದವರನ್ನು ಅಧ್ಯಯನದಲ್ಲಿ ಒಳಪಡಿಸಲಾಗಿತ್ತು. ಅಧ್ಯಯನದಲ್ಲಿ  ಸೋಂಕಿಗೆ ಒಳಗಾದ ಜನರಿಗಿಂತ ವೈರಸ್​ ತಗುಲಿದವರ ಜತೆಗಿದ್ದವರಿಗೇ ಟಿ-ಕೋಶಗಳು ಹೆಚ್ಚಿನ ಮಟ್ಟದಲ್ಲಿವೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಹೀಗಾಗಿ ಅಧ್ಯಯನವು ಸಾಮಾನ್ಯ ಶೀತದಿಂದ ರಕ್ಷಣೆ ನೀಡುವ ಟಿ ಕೋಶಗಳು ಕೋವಿಡ್ ಸೋಂಕಿನ ವಿರುದ್ಧ ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತವೆ ಎಂಬುದಕ್ಕೆ ಇಲ್ಲಿಯವರೆಗಿನ ಸ್ಪಷ್ಟ ಪುರಾವೆಗಳು ದೊರಕಿದೆ. ಹೀಗಾಗಿ ಎಲ್ಲಾ ಬಾರಿಯೂ ಸೋಂಕು ತಗುಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಧ್ಯಯನದ ಹಿರಿಯ ಲೇಖಕ ಪ್ರೊಫೆಸರ್ ಅಜಿತ್ ಲಾಲ್ವಾನಿ ಹೇಳಿದ್ದಾರೆ.

ಮುಂದುವರೆದು ಮಾಹಿತಿ ನೀಡಿ, ಅಧ್ಯಯನದ ವರದಿ ಆಧರಿಸಿ ಲಸಿಕೆಯನ್ನು ಪಡೆಯದೇ ಇರಬೇಡಿ.  ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ರಕ್ಷಣೆ ಪೆಡೆಯಲು ವ್ಯಾಕ್ಸಿನ್​ ಸಹಾಯ ಮಾಡುತ್ತದೆ. ದೇಹದಲ್ಲಿ ಟಿ ಕೋಶಗಳು ಸದಾ ಕಾಲ ಇರುವುದರಿಂದ  ಆಂತರಿಕ ಪ್ರೊಟೀನ್​ಗಳ ಮೇಲೆ  ಕೆಂದ್ರೀಕರಿಸಿ ದೇಹಕ್ಕೆ ರಕ್ಷಣೆ ನಿಡುತ್ತದೆ. ಈ ಅಧ್ಯಯನವು ಮುಂದಿನ ಹಂತಹ ಕೋವಿಡ್​ ಲಸಿಕೆ ತಯಾರಿಕೆಗೆ ಅನುಕೂಲವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಲ್ಲೆದೆ ಟಿ ಕೋಶಗಳು  ದೇಹವನ್ನು ರೋಗಗಳಿಂದ ರಕ್ಷಿಸಲು ಪ್ರಯತ್ನಿಸುತ್ತವೆ  ಆದ್ದರಿಂದ ಈಗ ಕೊರೋನಾ, ಓಮಿಕ್ರಾನ್​ನಂತಹ ಸೋಂಕು ಹೆಚ್ಚುತ್ತಿರುವುದರಿಂದ ಬೂಸ್ಟರ್​​ ಲಸಿಕೆ ತೆಗೆದುಕೊಳ್ಳುವುದು ಉತ್ತಮ ಎನ್ನುವುದು  ವೈದ್ಯರ ಸಲಹೆ.

 

TV9 Kannada


Leave a Reply

Your email address will not be published. Required fields are marked *