ಟಿ-20 ವಿಶ್ವಕಪ್​​ ಟಿಕೆಟ್​ ರೇಸ್​​​ಗಿಳಿದ ಅಶ್ವಿನ್ -7 ಸ್ಪಿನ್ನರ್​ಗಳ ಸ್ಪರ್ಧೆಯಲ್ಲಿ BCCI ಮಣೆ ಯಾರಿಗೆ?

ಟಿ-20 ವಿಶ್ವಕಪ್​​ ಟಿಕೆಟ್​ ರೇಸ್​​​ಗಿಳಿದ ಅಶ್ವಿನ್ -7 ಸ್ಪಿನ್ನರ್​ಗಳ ಸ್ಪರ್ಧೆಯಲ್ಲಿ BCCI ಮಣೆ ಯಾರಿಗೆ?

ಶ್ರೀಲಂಕಾ ಪ್ರವಾಸದಲ್ಲಿಯೇ ಸ್ಪಿನ್ನರ್​ಗಳ ಆಯ್ಕೆ ಕಗ್ಗಂಟಾಗಿದೆ. ಹೀಗಿರುವಾಗ ಚುಟುಕು ವಿಶ್ವಕಪ್​ನಲ್ಲಿ ಸ್ಪಿನ್​ ಕೋಟಾದಲ್ಲಿ ಯಾರನ್ನ ಆಯ್ಕೆ ಮಾಡಬೇಕು ಅನ್ನೋ ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯವಾಗಿ ಈ ಅಶ್ವಿನ್​ ರೇಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಪೈಪೋಟಿ ಇನ್ನಷ್ಟು ಹೆಚ್ಚಿದೆ.

ದಿನ ಉರುಳಿದಂತೆಲ್ಲಾ ಟಿ20 ವಿಶ್ವಕಪ್​​ಗೆ ಟೀಮ್​​ ಇಂಡಿಯಾದ ಪ್ರಿಡಿಕ್ಷನ್ ಚರ್ಚೆ​ ಜೋರಾಗಿದೆ. ಯಾರಿಗೆ ಮಣೆ ಹಾಕ್ತಾರೆ.? ಯಾರಿಗೆ ಕೊಕ್​ ನೀಡ್ತಾರೆ..? ಅನ್ನೋದು ಹಾಟ್​ ಸಬ್ಜೆಕ್ಟ್. ಈಗಾಗಲೇ ಸ್ಪಿನ್​​ ಕೋಟಾದಲ್ಲಿ ಸ್ಥಾನಕ್ಕೆ 7 ಮಂದಿ ಆಕಾಂಕ್ಷಿಗಳಿದ್ದಾರೆ. ಇದೀಗ ಈ ರೇಸ್​​ ಕೇರಂ ಸ್ಪಿನ್ನರ್​ ಅಶ್ವಿನ್​ ಕೂಡಾ ಎಂಟ್ರಿ ಕೊಟ್ಟಿದ್ದಾರೆ.
ಶ್ರೀಲಂಕಾ ಮತ್ತು ಇಂಗ್ಲೆಂಡ್ ಪ್ರವಾಸದ ತಂಡಗಳಲ್ಲಿ ಅಶ್ವಿನ್​ ಹೊರತುಪಡಿಸಿದ್ರೆ 7 ಮಂದಿ ಸ್ಪಿನ್ನರ್​​ಗಳಿದ್ದಾರೆ.

ಇದನ್ನೂ ಓದಿ: ಆಫ್ ಸ್ಪಿನ್ನರ್​ ಆರ್.ಅಶ್ವಿನ್​ ‘ಬ್ಯಾನ್’​​ ಆಗೋದನ್ನ ಬಿಸಿಸಿಐ ತಡೆಯಿತಾ..?

ಚಹಲ್​, ಕುಲ್ದೀಪ್, ಜಡೇಜಾ ಅನುಭವಿ​ಗಳಾಗಿದ್ರೆ, IPLನಲ್ಲಿ ಮಿಂಚಿದ ವರುಣ್ ಚಕ್ರವರ್ತಿ, ರಾಹುಲ್​ ಚಹರ್, ಕೃನಾಲ್ ಪಾಂಡ್ಯ​, ಕೆ ಗೌತಮ್​ ಈ ರೇಸ್​​​​​ನಲ್ಲಿರೋ ಯುವ ಸ್ಪಿನ್ನರ್​​ಗಳು. ಈ ಎರಡು ಸರಣಿಯಲ್ಲಿ ನೀಡೋ ಪ್ರದರ್ಶನ ವಿಶ್ವಕಪ್​ ಆಯ್ಕೆಗೆ ಮಾನದಂಡವಾಗಿದೆ. ಹೀಗಾಗಿ ಅಶ್ವಿನ್​ ಕೂಡ ವೈಟ್​ ಬಾಲ್​ ಕ್ರಿಕೆಟ್​ ಸ್ಥಾನದ ರೇಸ್​ಗೆ ಮರಳಿದಂತಾಗಿದೆ.

