ಟಿ-20 ಸರಣಿಯಲ್ಲೂ ಗೆಲುವಿನ ನಾಗಲೋಟ.. ಮೊದಲ ಪಂದ್ಯದಲ್ಲಿ ಯಾರ ಆಟ ಹೇಗಿತ್ತು..?


ಕಟ್ಟುನಿಟ್ಟಿನ ಬೌಲಿಂಗ್​ ದಾಳಿ ಮತ್ತು ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. 6 ವಿಕೆಟ್​ಗಳ ಗೆಲುವು ದಾಖಲಿಸಿದ ರೋಹಿತ್​​ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ವಿಂಡೀಸ್​, ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಆಕ್ರಮಣಕಾರಿ ಬ್ಯಾಟಿಂಗ್​​ ನಡೆಸಲು ಮುಂದಾದ ಬ್ರೆಂಡನ್​ ಕಿಂಗ್​​​​ಗೆ, ಭುವನೇಶ್ವರ್​​​​ ಗೇಟ್​​ಪಾಸ್​ ನೀಡಿ ಭರ್ಜರಿ ಕಮ್​​ಬ್ಯಾಕ್​ ಮಾಡಿದ್ರು. ಬಳಿಕ ಒಂದಾದ ಕೈಲ್​ ಮೇಯರ್​ ಮತ್ತು ನಿಕೋಲಸ್​ ಪೂರನ್​, ಸ್ಫೋಟಕ ಇನ್ನಿಂಗ್ಸ್​ ಕಟ್ಟಿದ್ರು. ಆದ್ರೆ​ 31 ರನ್​ಗಳಿಸಿದ್ದ ಮೇಯರ್​​​, ಚಹಲ್​​​​​ ಬೌಲಿಂಗ್​​​ನಲ್ಲಿ​ LBW ಆಗಿ ಹೊರನಡೆದ್ರು.

ಪೂರನ್​ ಸ್ಫೋಟಕ ಅರ್ಧಶತಕ, 158 ರನ್​​​​​​ ಗುರಿ ನೀಡಿದ ವಿಂಡೀಸ್​
ರಸ್ಟನ್​ ಚೇಸ್​ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡೆಬ್ಯೂಟೆಂಟ್​ ರವಿ ಬಿಷ್ಣೋಯ್​ ಬೌಲಿಂಗ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಅದೇ ಓವರ್​​ನಲ್ಲಿ ರಾವ್​​ಮನ್​ ಪೊವೆಲ್​ ಕೂಡ ಔಟಾದ್ರು. ಸತತ ವಿಕೆಟ್​ ಕಳೆದುಕೊಳ್ತಿದ್ರು ಸಿಕ್ಸರ್​-ಬೌಂಡರಿಗಳ ಸುರಿಮಳೆ ಗೈದ ಪೂರನ್​, ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದ್ರು. ಪೂರನ್​ಗೆ ನಾಯಕ ಪೊಲಾರ್ಡ್​ ಕೂಡ ಸಾಥ್​ ನೀಡಿದ್ರು.

ಆದ್ರೆ ಕೊನೆಯಲ್ಲಿ ಡೆತ್​ ಓವರ್​ ಸ್ಪೆಷಲಿಸ್ಟ್​ ಶಾಕ್​ ನೀಡಿದ್ರು. ಒಂದೇ ಓವರ್​​ನಲ್ಲಿ ಪೂರನ್​ ಮತ್ತು ಒಡೇನ್​ ಸ್ಮಿತ್​ ವಿಕೆಟ್​ ಪಡೆದು ಮಿಂಚಿದ್ರು. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 158 ರನ್​​ ಗಳಿಸಿತು. ಬಿಷ್ಣೋಯಿ ಮತ್ತು ಹರ್ಷಲ್​ ಪಟೇಲ್​ ತಲಾ 2 ವಿಕೆಟ್​ ಪಡೆದು ಮಿಂಚಿದ್ರು.

ರೋಹಿತ್​ ಶರ್ಮಾ ಸಿಡಿಲಬ್ಬರ, ರಸ್ಟನ್​ ಚೇಸ್​ ಆಘಾತ..!
ಕೆರಿಬಿಯನ್ನರು ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ರೋಹಿತ್​ ಶರ್ಮಾ-ಇಶಾನ್​ ಕಿಶನ್​ ಭರ್ಜರಿ ಓಪನಿಂಗ್​ ನೀಡಿದ್ರು. ಮೈದಾನದ ಮೂಲೆ ಮೂಲೆಗೂ ರೋಹಿತ್​​ ಸಿಕ್ಸರ್-ಬೌಂಡರಿಗಳ ಮೂಲಕ ರನ್​ವೇಗ ಹೆಚ್ಚಿಸಿದ್ರೆ, ಇಶಾನ್​ ರಕ್ಷಣಾತ್ಮಕ ಆಟವಾಡಿದ್ರು. ಆದ್ರೆ ಈ ಜೋಡಿಯನ್ನ ರಸ್ಟನ್ ಚೇಸ್​ ಬ್ರೇಕ್​ ಥ್ರೂ ನೀಡಿದ್ರು.

ರೋಹಿತ್​​ 40 ರನ್​ ಗಳಿಸಿ ಔಟಾದ್ರೆ, ಇಶಾನ್​ 35 ರನ್​ ಕಲೆ ಹಾಕಿ ವಿಕೆಟ್ ಒಪ್ಪಿಸಿದ್ರು. 17 ರನ್​ ಗಳಿಸಿದ ವಿರಾಟ್​ ಕೊಹ್ಲಿ ಕೂಡ ಬೇಗನೇ ಔಟಾಗಿ ನಿರಾಸೆ ಮೂಡಿಸಿದ್ರು. ಇದಾದ ಬಳಿಕ ಪಂತ್​ ಕೂಡ ಔಟಾದ್ರು. ಆರಂಭದಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟಿದ ಭಾರತ, ಮಿಡಲ್​ನಲ್ಲಿ ದಿಢೀರ್​ ಕುಸಿತ ಕಾಣ್ತು. ಆದ್ರೆ ಸೂರ್ಯಕುಮಾರ್​​- ವೆಂಕಟೇಶ್​ ಅಯ್ಯರ್​ 48 ರನ್​ಗಳ ಜೊತೆಯಾಟವಾಡಿದ್ರು. ಪರಿಣಾಮ ಭಾರತ 6 ವಿಕೆಟ್​​ಗಳಿಂದ ಗೆಲುವು ಸಾಧಿಸ್ತು.

News First Live Kannada


Leave a Reply

Your email address will not be published. Required fields are marked *