ತುಮಕೂರು: ಮಾಜಿ ಸಚಿವ ಟಿ.ಬಿ ಜಯಚಂದ್ರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ ಮಾಡಿರುವ ಸೈಬರ್ ವಂಚಕರು ಹಲವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಜಯಚಂದ್ರ ಅವರಿಗೆ ಈ ಕುರಿತು ಮಾಹಿತಿ ನೀಡಿ ತಮ್ಮ ಅಧಿಕೃತ ಫೇಸ್​​ಬುಕ್​​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ನನ್ನ ಹೆಸರು, ಭಾವಚಿತ್ರವಿರುವ ನಕಲಿ ಫೇಸ್​​​ಬುಕ್​​​ ಖಾತೆಯೊಂದನ್ನು ಸೃಷ್ಟಿಸಿ ಹೊಸದಾಗಿ ಫ್ರೆಂಡ್​​ ಮನವಿ ಕಳಿಸಿ ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ಕಂಡು ಬಂದಿದೆ. ದಯವಿಟ್ಟು ಇದನ್ನು ನಿರ್ಲಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

ಜಯಚಂದ್ರ ಆಪ್ತರಿಗೆ ಹಾಗೂ ಬೆಂಬಲಿಗರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಗೆ ಸಂದೇಶ ಕಳುಹಿಸುತ್ತಿದ್ದರು. ಆ ವೇಳೆ ತುರ್ತು ಹಣದ ಅಗತ್ಯವಿದೆ. ಶೀಘ್ರವೇ ಹಣ ವಾಪಸ್​ ಕೊಡುತ್ತೇನೆ ಎಂದು ಹೇಳಿ ಹಣ ಕಳುಹಿಸುವಂತೆ ಕೇಳುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

The post ಟಿ.ಬಿ.ಜಯಚಂದ್ರ ಹೆಸರಿನಲ್ಲಿ ನಕಲಿ ಫೇಸ್​​ಬುಕ್​​ ಖಾತೆ ಸೃಷ್ಟಿಸಿ ಹಣಕ್ಕೆ ಡಿಮ್ಯಾಂಡ್ appeared first on News First Kannada.

Source: newsfirstlive.com

Source link