ಇದನ್ನೂ ಓದಿ:ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

ಅಶ್ವಿನ್​ ಕೊನೆಯದಾಗಿ ವೈಟ್​ಬಾಲ್​ ಕ್ರಿಕೆಟ್​​​ ಆಡಿದ್ದು, 2017ರಲ್ಲಿ. ಸದ್ಯಕ್ಕಂತೂ ಅಶ್ವಿನ್​​ರ ವೈಟ್​ಬಾಲ್​ ಕ್ರಿಕೆಟ್​​ ಮುಗಿದೇ ಹೋಯ್ತು ಎಂದೇ ಹೇಳಲಾಗಿತ್ತು. ಆದ್ರೆ, ಇದೀಗ ಅಶ್ವಿನ್​ ಮರು ಪ್ರವೇಶದ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಹಲವು ಮಾಜಿ ಕ್ರಿಕೆಟಿಗರು, ವಿಶ್ಲೇಷಕರುಗಳು ಕೂಡ ಅಶ್ವಿನ್​ಗೆ ಸ್ಥಾನ ನೀಡಬೇಕು ಎಂದೇ ಹೇಳ್ತಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಲಕ್ಷ್ಮಣ್​ ಶಿವರಾಮಕೃಷ್ಣನ್ ಕೂಡ ಕೇರಂ ಸ್ಪಿನ್ನರ್​​ಗೆ ಮಣೆ ಹಾಕಿ ಎಂದೇ ಹೇಳಿದ್ದಾರೆ.

‘ಅಶ್ವಿನ್​ಗೆ ಮಣೆ ಹಾಕಿ’
‘ಅಶ್ವಿನ್​ರನ್ನ ಟಿ20 ವಿಶ್ವಕಪ್​​ಗೆ ಪರಿಗಣಿಸಬೇಕು. ಅಶ್ವಿನ್​ ಒಬ್ಬ ಅದ್ಭುತ​ ಸ್ಪಿನ್ನರ್​. ಈತನ ಅನುಭವ ತಂಡಕ್ಕೆ ನೆರವಾಗುತ್ತೆ. ಎಡಗೈ ಬ್ಯಾಟ್ಸ್​ಮನ್​ಗಳಿಗೆ ಕಂಟಕವಾಗಿರುವ ಅಶ್ವಿನ್, ಸದ್ಯ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಐಪಿಎಲ್​​ ಪ್ರದರ್ಶನವೂ ಉತ್ತಮವಾಗಿದೆ’
-ಲಕ್ಷ್ಮಣ್​ ಶಿವರಾಮಕೃಷ್ಣನ್, ಮಾಜಿ ಕ್ರಿಕೆಟಿಗ

ಕೌಂಟಿಯಲ್ಲಿ ಅಶ್ವಿನ್ ಪ್ರದರ್ಶನ

  • ಇನ್ನಿಂಗ್ಸ್​ 02
  • ವಿಕೆಟ್​ 07
  • ಎಕಾನಮಿ 2.17
  • ಬೆಸ್ಟ್​​​ 6/27

T20ಯಲ್ಲಿ ಅಶ್ವಿನ್​ ಪ್ರದರ್ಶನ

  • ಪಂದ್ಯ 46
  • ವಿಕೆಟ್​ 52
  • ಎಕಾನಮಿ 6.97
  • ಬೆಸ್ಟ್​ 4/8

ಲಕ್ಷ್ಮಣ್​ ಶಿವರಾಮಕೃಷ್ಣನ್​ ಹೇಳಿದಂತೆ ಅಶ್ವಿನ್​ಗೆ ವೈಟ್​​ ಬಾಲ್​ ಕ್ರಿಕೆಟ್​​ ಆಡೋ ಸಾಮರ್ಥ್ಯವಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಲೀಡಿಂಗ್​ ವಿಕೆಟ್​ ಟೇಕರ್ ಆಗಿದ್ದು, ಐಪಿಎಲ್​ನ ಉತ್ತಮ ಪ್ರದರ್ಶನ ಇದಕ್ಕೆ ಸಾಕ್ಷಿಯಾಗಿದೆ. ಆದ್ರೆ, ಅಶ್ವಿನ್​ರನ್ನ ಆಯ್ಕೆಗೆ ಪರಿಗಣಿಸಿದ್ರೆ, ಯಾರಿಗೆ ಕೊಕ್​ ನೀಡಬೇಕು ಅನ್ನೋದು ಕುತೂಹಲಭರಿತ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್​ನಲ್ಲಿ ನಡೆಯಲ್ವಾ ಅಶ್ವಿನ್ ಮ್ಯಾಜಿಕ್? ಕಿಂಗ್ ಕೊಹ್ಲಿಗೆ ಮತ್ತೊಂದು ತಲೆನೋವು

The post ಟಿ-20 ವಿಶ್ವಕಪ್​​ ಟಿಕೆಟ್​ ರೇಸ್​​​ಗಿಳಿದ ಅಶ್ವಿನ್ -7 ಸ್ಪಿನ್ನರ್​ಗಳ ಸ್ಪರ್ಧೆಯಲ್ಲಿ BCCI ಮಣೆ ಯಾರಿಗೆ? appeared first on News First Kannada.

Source: newsfirstlive.com

Source link