ಟಿ20 ಕೊನೇ ಪಂದ್ಯ; ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆ; ಯಾಕೆ?


ಟಿ20 ವಿಶ್ವಕಪ್​ನಲ್ಲಿ ಕೊನೆಯ ಬಾರಿ ನಾಯಕನಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ, ಅಂತಿಮ ಪಂದ್ಯದಲ್ಲಿ ಬ್ಯಾಟ್ ಮಾಡದಿರುವ ಬಗ್ಗೆ ಕಾರಣ ಬಹಿರಂಗಗೊಂಡಿದೆ. ಈ ಕಾರಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅಂದ್ಹಾಗೆ ಪಂದ್ಯದ ಬಳಿಕ ನೀವೇಕೆ ನಾಯಕನಾಗಿ ಕೊನೆಯ ಪಂದ್ಯವಾಡುತ್ತಿದ್ದರೂ ಬ್ಯಾಟಿಂಗ್​​ಗೆ ಬರಲಿಲ್ಲ ಎಂದು ವಿರಾಟ್ ಕೊಹ್ಲಿಯನ್ನ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ವಿರಾಟ್​​ ಕೊಹ್ಲಿ, ನಾನು ನಾಯಕನಾಗುವ ಮೊದಲು ಆಟಗಾರ. ಯಾವಾಗಲೂ ಯಾವುದಾದರೂ ಒಂದು ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

ಈ ಬಾರಿಯ ವಿಶ್ವಕಪ್​ನಲ್ಲಿ ಸೂರ್ಯ ಕುಮಾರ್ ಉತ್ತಮವಾಗಿ ಆಡುವ ಅವಕಾಶ ದೊರೆತಿರಲಿಲ್ಲ. ಇದು ಬೇರೆ ಕೊನೆಯ ಪಂದ್ಯ. ಹಾಗಾಗಿ ಸೂರ್ಯಕುಮಾರ್ ಯಾದವ್​ಗೆ ಇದು ಸ್ಮರಣೀಯ ಇನಿಂಗ್ಸ್​ ಆಗಲಿ ಎಂದು ಭಾವಿಸಿದೆ. ಹೀಗಾಗಿ ನಾನು ಸೂರ್ಯಕುಮಾರ್​ರನ್ನ ಬ್ಯಾಟಿಂಗ್​ಗೆ ಕಳುಹಿಸಿದೆ ಎಂದು ಕೊಹ್ಲಿ ತಿಳಿಸಿದರು. ಕೊಹ್ಲಿಯ ಈ ನಡೆಯ ಬಗ್ಗೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಗುಂಡಿಕ್ಕಿ ಹತ್ಯೆ ವದಂತಿ; ಇದು ಸುಳ್ಳು ಎಂದು ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

News First Live Kannada


Leave a Reply

Your email address will not be published. Required fields are marked *