ಬೆಂಗಳೂರು: ನಗರದ ಟಿ.ದಾಸರಹಳ್ಳಿ ಫ್ಲೈಓವರ್ ಸರಣಿ ಅಪಘಾತ ಉಂಟಾಗಿದೆ. ಎರಡು ಕಾರ್​ಗಳು ಹಾಗೂ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಇದರಿಂದ ಫ್ಲೈಓವರ್​ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಮೇಲ್ಸೇತುವೆ ಮೇಲೆ ನಿಂತ ಮಳೆ ನೀರಿನಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ.ನೀರು ಹೊರ ಹೋಗುವ ಮಾರ್ಗದಲ್ಲಿ ಮಣ್ಣು ತುಂಬಿಕೊಂಡು ಮುಚ್ಚಿದ್ರು ಅದನ್ನ 8ನೇ ಮೈಲಿ ABR ಟೋಲ್  ಕಂಪನಿ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗ್ತಿದೆ.

ಈಗ ಟೋಲ್ ಸಿಬ್ಬಂದಿ, ನಿಂತಿರುವ ನೀರನ್ನ ಹೊರಬಿಡಲು ಹರಸಾಹಸಪಡ್ತಿದ್ದಾರೆ. ಮುಚ್ಚಿದ ಗುಂಡಿಗಳನ್ನ ಒಪನ್ ಮಾಡಿ ನೀರು ಹೊರಬಿಡಲಾಗ್ತಿದೆ. ಘಟನೆಯಲ್ಲಿ ಎರಡು ಕಾರುಗಳು ಜಖಂ ಆಗಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತದಿಂದಾಗಿ ತುಮಕೂರು ರಸ್ತೆಯಲ್ಲಿ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.

The post ಟಿ.ದಾಸರಹಳ್ಳಿ ಫ್ಲೈಓವರ್ ಮೇಲೆ 2 ಲಾರಿ, ಕಾರುಗಳ ನಡುವೆ ಸರಣಿ ಅಪಘಾತ.. ಭಾರೀ ಟ್ರಾಫಿಕ್ ಜಾಮ್ appeared first on News First Kannada.

Source: newsfirstlive.com

Source link