ಟಿ-20 ಸರಣಿ ಗೆದ್ದ ಭಾರತ: ಕಿವೀಸ್ ಆಟಗಾರರನ್ನ ಹೆಂಗೆಲ್ಲಾ ಬೆಂಡು ಎತ್ತಿದ್ರು ಗೊತ್ತಾ..?


ಜಾರ್ಖಂಡ್‌ನ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್​​ ಭರ್ಜರಿ ಗೆಲವು ಸಾಧಿಸಿದೆ. ನ್ಯೂಜಿಲೆಂಡ್​​ ನೀಡಿದ ಟಾರ್ಗೆಟ್​​ ಬೆನ್ನತ್ತಿದ ಟೀಂ ಇಂಡಿಯಾ ಕೆ.ಎಲ್​​ ರಾಹುಲ್​​ ಮತ್ತು ನಾಯಕ ರೋಹಿತ್​​ ಶರ್ಮಾ ಅವರ ಅರ್ಧಶತಕದ ನೆರವಿನಿಂದ 17.1 ಓವರ್​​ನಲ್ಲಿ 154 ರನ್​​ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಟಿ-20 ಸರಣಿಯನ್ನ ತನ್ನದಾಗಿಸಿಕೊಂಡಿದೆ.

2ನೇ ಪಂದ್ಯದಲ್ಲೂ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಕಿವೀಸ್​, ಸ್ಫೋಟಕ ಆರಂಭ​​​​ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್​ ಗಪ್ಟಿಲ್​ ಮತ್ತು ಡ್ಯಾರಿಲ್​ ಮಿಚೆಲ್, ಟೀಮ್​ ಇಂಡಿಯಾ ಬೌಲರ್​​ಗಳಿಗೆ ಹಿಗ್ಗಾಮುಗ್ಗಾ ದಂಡಿಸಿದ್ರು. ಪೋರ್-ಸಿಕ್ಸ್​ಗಳ ಮೂಲಕ ಅಬ್ಬರಿಸುತ್ತಿದ್ದ ಈ ಜೋಡಿಯ ಜೊತೆಯಾಟಕ್ಕೆ ದೀಪಕ್​ ಚಹರ್​​ ಬ್ರೇಕ್ ಹಾಕಿದ್ರು. ಅತ್ತ 31 ರನ್​ ಗಳಿಸಿ ಗಪ್ಟಿಲ್​​ ಔಟಾದ್ರೆ, ಬಳಿಕ ಕಣಕ್ಕಿಳಿದ ಮಾರ್ಕ್​ ಚಾಪ್​​ಮನ್​ 3 ಬೌಂಡರಿ ಸಿಡಿಸಿ ಅಕ್ಷರ್​ ಪಟೇಲ್​​ಗೆ​ ವಿಕೆಟ್​ ಒಪ್ಪಿಸಿ ಹೊರ ನಡೆದರು.

ಮಿಚೆಲ್ 31ರನ್ ​​ಗಳಿಸಿ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟುತ್ತಿದ್ರು. ಆದ್ರೆ ಈ ವೇಳೆ ಬೌಲರ್​​ಗಳು ಕಿವೀಸ್​​ ಮೇಲೆ ಮಾರಕ ದಾಳಿ ನಡೆಸಿದ್ರು. ಮಿಚೆಲ್ ಆಟಕ್ಕೆ ಡೆಬ್ಯುಟೆಂಟ್​ ಹರ್ಷಲ್​ ಪಟೇಲ್​ ಬ್ರೇಕ್​ ಹಾಕಿದ್ರೆ, ಸೀಪರ್ಟ್​​ರನ್ನ ಅಶ್ವಿನ್​ ಹೊರಹಾಕಿದ್ರು. ಇನ್ನು 1ರನ್​​ ಗಳಿಸಿದ್ದಾಗ ಜೀವದಾನ ಪಡೆದ ಗ್ಲೇನ್​ ಫಿಲಿಫ್ಸ್​, 3ಸಿಕ್ಸ್​ಗಳ ನೆರವಿನಿಂದ 34ರನ್​ ಕೊಡುಗೆ ನೀಡಿದ್ರು. ಈ ವೇಳೆ ಹರ್ಷಲ್​​ ಅಟ್ಯಾಕಿಂಗ್​​​ ಬೌಲಿಂಗ್​​ಗೆ ಫಿಲಿಪ್ಸ್​ ಹೊರ ನಡೆದ್ರು. ಇದರ ಬೆನ್ನಲ್ಲೇ ನಿಶಾಮ್​​ ಕೂಡ ಔಟಾದ್ರು. ಅಂತಿಮವಾಗಿ ಕಿವೀಸ್, 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್​ ಕಲೆಹಾಕ್ತು.

ನ್ಯೂಜಿಲೆಂಡ್​ ನೀಡಿದ 154 ರನ್​​ಗಳ​ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ, ಸಾಲಿಡ್​​ ಓಪನಿಂಗ್​​ ಪಡೆಯಿತು. ರಾಹುಲ್​-ರೋಹಿತ್ ಕೂಡ ಕಿವೀಸ್​​ ಬೌಲರ್​​ಗಳಿಗೆ ಚೆನ್ನಾಗಿಯೇ ಚಚ್ಚಿದರು. ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದ ಟೀಮ್​ ಇಂಡಿಯಾ ಓಪನರ್ಸ್, ಪವರ್​​ ಪ್ಲೇನಲ್ಲಿ 45 ರನ್​ಗಳ ಕೊಡುಗೆ ನೀಡಿದ್ರು. ಇದರ ಬಳಿಕವೂ ಅಬ್ಬರಿಸಿದ ಈ ಜೋಡಿ, 10 ಓವರ್​​​​​ಗಳಲ್ಲಿ 79 ರನ್​ ಕಲೆ ಹಾಕಿ, ಕಿವೀಸ್​​ ಬೌಲರ್​ಗಳಿಗೆ ಕಂಟಕವಾಗಿ ಪರಿಣಮಿಸಿದ್ರು.

ನಾಯಕ-ಉಪನಾಯಕನ ಆರ್ಭಟಕ್ಕೆ ಬೆಚ್ಚಿದ ಬೌಲರ್​​​ಗಳು, ಹಿಡಿತ ಸಾಧಿಸುವಲ್ಲಿ ವಿಫಲರಾದ್ರು. ಹೀಗಾಗಿ ಈ ಜೋಡಿ​ ಶತಕದ ಜೊತೆಯಾಟವಾಡ್ತು. ಈ ವೇಳೆ​ ತಮ್ಮ 16ನೇ ಅರ್ಧಶತಕ ಮತ್ತು ರೋಹಿತ್​ ತಮ್ಮ 25ನೇ ಅರ್ಧಶತಕ ಸಿಡಿಸಿದ್ರು. ಆದ್ರೆ ಈ ಜೋಡಿಯನ್ನ ಟಿಮ್​ ಸೌಥಿ ಬೇರ್ಪಡಿಸಿದ್ರು. ಇವರ ಹಿಂದೆಯೇ ಸೂರ್ಯ ಕುಮಾರ್​ ಕೂಡ ಔಟಾದ್ರು. ಕೊನೆಗೆ ವೆಂಕಟೇಶ್​ ಅಯ್ಯರ್, ರಿಷಭ್​​ ಪಂತ್​ 17.2 ಓವರ್​​ಗಳಲ್ಲೇ ತಂಡಕ್ಕೆ ಗೆಲುವು ತಂದುಕೊಟ್ರು. ಆ ಮೂಲಕ 7 ವಿಕೆಟ್​ಗಳಿಂದ ಭರ್ಜರಿಯಾಗಿ ಗೆಲ್ಲೋದ್ರೊಂದಿಗೆ ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ.

The post ಟಿ-20 ಸರಣಿ ಗೆದ್ದ ಭಾರತ: ಕಿವೀಸ್ ಆಟಗಾರರನ್ನ ಹೆಂಗೆಲ್ಲಾ ಬೆಂಡು ಎತ್ತಿದ್ರು ಗೊತ್ತಾ..? appeared first on News First Kannada.

News First Live Kannada


Leave a Reply

Your email address will not be published. Required fields are marked *